ಸೇತುವೆಗೆ ಡಿಕ್ಕಿ ಹೊಡೆದು ಹೊಳೆಗೆ ಉರುಳಿದ ಕಾರು ನುಜ್ಜುಗುಜ್ಜಾದ ಸ್ಥಿತಿಯಲ್ಲಿ ಪತ್ತೆ: ಕಾರಿನಲ್ಲಿದ್ದ ಇಬ್ಬರೂ ನಾಪತ್ತೆ!

Mngcar1
Published on

ಮಂಗಳೂರು: ಸೇತುವೆಗೆ ಡಿಕ್ಕಿ ಹೊಡೆದ ಕಾರೊಂದು ಹೊಳೆಗೆ ಉರುಳಿದ ಘಟನೆ ತಡರಾತ್ರಿ ನಡೆದಿದ್ದು, ಕಾರಿನಲ್ಲಿದ್ದ ಇಬ್ಬರು ನಾಪತ್ತೆಯಾಗಿರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

ನುಜ್ಜುಗುಜ್ಜಾದ ಸ್ಥಿತಿಯಲ್ಲಿ ಹೊಳೆಯಿಂದ ಕಾರನ್ನು ಹೊರತೆಗೆಯಲಾಗಿದೆ, ಆದರೆ ಅದರಲ್ಲಿದ್ದ ಇಬ್ಬರು ಮಾತ್ರ ಪತ್ತೆಯಾಗಿಲ್ಲ. ಇಬ್ಬರೂ ಏನಾದರೂ ಎಂಬುದೇ ತಿಳಿಯುತ್ತಿಲ್ಲ.

ಘಟನಾ ಸ್ಥಳದಿಂದ ಸುಮಾರು500 ಮೀಟರ್ ದೂರದಲ್ಲಿ ಕಾರು ಪತ್ತೆಯಾಗಿದೆ, ಆದರೆ ಕಾರಿನಲ್ಲಿದ್ದ ವಿಟ್ಲದ ಧನುಷ್ (25) ಮತ್ತು ಕನ್ಯಾನ ನಿವಾಸಿ ಧನುಷ್ (24) ಇಬ್ಬರೂ ಸೋದರಸಂಬಂಧಿ ಎನ್ನಲಾಗಿದೆ. ಸದ್ಯ ಇಬ್ಬರಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ.

ನಿನ್ನೆ ರಾತ್ರಿ 12:05 ಗಂಟೆಯ ವೇಳೆಗೆ ಕಾಣಿಯೂರು ಸಮೀಪದ ಬೈತಡ್ಕದಲ್ಲಿ ಈ ಘಟನೆ ನಡೆದಿದ್ದು, ಬೆಳಗ್ಗೆ ಮಸೀದಿ ಸಿಸಿ ಕ್ಯಾಮರಾ ಚೆಕ್ ಮಾಡುವಾಗ ಘಟನೆ ಬೆಳಕಿಗೆ ಬಂದಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net