ಆಯತಪ್ಪಿ ತೋಡಿನಲ್ಲಿ ಬಿದ್ದ ಆಕಳು ರಕ್ಷಣೆ...

Cow
Published on

ಉಡುಪಿ: ಕೊಳಚೆ ನೀರು ಹರಿಯುವ ಆಳದ ತೋಡಿನಲ್ಲಿ ಬಿದ್ದಿದ್ದ ಆಕಳನ್ನು ಸಮಾಜ ಸೇವಕ ನಿತ್ಯಾನಂದ ಒಳಕಾಡು ಹಾಗೂ ಆಟೋ ಚಾಲಕರು ಜೂನ್​ 19ರಂದು ರಕ್ಷಿಸಿದ್ದಾರೆ.

ಕಲ್ಸಂಕ ಸರ್ಕಲ್​ ಸಮೀಪದ ಇಂದ್ರಾಣಿ ನದಿ ದಂಡೆಯ ಮೇಲೆ ಬೆಳೆದಿದ್ದ ಹುಲ್ಲು ಮೇಯುತ್ತಿದ್ದ ಆಕಳು, ಆಯತಪ್ಪಿ ತೋಡಿನಲ್ಲಿ ಬಿದ್ದಿದೆ. ಮೇಲೇರಿ ಬರಲು ಎಷ್ಟೇ ಪ್ರಯತ್ನಿಸಿದರೂ ಆಗುತ್ತಿರಲಿಲ್ಲ. ಹೀಗಾಗಿ ತೋಡಿನಲ್ಲಿಯೇ ನಡೆದು ಬಂದು ರಾಜಾಂಗಣದ ಬಳಿ ಯಾತ್ರಿಕರ ವಾಹನ ನಿಲುಗಡೆ ಸ್ಥಳದಲ್ಲಿ ಕೊಳಚೆ ನೀರು ಹರಿಯುವ ಕಾಲುವೆಗೆ ಬಂದಿದೆ. ಅಲ್ಲಿಯೂ ಮೇಲೆ ಹತ್ತಲಾಗದೆ ಕೂಗತೊಡಗಿತ್ತು.

ಅಸಹಾಯಕ ಸ್ಥಿತಿಯಲ್ಲಿ ಒದ್ದಾಡುತ್ತಿದ್ದ ಆಕಳನ್ನು ಗಮನಿಸಿದ ಸ್ಥಳೀಯರಾದ ಅಶೋಕ ಪೂಜಾರಿ ಎಂಬವರು ಸಮಾಜ ಸೇವಕ ಒಳಕಾಡು ಅವರ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅವರು, ಆಟೋ ಚಾಲಕರ ನೆರವಿನಲ್ಲಿ ಹಗ್ಗದ ಸಹಾಯದಿಂದ ಆಕಳನ್ನು ಮೇಲಕ್ಕೆತ್ತಿ ರಕ್ಷಿಸಿದರು.

ಉಡುಪಿ ಕಲ್ಸಂಕ ಸರ್ಕಲ್​ ಸಮೀಪದ ತೋಡಿನಲ್ಲಿ ಬಿದ್ದಿದ್ದ ಆಕಳು ರಕ್ಷಣೆ, Cow, fell, Ditch, Kalsanka, Circle, Udupi, Rescue,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net