1 ರಿಂದ 5ನೇ ತರಗತಿ ಶಾಲೆಗಳ ಆರಂಭ, ಕೋವಿಡ್ ನಿಯಮ ಸರಳೀಕರಣ: ಇನ್ನೆರೆಡು ದಿನದಲ್ಲಿ ತಜ್ಞರ ಸಭೆ

1 Min Read
1 ರಿಂದ 5ನೇ ತರಗತಿ ಶಾಲೆಗಳ ಆರಂಭ, ಕೋವಿಡ್ ನಿಯಮ ಸರಳೀಕರಣ: ಇನ್ನೆರೆಡು ದಿನದಲ್ಲಿ ತಜ್ಞರ ಸಭೆ

ದಾವಣಗೆರೆ: ರಾಜ್ಯದಲ್ಲಿ ಒಂದರಿಂದ ಐದನೇ ತರಗತಿ ಶಾಲೆಗಳ ಆರಂಭ ಹಾಗೂ ಕೋವಿಡ್ ನಿಯಮ ಸರಳೀಕರಣಗೊಳಿಸುವ ಸಂಬಂಧ ಇನ್ನೆರೆಡು ದಿನಗಳಲ್ಲಿ ತಜ್ಞರ ಸಭೆ ಕರೆದು ಸಮಾಲೋಚಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ತಜ್ಞರು ನೀಡುವ ಸಲಹೆ ಆಧರಿಸಿ ಸರ್ವ ಸಮ್ಮತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು. ಗಡಿ ಜಿಲ್ಲೆಗಳಲ್ಲಿ ಸಂಚಾರ ಪುನರಾರಂಭಿಸುವ ಕುರಿತು ತೀರ್ಮಾನ ಮಾಡಲಾಗುವುದು ಎಂದರು.

ನವೆಂಬರ್ ವರೆಗೆ ಮಾತ್ರ ಸಿಎಂ ಅಧಿಕಾರದಲ್ಲಿ ಇರುತ್ತಾರೆ ಎಂದಿದ್ದ ಸಿಎಂ ಇಬ್ರಾಹಿಂ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಿಎಂ, ಅವರಿಗೆ ಯಾವಾಗ ಏನು ತಿಳಿಯುತ್ತೋ ಹಾಗೆ ಮಾತಾಡುತ್ತಾರೆ. ಅವರ ಜತೆ ನಾನೇ ಮಾತನಾಡುತ್ತೇನೆ ಎಂದರು.

ಪ್ರಚಾರ ಕಣಕ್ಕೆ ಬಿಎಸ್​ವೈ: ಹಾನಗಲ್ ಮತ್ತು ಸಿಂದಗಿ ಎರಡೂ ಉಪಚುನಾವಣೆಗಳ ಪ್ರಚಾರ ಕಣಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಭಾಗವಹಿಸಲಿದ್ದಾರೆ. ಈಗಾಗಲೇ ಅವರನ್ನು ಭೇಟಿ ಮಾಡಿ ವಿನಂತಿ ಮಾಡಿದ್ದು, ಎರಡೂ ಕ್ಷೇತ್ರಗಳಲ್ಲಿ ತಲಾ ಎರಡು ದಿನ ಪ್ರಚಾರ ಕೈಗೊಳ್ಳುವ ಜತೆಗೆ ರೋಡ್ ಷೋ ನಡೆಸಲಿದ್ದಾರೆ. ಎರಡೂ ಕ್ಷೇತ್ರದಲ್ಲೂ ಪಕ್ಷ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೆಎಸ್​ಡಿಎಲ್ ಅಧ್ಯಕ್ಷ ಮಾಡಾಳು ವಿರುಪಾಕ್ಷಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಜಿಪಂ ಮಾಜಿ ಸದಸ್ಯ ವಾಗೀಶಸ್ವಾಮಿ, ಎಂ.ಬಸವರಾಜನಾಯ್ಕ ಇದ್ದರು.

ಪರಸ್ತ್ರೀ ಜತೆ ಗ್ರಾಪಂ ಅಧ್ಯಕ್ಷೆ ಗಂಡನ ಕಾಮದಾಟ! ವಾಟ್ಸ್ಆ್ಯಪ್​ ಗ್ರೂಪ್​ಗೆ ತನ್ನದೇ ಫೋಟೋ ತಾನೇ ಹಾಕಿಕೊಂಡ…

ಗುತ್ತಿಗೆದಾರನಿಗೆ ತಾನೇ ಆಹ್ವಾನಿಸಿ ಮಂಚ ಹಂಚಿಕೊಂಡ ಲೇಡಿ! ಇವಳ ಹಿನ್ನೆಲೆ ಕೇಳಿದ್ರೆ ಬೆಚ್ಚಿಬೀಳ್ತೀರಿ

See also  ಪ್ರಾರ್ಥನೆಗೆಂದು ಚರ್ಚ್​ಗೆ ಹೋಗುತ್ತಿದ್ದ ಸವಾರ ಸಾವು…
Share This Article