ನನ್ನ ಮೇಲೆ ಅತ್ಯಾಚಾರ-ಕೊಲೆ ಯತ್ನ ನಡೆದಿದೆ, ಯಾರೊಬ್ಬರೂ ನೋವು ಆಲಿಸುತ್ತಿಲ್ಲ... ಎಂದು ಕಣ್ಣೀರಿಟ್ಟ ನಟಿ

pori moni
Published on

ಢಾಕಾ: ನನ್ನ ಮೇಲೆ ಅತ್ಯಾಚಾರ ಮತ್ತು ಕೊಲೆ ಯತ್ನ ನಡೆದಿದೆ. ನಾನು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ. ಈ ಸಂಬಂಧ ನಾನು ಪೊಲೀಸರ ಮೊರೆ ಹೋದರೂ ಪ್ರಯೋಜನವಾಗಿಲ್ಲ, ಮೂರ್ನಾಲ್ಕು ಜನರ ಸಹಾಯ ಕೇಳಿದರೂ ಸಿಗಲಿಲ್ಲ. ನನಗೆ ಎಲ್ಲಿ ನ್ಯಾಯ ಸಿಗುತ್ತೆ? ನ್ಯಾಯಕ್ಕಾಗಿ ನಾನು ಎಲ್ಲಿ ಹೋಗಲಿ... ಎಂದು ಖ್ಯಾತ ಸಿನಿಮಾ ನಟಿಯೊಬ್ಬರು ಪ್ರಧಾನಿಗೆ ಫೇಸ್​ಬುಕ್​ ಮೂಲಕ ಅಳಲು ತೋಡಿಕೊಂಡಿದ್ದಾರೆ.

ಪೋರಿ ಮೋನಿ ಎಂದೇ ಖ್ಯಾತಿ ಪಡೆದಿರುವ ನಟಿ ಶಮ್ಸುನ್ನಹಾರ್​ ಸ್ಮೃತಿ ಅವರು ತನ್ನ ಮೇಲೆ ಅತ್ಯಾಚಾರ ಮತ್ತು ಕೊಲೆ ಯತ್ನ ನಡೆದಿದೆ. ನನಗೆ ನ್ಯಾಯ ಕೊಡಿಸಿ ಎಂದು ಬಾಂಗ್ಲಾದೇಶದ ಪ್ರಧಾನಿ ಶೇಕ್​ ಹಸ್ಸೀನಾ ಅವರಿಗೆ ಮನವಿ ಮಾಡಿದ್ದಾರೆ. ಪ್ರಧಾನಿಯನ್ನು ಅಮ್ಮ.. ಎಂದಿರು ಪೋರಿ ಮೋನಿ, ತಾನು ಅನುಭವಿಸಿದ ನೋವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅಲ್ಲದೆ, ತಾನು ಎರಡೂವರೆ ವರ್ಷದ ಮಗು ಇದ್ದಾಗಲೇ ನನ್ನ ತಾಯಿ ತೀರಿಕೊಂಡರು, ಈ ಕ್ಷಣದಲ್ಲಿ ನನಗೆ ಅಮ್ಮ ಬೇಕು ಅಂದೆನ್ನಿಸುತ್ತಿದೆ... ಎಂದೂ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿರಿ 38 ಹೆಂಡ್ತಿಯರ ಮುದ್ದಿನ ಗಂಡ, 89 ಮಕ್ಕಳ ತಂದೆ ಇನ್ನಿಲ್ಲ! ಇವರ ವೈವಾಹಿಕ ಬದುಕೇ ಕುತೂಹಲ

'ಗೌರವಾನ್ವಿತ ಪ್ರಧಾನಿ ಅವರೇ... ನಾನು ಒಬ್ಬ ಹೆಣ್ಣು ಮಗಳು, ಈ ದೇಶದ ಪ್ರಜೆ. ನಾನು ಸಿನಿಮಾ ನಟಿ. ಮೇಲಾಗಿ ಒಬ್ಬ ಮನುಷ್ಯಳು. ನಾನು ದೈಹಿಕ ಕಿರುಕುಳಕ್ಕೆ ಬಲಿಯಾಗಿದ್ದೇನೆ. ನನ್ನ ಮೇಲೆ ಅತ್ಯಾಚಾರ ಮತ್ತು ಕೊಲೆಗೆ ಪ್ರಯತ್ನ ನಡೆದಿದೆ. ಇದಕ್ಕಾಗಿ ನನಗೆ ನ್ಯಾಯ ಬೇಕು. ಈ ನ್ಯಾಯವನ್ನು ನಾನು ಎಲ್ಲಿ ಪಡೆಯಲಿ? ಎಲ್ಲಿಗೆ ಹೋದರೆ ಸಿಗುತ್ತೆ? ಸೂಕ್ತ ನ್ಯಾಯವನ್ನು ಯಾರು ಕೊಡುತ್ತಾರೆ? ಕಳೆದ ನಾಲ್ಕು ದಿನದಿಂದ ಅಲೆದರೂ ನನಗೆ ಯಾರೊಬ್ಬರಿಂದರೂ ಸ್ಪಂದನೆ ಸಿಕ್ಕಿಲ್ಲ...' ಎಂದು ಪೋರಿ ಮೋನಿ ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

ಇತ್ತ ತನ್ನ ನಿವಾಸದ ಬಳಿ ಭಾನುವಾರ ರಾತ್ರಿ 11 ಗಂಟೆಗೆ ಸುದ್ದಿಗೋಷ್ಠಿ ನಡೆಸಿದ ಪೋರಿ ಮೋನಿ, ಉತ್ತರ ಕ್ಲಬ್ ಲಿಮಿಟೆಡ್‌ನ ಮಾಜಿ ಅಧ್ಯಕ್ಷ ಮತ್ತು ಉದ್ಯಮಿ ನಾಸಿರ್ ಯು ಮಹ್ಮದ್ ನನ್ನ ಮೇಲೆ ಅತ್ಯಾಚಾರ ಮತ್ತು ಕೊಲೆಗೆ ಯತ್ನಿಸಿದ್ದರು ಎಂದು ಆರೋಪಿ ಹೆಸರನ್ನ ಬಹಿರಂಗ ಮಾಡಿದರು. ನಾನು ಜೂ. 10 ರಂದು ಓಮಿ ಮತ್ತು ಮೇಕಪ್​ಮನ್​ ಜಿಮ್ಮಿ ಜತೆ ಕ್ಲಬ್​ಗೆ ಹೋಗಿದ್ದೆ. ಅಲ್ಲಿ ನಾಸಿರ್​ ಯು ಮಹ್ಮದ್​ ಎಂಬಾತನ್ನು ಓಮಿ ಪರಿಚಯಿಸಿದ್ದ. ಮರುದಿನ ನಾಸಿರ್​ ನನಗೆ ದೈಹಿಕ ಕಿರುಕುಕೊಟ್ಟು ಕೊಲ್ಲಲು ನೋಡಿದ. ಇದರಲ್ಲಿ ಓಮಿ ಕೂಡ ಭಾಗಿಯಾಗಿದ್ದ ಎಂದು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net