ಮೈಸೂರಲ್ಲಿ ಸಾಲಕ್ಕಾಗಿ ಅಲೆದು ಹೈರಾಣದ ಮಹಿಳೆ: ಬ್ಯಾಂಕ್​ ಬಳಿ ಧರಣಿ ಕೂರುತ್ತಿದ್ದಂತೆ ಸಿನಿಮೀಯ ಶೈಲಿಯಲ್ಲಿ ಒಲಿದ ಜಯ

Manjula protest
Published on

ಮೈಸೂರು: ಸ್ವಉದ್ಯೋಗಕ್ಕಾಗಿ ಸಾಲ ನೀಡುವಂತೆ ಅರ್ಜಿ ಸಲ್ಲಿಸಿದರೂ ಸತಾಯಿಸಿದ ಬ್ಯಾಂಕ್​ ಅಧಿಕಾರಿಗಳ ವಿರುದ್ಧ ಕನ್ನಡದ ಸಿನಿಮಾ "ಆಕ್ಟ್​ 1978'' ಮಾದರಿಯಲ್ಲಿ ಮಹಿಳೆಯೊಬ್ಬರು ಪ್ರತಿಭಟನೆ ನಡೆಸಿ ಜಯ ಪಡೆದಿದ್ದಾರೆ.

ನೀಲಿ ಲೋಹಿತ್​ ನೀಲಿ ಕಲಾ ಕ್ರಿಯೇಷನ್ಸ್​ ಸಂಸ್ಥಾಪಕಿ ಜೆ.ಮಂಜುಳಾ ವಿನೂತನವಾಗಿ ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದವರು. ಮಣ್ಣಿನ ಆಭರಣಗಳ ವಿನ್ಯಾಸಕಿ ಹಾಗೂ ಶಿಕ್ಷಕಿಯಾಗಿರುವ ಮಂಜುಳಾ ಅವರು ಸ್ವಂತ ಉದ್ದಿಮೆಯನ್ನು ಉನ್ನತ ಮಟ್ಟದಲ್ಲಿ ಬೆಳೆಸುವ ಉದ್ದೇಶದಿಂದ ಬ್ಯಾಂಕೊಂದರಲ್ಲಿ ಸಾಲ ಪಡೆಯಲು ಯತ್ನಿಸಿದರು.

ಆದರೆ, ಅಧಿಕಾರಿಗಳು ಸಾಲ ನೀಡಲು 3 ತಿಂಗಳಿಂದ ಅಲೆಸಿದರು. ಇದನ್ನು ಖಂಡಿಸಿ ಬ್ಯಾಂಕ್​ ಮುಂದೆ ಪ್ರತಿಭಟನೆ ನಡೆಸಿದ ಕೆಲ ಸಮಯದಲ್ಲೇ ಮಹಿಳೆಗೆ ನ್ಯಾಯ ದೊರಕಿದೆ. ಬ್ಯಾಂಕ್​ನ ಹಿರಿಯ ಅಧಿಕಾರಿಗಳು ಸಮಸ್ಯೆ ಬಗೆಹರಿಸುವ ಆಶ್ವಾಸನೆ ನೀಡಿದ್ದಾರೆ.

ಈ ಬಗ್ಗೆ ಖುದ್ದು ಮಂಜುಳಾ ಅವರೇ ಫೇಸ್​ಬುಕ್​ ಪುಟದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಬ್ಯಾಂಕ್​ನ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ, ಕೆಲವೊಂದು ದಾಖಲೆಗಳ ಬದಲಾವಣೆಯೊಂದಿಗೆ ಸಮಸ್ಯೆ ಬಗೆಹರಿಸುವ ಮೂಲಕ ನನಗೆ ನ್ಯಾಯ ಕೊಡಿಸಿದ್ದಾರೆ. ಸಹಕರಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net