More

    ಪೋಲಿ ಶಿಕ್ಷಕನ ‘ಕಿಸ್​’ ಪುರಾಣ ವೈರಲ್​! ಪ್ಲೀಸ್,​ ಮುತ್ತು ಕೊಡೇ… ಎಂದು ವಿದ್ಯಾರ್ಥಿನಿಗೆ ಮೆಸೇಜ್​ ಮಾಡಿ ಪೀಡಿಸುತ್ತಿದ್ದ…

    ಹಾವೇರಿ: ಇಲ್ಲೊಬ್ಬ ಶಿಕ್ಷಕ ‘ಮುತ್ತು ಕೊಡು, ಪ್ಲೀಸ್​ ಕಿಸ್​ ಮಾಡೇ..’ ಎಂದು ವಿದ್ಯಾರ್ಥಿನಿಗೆ ಪೀಡಿಸುತ್ತಾ ಮೊಬೈಲ್​ಗೆ ಕಳುಹಿಸಿದ್ದ ಅಶ್ಲೀಲ ಮೆಸೇಜ್​ಗಳು ವೈರಲ್​ ಆಗಿವೆ.

    ಪ್ರತಿನಿತ್ಯ ವಿದ್ಯಾರ್ಥಿನಿಗೆ ಮಾತೆತ್ತಿದರೆ ಕಿಸ್ ಕೊಡು ಎಂದು ಸಂದೇಶ ಕಳುಹಿಸುತ್ತಿದ್ದ ಪೋಲಿ ಶಿಕ್ಷಕನ ವಿರುದ್ಧ ಗ್ರಾಮಸ್ಥರು ಆಕ್ರೋಶ ಪ್ರತಿಭಟನೆ ನಡೆಸಿದ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡದಲ್ಲಿ ಸಂಭವಿಸಿದೆ. ದೇವರಗುಡ್ಡದ ಹೈಸ್ಕೂಲ್​ನ ಶಿಕ್ಷಕ ಮಲ್ಲಪ್ಪ ತಳವಾರ ಎಂಬಾತ ಕಳೆದ ವರ್ಷ ಆನ್​ಲೈನ್​ ಕ್ಲಾಸ್​ ನೆಪದಲ್ಲಿ ವಿದ್ಯಾರ್ಥಿನಿಯ ಮೊಬೈಲ್​ ನಂಬರ್​ ಪಡೆದಿದ್ದ. ಆನ್​ಲೈನ್​ ಪಾಠ ಮಾಡುವ ನೆಪದಲ್ಲಿ ಪ್ರತಿನಿತ್ಯ ಚಾಟ್ ಮಾಡುತ್ತಿದ್ದ ಶಿಕ್ಷಕ, ಮಾತೆತ್ತಿದರೆ ಕಿಸ್ ಕೊಡು ಎಂದು ಪೀಡಿಸುತ್ತಿದ್ದ. ಈತ ಮಾಡಿರುವ ಚಾಟಿಂಗ್​ನ ಸ್ಕ್ರೀನ್ ಶಾರ್ಟ್​ಗಳು ‘ದಿಗ್ವಿಜಯ ನ್ಯೂಸ್’ಗೆ ಲಭ್ಯವಾಗಿದೆ.

    ಪೋಲಿ ಶಿಕ್ಷಕನ 'ಕಿಸ್​' ಪುರಾಣ ವೈರಲ್​! ಪ್ಲೀಸ್,​ ಮುತ್ತು ಕೊಡೇ... ಎಂದು ವಿದ್ಯಾರ್ಥಿನಿಗೆ ಮೆಸೇಜ್​ ಮಾಡಿ ಪೀಡಿಸುತ್ತಿದ್ದ...

    ವಿದ್ಯಾರ್ಥಿನಿ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದ ಶಿಕ್ಷಕನ್ನು ಬಂಧಿಸಬೇಕು. ಕೆಲಸದಿಂದ ಅಮಾನತು ಮಾಡಬೇಕು ಎಂದು ಆಗ್ರಹಿಸಿ ಬುಧವಾರ ಬೆಳಗ್ಗೆ ಗ್ರಾಮಸ್ಥರು ಶಾಲೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ, ಶಾಲೆಗೆ ಬೀಗ ಜಡಿದು ಆಕ್ರೋಶ ಹೊರ ಹಾಕಿದ್ದಾರೆ. ರಾಣೇಬೆನ್ನೂರು ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​, ಹಾವೇರಿ)

    ಯಲಹಂಕ ಶಾಸಕ ವಿಶ್ವನಾಥ್​ ಹತ್ಯೆಗೆ ಕಾಂಗ್ರೆಸ್​ ಮುಖಂಡ ಸ್ಕೆಚ್? ಸಿಸಿಬಿ ಕೈಗೆ ಸಿಕ್ಕಿದೆ ಮಹತ್ವದ ವಿಡಿಯೋ

    ಸ್ಕೂಟಿ ನಂಬರ್​ ಪ್ಲೇಟ್​ ಮೇಲೆ ‘SEX’, ಮುಜುಗರಕ್ಕೀಡಾದ ಯುವತಿ ಇದರ ಸಹವಾಸವೇ ಬೇಡ ಅಂತ ಮೂಲೆಗಿಟ್ಟಳು

    ವಿವಾದದ ಸುಳಿಯಲ್ಲಿ ‘ಗರುಡ ಗಮನ ವೃಷಭ ವಾಹನ’ ಸಿನಿಮಾ: ಮಾದಪ್ಪ ಭಕ್ತರಿಂದ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts