

ಕೊಪ್ಪಳ: ನಾಯಿ ಇನ್ನೊಂದು ನಾಯಿ ಜೀವ ಉಳಿಸಲು ರಕ್ತದಾನ ಮಾಡಿರುವ ಅಪರೂಪದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಸಾಕಿದ ನಾಯಿಯೊಂದು ಮತ್ತೊಂದು ನಾಯಿಗೆ ರಕ್ತದಾನ ಮಾಡುವ ಮೂಲಕ ಗಮನ ಸೆಳೆದಿದೆ.
ನಗರದ ಪಶು ಚಿಕಿತ್ಸಾಲಯದಲ್ಲಿ, ಅನಾರೋಗ್ಯದಿಂದ ಬಳಲುತ್ತಿದ್ದ, ಹಿಮೋಗ್ಲೊಬಿನ್ ಶಕ್ತಿ ಮೂರಕ್ಕೆ ತಲುಪಿದ್ದ ನಗರದ್ದೇ ಆದ 9 ವರ್ಷದ ಲ್ಯಾಬರ್ ಡಾಗ್ ನಾಯಿಗೆ ರಕ್ತದ ಅತ್ಯವಶ್ಯಕವಾಗಿತ್ತು. ಇದನ್ನು ಅರಿತ ವೈದ್ಯರು ನಗರದ ಮೂರು ನಾಯಿಗಳ ಮಾಲೀಕರ ವಿಳಾಸಗಳನ್ನು ಸಂಪರ್ಕಿಸಿ ಕರೆಸಿ ಅವುಗಳ ರಕ್ತದ ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಿದರು.
ಪ್ರೊ. ಬಸವರಾಜ್ ಪೂಜಾರ್ ಅವರ 3 ವರ್ಷದ ಡಾಬರ್ಮ್ಯಾನ್ ತಳಿಯ ರಕ್ತವು ಹೊಂದಿಕೆಯಾಗಿದ್ದು ವೈದ್ಯಕೀಯ ನಿಯಮಾನುಸಾರ ಇದರ 300 ಎಮ್ಎಲ್ ರಕ್ತವನ್ನು ಪರೀಕ್ಷಿಸಿದ ಬಳಿಕ ಕುತ್ತಿಗೆಯ ಭಾಗದಿಂದ ರಕ್ತ ಪಡೆದು ದೈಹಿಕವಾಗಿ ನಿತ್ರಾಣವಾಗಿದ್ದ ಲ್ಯಾಬರ್ ಡಾಗ್ಗೆ ನೀಡಲಾಗಿದೆ.