ಬೀಗಾರ ರಸ್ತೆಯಂಚಿನಲ್ಲಿ ಬಿರುಕು

A crack in the Begara road
Published on

ಯಲ್ಲಾಪುರ: ತಾಲೂಕಿನ ವಜ್ರಳ್ಳಿಯ ಗ್ರಾಪಂ ವ್ಯಾಪ್ತಿಯ ಬೀಗಾರ ಮುಖ್ಯ ರಸ್ತೆಯಂಚಿನಲ್ಲಿ ಬಿರುಕು ಬಿಟ್ಟಿದೆ. ಇದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಬೀಗಾರಿನ ಶಿವ ಗುರೂಜಿ ಅವರ ಮನೆಯ ಮೇಲ್ಭಾಗದ ರಸ್ತೆಯಂಚಿನಲ್ಲಿ ನಿರಂತರ ಮಳೆಯಿಂದ ಬಿರುಕು ಕಾಣಿಸಿದೆ.

ಎರಡು ವರ್ಷಗಳ ಹಿಂದೆ ಜೋರಾದ ಮಳೆಯಿಂದ ಇದೇ ಸ್ಥಳದಲ್ಲಿ ರಸ್ತೆ ಕುಸಿದು ಸಂಪರ್ಕ ಕಡಿತಗೊಂಡಿತ್ತು.

ಈ ರಸ್ತೆಯನ್ನು ಸಿಸಿ ರಸ್ತೆಯಾಗಿ ಮರು ನಿರ್ಮಾಣ ಮಾಡಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಮತ್ತೆ ಈಗ ಅದೇ ಸ್ಥಳದಲ್ಲಿ ರಸ್ತೆ ಕುಸಿಯುವ ಅಪಾಯದೊಂದಿಗೆ ಸ್ಥಳೀಯ ನಿವಾಸಿಗಳಿಗೆ ಆತಂಕಕ್ಕೆ ಕಾರಣವಾಗಿದೆ.

ಗುಡ್ಡ ಕುಸಿತ: ವಜ್ರಳ್ಳಿ ಪಂಚಾಯಿತಿ ವ್ಯಾಪ್ತಿಯ ಹೊನ್ನಗದ್ದೆ ಗ್ರಾಮದ ಗಿಡಗಾರಿ ಬಳಿ ಶುಕ್ರವಾರ ರಸ್ತೆ ಪಕ್ಕದ ಗುಡ್ಡ ಕುಸಿತವಾಗಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net