

ಕೋಟ: ಚಿತ್ರಪಾಡಿ ಈಶಲಾಸ್ಯ ನಾಟ್ಯಾಲಯದಿಂದ ನೃತ್ಯಾಂಜಲಿ ಕಾರ್ಯಕ್ರಮ ಸಾಲಿಗ್ರಾಮದ ಗಿರಿಜಾ ಕಲ್ಯಾಣ ಮಂಟಪದಲ್ಲಿ ಜರುಗಿತು. ನೃತ್ಯಗುರು ಸುಧೀರ್ ರಾವ್ ಕೊಡವೂರು ಉದ್ಘಾಟಿಸಿದರು. ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನ ಆಡಳಿತ ಮಂಡಳಿ ಸದಸ್ಯ ಅನಂತ ಪದ್ಮನಾಭ ಐತಾಳ ಅಧ್ಯಕ್ಷತೆ ವಹಿಸಿದ್ದರು. ಸುಧೀರ್ ರಾವ್ ಕೊಡವೂರುಗೆ ಗುರುವಂದನೆ ಸಲ್ಲಿಸಲಾಯಿತು. ಕಾರ್ಕಡ ಗೆಳೆಯರ ಬಳಗ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ಸಾಂಸ್ಕೃತಿಕ ಚಿಂತಕಿ ಪ್ರೇಮಾ ಶೆಟ್ಟಿ ಉಪಸ್ಥಿತರಿದ್ದರು. ಈಶ್ಯಲಾಸ್ಯ ನಾಟ್ಯಾಲಯ ಮುಖ್ಯಸ್ಥೆ ಅಮೃತ ವೆಂಕಟೇಶ ಮಯ್ಯ ಸಂಯೋಜಿಸಿದ್ದರು.
ಮಂಜುನಾಥ ಉಪಾಧ್ಯ ಸ್ವಾಗತಿಸಿದರು. ರಾಜ ಪಾರಂಪಳ್ಳಿ ವಂದಿಸಿದರು. ಈಶಲಾಸ್ಯ ತಂಡದ ವನಿತಾ ಉಪಾಧ್ಯ ನಿರ್ವಹಿಸಿದರು. ಡಾ.ಸ್ವಾತಿ ಉಪಾಧ್ಯ ಕಾರ್ಯಕ್ರಮ ನಿರೂಪಿಸಿದರು.