

ಕೊಪ್ಪಳ: ಬಿಜೆಪಿ ಮುಖಂಡರು ಯಾರಾದ್ರೂ ಸತ್ತರೆ ಕಾಂಗ್ರೆಸ್ನಿಂದ 1 ಕೋಟಿ ರೂಪಾಯಿ ಪರಿಹಾರ ಕೊಡ್ತೀವಿ... ಎಂದು ಕಾಂಗ್ರೆಸ್ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು.
ಉತ್ತರ ಪ್ರದೇಶದಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಸಚಿವ ಅಜಯ್ ಕುಮಾರ ಮಿಶ್ರಾ ಅವರ ಪುತ್ರನ ಕಾರು ಹರಿದು 8 ಜನರ ಸಾವಿಗೆ ಕಾರಣವಾದ ಪ್ರಕರಣವನ್ನ ಖಂಡಿಸಿ ಕೊಪ್ಪಳದ ಕುಷ್ಟಗಿಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಭಾಷಣ ಮಾಡಿದ ಬಯ್ಯಾಪೂರ, ಮೃತ ರೈತರಿಗೆ ಕೇವಲ 45 ಲಕ್ಷ ರೂ. ಪರಿಹಾರ ಕೊಟ್ಟಿದ್ದಾರೆ. ಸಂಸದರ ಮಗ ಕಾರು ಹಾಯಿಸಿ ರೈತರನ್ನು ಸಾಯಿಸಿದ್ರೂ ಯಾರೂ ಮಾತನಾಡ್ತಿಲ್ಲ. ಬಿಜೆಪಿಯ ಮುಖಂಡರು ಯಾರಾದ್ರೂ ಸತ್ರೆ ಕಾಂಗ್ರೆಸ್ನಿಂದ 1 ಕೋಟಿ ರೂಪಾಯಿ ಪರಿಹಾರ ಕೊಡ್ತೀವಿ ಎಂದರು.
ಬಿಜೆಪಿ ಈ ದೇಶದಿಂದ ತೊಲಗಬೇಕು, ಅಲ್ಲಿಯವರೆಗೂ ನಮ್ಮ ಹೋರಾಟ ನಡೆಯಲಿದೆ. ಬಿಜೆಪಿ ಅಣತಿಯಂತೆ ಪೊಲೀಸರು ನಮ್ಮ ರಾಷ್ಟ್ರೀಯ ನಾಯಕಿ ಪ್ರಿಯಾಂಕ ಗಾಂಧಿ ಅವರನ್ನ ಕೂಡಿ ಹಾಕಿದ್ದಾರೆ. ಕಾಂಗ್ರೆಸ್ ಪಕ್ಷದವರು ಮಾತ್ರವಲ್ಲ, ಜನರೂ ಬಿಜೆಪಿಯನ್ನು ಕಿತ್ತೊಗೆಯಲು ಹೋರಾಟ ಮಾಡಬೇಕಿದೆ ಎಂದು ಬಯ್ಯಾಪೂರ ಕರೆ ನೀಡಿದರು.