More

    ತರಗತಿಯಲ್ಲಿ ಪಾಠ ಕೇಳುತ್ತಿದ್ದಂತೆ ಹೃದಯಾಘಾತದಿಂದ ಕುಸಿದು ಬಿದ್ದು ಪ್ರಾಣ ಬಿಟ್ಟ ವಿದ್ಯಾರ್ಥಿ

    ಮಧ್ಯಪ್ರದೇಶ: ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿಯೊಬ್ಬ ಗುರುವಾರ ಬೆಳಗ್ಗೆ ಇಂದೋರ್‌ನಲ್ಲಿ ಕೋಚಿಂಗ್ ಕ್ಲಾಸ್‌ನಲ್ಲಿ ಪಾಠ ಕೇಳುತ್ತಿದ್ದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಈ ಆಘಾತಕಾರಿ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.

    ರಾಜಾ (18) ಮೃತ ವಿದ್ಯಾರ್ಥಿ, ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ನಿವಾಸಿಯಾಗಿದ್ದಾನೆ. ವಿದ್ಯಾರ್ಥಿ ಉನ್ನತ ವ್ಯಾಸಂಗಕ್ಕಾಗಿ ಇಂದೋರ್‌ನಲ್ಲಿ ನೆಲೆಸಿದ್ದಾನೆ.

    ರಾಜಾ ಮಧ್ಯಪ್ರದೇಶ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಗಳಿಗೆ ಅದೇ ಜಿಲ್ಲೆಯ ಭಾವರ್ಕುವಾದಲ್ಲಿ ಕೋಚಿಂಗ್ ಇನ್ಸ್ಟಿಟ್ಯೂಟ್ ಸೇರಿದ್ದನು. ರಾಜಾ ಪ್ರತಿದಿನದಂತೆ ಇಂದು ಬೆಳಗ್ಗೆಯೂ ಕೋಚಿಂಗ್ ಸೆಂಟರ್​​ಗೆ ಬಂದು ತರಗತಿಯಲ್ಲಿ ಕುಳಿತು ಪಾಠ ಕೇಳುತ್ತಿದ್ದ. ಆದರೆ ರಾಜಾ ಏಕಾಏಕಿ ತರಗತಿಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಎದೆಯಲ್ಲಿ ನೋವಿನಿಂದ ನರಳುತ್ತಾ ಕುಳಿತಲ್ಲೇ ಕುಸಿದು ಬಿದ್ದ. ಇದನ್ನು ಗಮನಿಸಿದ ಸಹ ವಿದ್ಯಾರ್ಥಿಗಳು ರಾಜಾ ಅವರನ್ನು ಎತ್ತಿ ಬೆಂಚಿನ ಮೇಲೆ ಕೂರಿಸಿದರು. ರಾಜ ಅದಾಗಲೇ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದ.

    ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ರಾಜಾ ಈಗಾಗಲೇ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದರು. ತರಗತಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಯಲ್ಲಿ ಇಡೀ ಘಟನೆ ದಾಖಲಾಗಿದೆ.

    ಅಕ್ಕ- ತಂಗಿ ಇಬ್ಬರು ಪ್ರೆಗ್ನೆಂಟ್​; ನಟಿ ಮನೆಯಲ್ಲಿ ಡಬಲ್ ಸಂಭ್ರಮ​

    ಪತ್ನಿ-ಮಗುವಿನ ಕಣ್ಣೇದುರಿಗೆ ನರಳಾಡಿ ಪ್ರಾಣಬಿಟ್ಟ ಪತಿ

    ‘ಸುದೀಪ್‌ ಅವರು ದೇವ್ರಾ? ಕಿಚ್ಚನ ಬಗ್ಗೆ ಮಾತಾಡಿ ಫುಲ್ ಟ್ರೋಲ್..ವಿವಾದ ಬಳಿಕ ಕೈ ಮುಗಿದು ಕ್ಷಮೆ ಕೇಳಿದ ರಕ್ಷಕ್ ಬುಲೆಟ್

    ಪುಷ್ಪ 2 ಸಿನಿಮಾದ ಐಟಂ ಹಾಡಿಗೆ ಸಮಂತಾ ಬದಲಿಗೆ ಎಂಟ್ರಿ ಕೋಡ್ತಾರೆ ಕನ್ನಡದ ಸ್ಟಾರ್ ಹೀರೋಯಿನ್..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts