

ಮೂಲ್ಕಿ: ಪಾದಚಾರಿಯೊಬ್ಬರಿಗೆ ಕಾರು ಡಿಕ್ಕಿ ಹೊಡೆದು ಪರಾರಿಯಾಗಿರುವ ಘಟನೆ ಕಿನ್ನಿಗೋಳಿ ಸಮೀಪದ ಗೋಳಿಜೋರ ರಸ್ತೆಯಲ್ಲಿ ನಡೆದಿದೆ. ಎಂದಿನಂತೆ ಜಾನ್ ಸಿಕ್ವೇರಾ ಪತ್ನಿ ಜತೆ ವಾಕಿಂಗ್‌ಗೆ ತೆರಳಿದ್ದರು. ಈ ವೇಳೆ ಗೋಳಿಜೋರಾ ಕಡೆಯಿಂದ ಕಿನ್ನಿಗೊಳಿಯತ್ತ ಬರುತ್ತಿದ್ದ ಬಿಳಿ ಬಣ್ಣದ ಕಾರು ಜಾನ್ ಸಿಕ್ವೇರಾಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ. ಮಂಗಳೂರು ಉತ್ತರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದಿಂದ ಗಾಯಗೊಂಡ ಸಿಕ್ವೆರಾ ಅವರಿಗೆ ಕಿನ್ನಿಗೋಳಿಯ ಕನ್ಸೆಂಟಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.