More

    ಕೈ-ಕಾಲು ಕಟ್ಟಿದ ಸ್ಥಿತಿಯಲ್ಲಿ ನಿರ್ಜನ ಪ್ರದೇಶದಲ್ಲಿ ಕಾಲೇಜು ವಿದ್ಯಾರ್ಥಿನಿ ಪತ್ತೆ..!

    ವಿಜಯವಾಡ: ದುಷ್ಕರ್ಮಿಗಳು ಪದವಿ ವಿದ್ಯಾರ್ಥಿನಿಯ ಕೈಕಾಲು ಕಟ್ಟಿ ನಿರ್ಜನ ಪ್ರದೇಶವೊಂದರಲ್ಲಿ ಎಸೆದು ಹೋಗಿರುವ ಆತಂಕಕಾರಿ ಘಟನೆ ಆಂಧ್ರ ಪ್ರದೇಶದ ವಿಜಯನಗರಂ ಜಿಲ್ಲೆಯಲ್ಲಿ ನಡೆದಿದೆ.

    ಥೇರ್ಲಂ ಪೊಲೀಸ್​ ಠಾಣೆಯ ಸಮೀಪವಿದ್ದ ನಿರ್ಜನ ಪ್ರದೇಶದಲ್ಲಿ ಪ್ರಜ್ಞೆಯಿಲ್ಲದೆ ಬಿದ್ದಿದ್ದ ವಿದ್ಯಾರ್ಥಿನಿಯನ್ನು ನೋಡಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರು.

    ಇದನ್ನೂ ಓದಿರಿ: ಗಂಡನ ಮನೆಯಲ್ಲಿ ನವವಿವಾಹಿತೆ ಆತ್ಮಹತ್ಯೆ! ಮದ್ವೆ ಆದ 2 ತಿಂಗಳಿಗೆ ಸಾವಿನ ಮನೆಯ ಕದ ತಟ್ಟಿದ್ದೇಕೆ?

    ಸದ್ಯ ವಿದ್ಯಾರ್ಥಿನಿ ಕೋಮಾದಲ್ಲಿದ್ದು, ಆಕೆಯನ್ನು ಥೇರ್ಲಂ ವಲಯದ ಚಾರ್ಲಾ ಗ್ರಾಮದ ನಿವಾಸಿ ರಮಾ ಎಂದು ಗುರುತಿಸಲಾಗಿದೆ. ವಿದ್ಯಾರ್ಥಿನಿಯ ಮಾಹಿತಿಯನ್ನು ಆಕೆಯ ತಂದೆ-ತಾಯಿಗೆ ವಿವರಿಸಲಾಗಿದೆ.

    ರಮಾ ವಿಜಯನಗರ ಕಾಲೇಜಿನ ಪದವಿ ವಿದ್ಯಾರ್ಥಿನಿ. ಕೈಕಾಲು ಕಟ್ಟಿ ನಿರ್ಜನ ಪ್ರದೇಶದಲ್ಲಿ ಎಸೆದಿದ್ದ ಸ್ಥಿತಿಯಲ್ಲಿ ಭಾನುವಾರ ಪತ್ತೆಯಾಗಿದ್ದಳು. ಈ ಕೃತ್ಯವನ್ನು ಯಾರು ಮಾಡಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಸದ್ಯ ವಿದ್ಯಾರ್ಥಿನಿ ಕೋಮಾದಲ್ಲಿರುವುದರಿಂದ ಆಕೆ ಎಚ್ಚರಗೊಂಡು ಮಾಹಿತಿ ನೀಡಿದರೆ ಆರೋಪಿಗಳ ಬಂಧನಕ್ಕೆ ಸಹಾಯವಾಗಲಿದೆ.

    ಘಟನಾ ಸಂಬಂಧ ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. (ಏಜೆನ್ಸೀಸ್​)

    ಗುಜರಾತ್​ ಸ್ಥಳೀಯ ಚುನಾವಣೆಯ ಮತಎಣಿಕೆ: ಭರ್ಜರಿ ಮುನ್ನಡೆ ಸಾಧಿಸಿದ ಬಿಜೆಪಿ, ಕಾಂಗ್ರೆಸ್​ ಕಂಗಾಲು!

    ಹಸು ಸಗಣಿ ರಕ್ಷಣೆಗೆ ಸಿಸಿಟಿವಿ, ರಕ್ಷಣಾ ಸಿಬ್ಬಂದಿ ಕಣ್ಗಾವಲು: ಕಾರಣ ಕೇಳಿದ್ರೆ ಹುಬ್ಬೇರಿಸೋದು ಖಂಡಿತ!

    ಹುಬ್ಬಳ್ಳಿಯಲ್ಲಿ ರಾಬರ್ಟ್; ಚಪ್ಪಲಿ ಬದಿಗಿಟ್ಟು ಮಾತನಾಡಿದ ದರ್ಶನ್..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts