ಜೂ.5ರಂದು ಬೆಂಗಳೂರಲ್ಲಿ ಬೃಹತ್​ ಸೈಕಲ್​ ಜಾಥಾ: ವಿಶ್ವ ಪರಿಸರ-ಬೈಸಿಕಲ್​ ದಿನದ ಪ್ರಯುಕ್ತ BNMIT ಆಯೋಜನೆ

WhatsApp Image 2022-06-02 at 12.50.39 PM
Published on

ಬೆಂಗಳೂರು: ವಿಶ್ವ ಪರಿಸರ ದಿನ ಮತ್ತು ಬೈಸಿಕಲ್​ ದಿನಾಚರಣೆ ಪ್ರಯುಕ್ತ ಬಿಎನ್‌ಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಜೂ.5ರಂದು ಬೃಹತ್​ ಸೈಕಲ್​ ಜಾಥಾ ಏರ್ಪಡಿಸಿದೆ. 15 ಸಾವಿರಕ್ಕೂ ಹೆಚ್ಚು ಮಂದಿ ಸೈಕಲ್​ ಜಾಥಾದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. 'ಹೊಂದಿಸಿ ಬರೆಯಿಸಿ' ಸಿನಿಮಾ ತಂಡವೂ ಸಾಥ್​ ನೀಡಲಿದೆ. ಶಿಂಕಾರಿ ಚಂಡೆ ಮೇಳ ಮೆರುಗು ನೀಡಲಿದೆ.

ವಿಜಯವಾಣಿ ಮತ್ತು ದಿಗ್ವಿಜಯ 24/7 ನ್ಯೂಸ್​ ಮಾಧ್ಯಮ ಸಹಯೋಗದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಜೂ.5ರ ಬೆಳಗ್ಗೆ 6.30ಕ್ಕೆ ಜಾಥಾ ಹೊರಡಲಿದೆ. ಸೈಕಲ್​ ಜಾಥಾದಲ್ಲಿ ಭಾಗವಹಿಸುವವರಿಗೆ ಟೀಶರ್ಟ್​ ವಿತರಣೆ ಮತ್ತು ಬೆಳಗಿನ ಉಪಹಾರದ ವ್ಯವಸ್ಥೆ ಇರಲಿದೆ.

'ಹೊಂದಿಸಿ ಬರೆಯಿಸಿ' ತಂಡ: ಸೈಕಲ್​ ಜಾಥಾದಲ್ಲಿ 'ಹೊಂದಿಸಿ ಬರೆಯಿಸಿ' ಸಿನಿಮಾ ತಂಡವೂ ಪಾಲ್ಗೊಂಡು ಮೆರುಗು ನೀಡಲಿದೆ. ಪ್ರವೀಣ್​ ತೇಜ್, ಭಾವನಾ ರಾವ್​, ಸಂಯುಕ್ತ ಹೊರನಾಡು, ನವೀನ್​ ಶಂಕರ್​, ಶ್ರೀ, ಐಶಾನಿ ಶೆಟ್ಟಿ, ಅರ್ಚನಾ ಜೋಯಿಸ್​, ಅನಿರುದ್ಧ್ ಆಚಾರ್ಯ ಮತ್ತು ರಾಮೇನಹಳ್ಳಿ ಜಗನ್ನಾಥ್​ ಅವರು ಸೈಕಲ್​ ಏರಲಿದ್ದಾರೆ.

ಸೈಕಲ್​ ಜಾಥಾ ಮಾರ್ಗ: ಬಿಎನ್‌ಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕ್ಯಾಂಪಸ್​ನಿಂದ ಹೊರಡುವ ಸೈಕಲ್​ ಜಾಥಾ ಜೆಎಸ್‌ಎಸ್ ವೃತ್ತ- ಸೌತೆಂಡ್ ರಸ್ತೆ- ಸೌತ್ ಎಂಡ್ ವೃತ್ತ- ಆರ್.ವಿ. ರಸ್ತೆ- ಅಶೋಕ ಪಿಲ್ಲರ್- ಲಾಲ್‌ಬಾಗ್ ಸಿದ್ಧಾಪುರ ಗೇಟ್- ಲಾಲ್‌ಬಾಗ್ ಮುಖ್ಯದ್ವಾರ- ಕೃಂಬಿಗಲ್ ರಸ್ತೆ- ಲಾಲ್‌ಬಾಗ್ ಪಶ್ಚಿಮ ದ್ವಾರ- ವೈವಿಲಾಸ್ ರಸ್ತೆ- ನ್ಯಾಷನಲ್ ಕಾಲೇಜು ವೃತ್ತ- ಕೆ.ಆರ್. ರಸ್ತೆ- ನೆಟ್ಟಕಲ್ಲಪ್ಪ ವೃತ್ತ- ಅಯೋಧ್ಯೆ ಉಪಹಾರ್ ವೃತ್ತದಿಂದ ಅಂತಿಮವಾಗಿ ಬಿಎನ್​ಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕ್ಯಾಂಪಸ್ ತಲುಪಲಿದೆ.

ಬೆಳಗ್ಗೆ 7.30ಕ್ಕೆ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಬೆಂಗಳೂರಿನ ಶ್ರೀ ರಾಮಕೃಷ್ಣ ವಿದ್ಯಾ ಮಂದಿರದ ಶ್ರೀ ಸ್ವಾಮಿ ತದ್ಯುಕ್ತಾನಂದ ಅವರು ಸಾನಿಧ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಕಂದಾಯ ಸಚಿವ ಆರ್​.ಅಶೋಕ್​, ಗೌರವಾನ್ವಿತ ಅತಿಥಿಗಳಾಗಿ ಬೆಂಗಳೂರು ದಕ್ಷಿಣ ಕೇತ್ರದ ಎಂಎಲ್​ಸಿ ಎಂ.ಕೃಷ್ಣಪ್ಪ, ಅದಮ್ಯ ಚೇತನ ಸಂಸ್ಥೆಯ ಚೇರ್ಮನ್​ ಡಾ.ತೇಜಸ್ವಿನಿ ಅನಂತಕುಮಾರ್​, ಬಿಬಿಎಂಪಿ ಮಾಜಿ ಕಾರ್ಪೋರೇಟರ್​ ಲಕ್ಷ್ಮೀ ಉಮೇಶ್​ ಕಬ್ಬಾಳ್​, ವಿಜಯವಾಣಿ ಪತ್ರಿಕೆಯ ಡೆಪ್ಯೂಟಿ ಎಡಿಟರ್​ ರಾಘವೇಂದ್ರ ಗಣಪತಿ ಹಾಗೂ ಸೇರಿದಂತೆ ಬಿಎನ್‌ಎಂ ಸಂಸ್ಥೆಯ ಮುಖ್ಯಸ್ಥರು, ಸಿಬ್ಬಂದಿ ವರ್ಗ ಉಪಸ್ಥಿತರಿರಲಿದ್ದಾರೆ.

ಆಸಕ್ತರು ಹೆಸರು ನೋಂದಾಯಿಸಿ: ಸೈಕಲ್​ ಜಾಥಾದಲ್ಲಿ ಪಾಲ್ಗೊಳ್ಳಲು 99 ರೂಪಾಯಿ ಪಾವತಿಸಿ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಮೊ.ನಂ. 99800 43809 ಸಂಪರ್ಕಿಸಿ. ಹೆಸರು ನೋಂದಾಯಿಸಿಕೊಳ್ಳಲು https://www.socialstories.in/event-details/bnm-cycle-street ಕ್ಲಿಕ್​ ಮಾಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net