

ಬೈಂದೂರು: ಕುಂದಾಪ್ರ ಕನ್ನಡವನ್ನು ಉಳಿಸಿ ಬೆಳಸಲು ಅಧ್ಯಯನ ಪೀಠದ ಮೂಲಕ ಸರ್ಕಾರದ ಸ್ಪಂದನೆ ದೊರೆತಿದೆ. ಭಾಷೆಯ ಉಳಿವಿಗಾಗಿ ಒಗ್ಗೂಡಿಸುವ ಮನೋಭಾವನೆ ಮೂಲಕ ನಾವೆಲ್ಲರೂ ಒಂದಾಗಬೇಕು ಎಂದು ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಅಧ್ಯಕ್ಷ ಕೆ.ಜಯಪ್ರಕಾಶ ಹೆಗ್ಡೆ ಹೇಳಿದರು.
ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ವತಿಯಿಂದ ಜಾಗತಿಕ ಕುಂದಗನ್ನಡಿಗರನ್ನು ಒಗ್ಗೂಡಿಸಿ ಅಂರ್ತಜಾಲದ ವರ್ಚುವಲ್ ಮೂಲಕ ನಡೆದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯಲ್ಲಿ ಮಾತನಾಡಿದರು.
ಶಾಸಕ ಗುರುರಾಜ ಗಂಟಿಹೊಳೆ ವಾತನಾಡಿ, ಬೈಂದೂರು ಅಭಿವೃದ್ಧಿ ಮತ್ತು ಕುಂದಾಪ್ರ ಕನ್ನಡದ ಬೆಳವಣಿಗೆಯಲ್ಲಿ ಸದಾ ಒಮ್ಮತದ ಹೋರಾಟವಿದೆ. ಎಲ್ಲವನ್ನು ಮೀರಿ ಎತ್ತರಕ್ಕೆ ಬೆಳೆಯುವ ಶಕ್ತಿ ಕುಂದಾಪ್ರ ಕನ್ನಡ ಭಾಷೆಯಾಗಿದೆ ಎಂದರು.
ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಪ್ ಇದರ ಸ್ಥಾಪಕಾಧ್ಯಕ್ಷ ಸಾಧನ್‌ದಾಸ್ ವಾತನಾಡಿದರು. ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ಉದ್ಘಾಟಿಸಿದರು.
ಯುಕೆಯಿಂದ ಹಿರಿಯ ವೈದ್ಯ ಅನಂತರಾಮ ಶೆಟ್ಟಿ, ಕುಂದಾಪ್ರ ಕನ್ನಡ ಬಳಗದ ಪೋಷಕ ವಕ್ವಾಡಿ ಪ್ರವೀಣ್‌ಕುವಾರ್ ಶೆಟ್ಟಿ, ಉಪಾಧ್ಯಕ್ಷ ಸುಜಿತ್ ಶೆಟ್ಟಿ, ಮಂಜುನಾಥ ದೇವಾಡಿಗ, ಸತೀಶ ಹಂಗಳೂರು, ಚಂದ್ರಶೇಖರ ಕೋಡಿ, ನಿತ್ಯಾನಂದ, ರಾವೇಂದ್ರ ಕಂಬ್ಳು, ಒಮಾನ್ ದೇಶದಿಂದ ರವಾನಂದ ಪ್ರಭು, ಕುವೈಟ್‌ನಿಂದ ಸುರೇಶ ನೇರಂಬಳ್ಳಿ, ಸೌದಿ ಅರೇಬಿಯಾದಿಂದ ಸಂತೋಷ ಶೆಟ್ಟಿ, ಮೋಶಿನ್ ಬೈಂದೂರು, ಬೆಹರೈನ್‌ನಿಂದ ಪ್ರದೀಪ ಶೆಟ್ಟಿ, ಕಮಲಾಕ್ಷ ಅಮೀನ್, ಶೀನ ದೇವಾಡಿಗ ತ್ರಾಸಿ, ಪ್ರಕಾಶ ಕೋಣಿ, ವಾಸುದೇವ ದೇವಾಡಿಗ, ಅರುಣ್‌ಕುವಾರ್ ಶಿರೂರು, ಸುನೀಲ್ ಬೈಂದೂರು, ರಂಜಿತ್ ಶಿರಿಯಾರ ಮುಂತಾದವರು ಭಾಗವಹಿಸಿದ್ದರು.ವ್ನಿೇಶ ಕುಂದಾಪುರ ಕಾರ್ಯಕ್ರಮ ನಿರೂಪಿಸಿದರು. ಸುಧಾಕರ ಪೂಜಾರಿ ವಂದಿಸಿದರು.