

ಬೆಂಗಳೂರು: ಮದ್ವೆ ವಿವಾದಕ್ಕೆ ಸಂಬಂಧಿಸಿದಂತೆ ನಟಿ ಪವಿತ್ರಾ ಲೋಕೇಶ್ ಅವರು ಪ್ರತಿಕ್ರಿಯಿಸಿದ್ದಾರೆ. ನನಗೆ 3ನೇ ಮದುವೆ ಆಗಿಲ್ಲ. ಇನ್ನು ಡಿವೋರ್ಸ್ ಅನ್ನು ಏಕೆ ತೆಗೆದುಕೊಳ್ಳಬೇಕು? ನನ್ನ ಟಾರ್ಗೆಟ್ ಮಾಡೋದೆ ರಮ್ಯಾ ರಘುಪತಿ ಅವರ ಉದ್ದೇಶ. ನಾಲ್ಕು ವರ್ಷದಿಂದ ನಾನು ಮತ್ತು ನಟ ನರೇಶ್ ಪರಿಚಿತರು. ನನ್ನ ಮತ್ತು ನರೇಶ್ ಬಗ್ಗೆ ಆಂಧ್ರದಲ್ಲಿ ಮಾತನಾಡಲಿ. ಆಂಧ್ರದಲ್ಲಿ 150ಕ್ಕೂ ಹೆಚ್ಚು ಸಿನಿಮಾ ಮಾಡಿ ಫೇಮಸ್ ಆಗಿದ್ದೀನಿ. ನರೇಶ್ ನೂರಕ್ಕೂ ಹೆಚ್ಚು ಸಿನಿಮಾ ಮಾಡಿದ್ದಾರೆ. ಸಾಕಷ್ಟು ನಟಿಯರ ಜತೆ ಕೆಲಸ ಮಾಡಿದ್ದಾರೆ, ಅವರೆಲ್ಲರ ಜತೆ ಸಂಬಂಧ ಕಟ್ಟೋಕಾಗುತ್ತಾ? ನಾನೂ ಹಲವು ನಟರ ಜೊತೆ ಅಭಿನಯಿಸಿದ್ದೀನಿ. ಹಾಗಂತ ಎಲ್ಲರ ಜತೆ ಸಂಬಂಧ ಕಟ್ಟೋಕಾಗುತ್ತಾ? ಎಂದು ಪ್ರಶ್ನಿಸಿದ್ದಾರೆ.
ದುಡ್ಡಿಗಾಗಿ ನಾನು ಮದ್ವೆ ಆಗಿದ್ದರೆ ಸುಚೇಂದ್ರ ಪ್ರಸಾದ್ ಜತೆ ಇರುತ್ತರಲೇ ಇರಲಿಲ್ಲ. ನಾವಿಬ್ಬರೂ ಮದ್ವೆ ಆದಾಗ ಸುಚೇಂದ್ರ ಪ್ರಸಾದ್ ಅವರ ಜೇಬಲ್ಲಿ ದುಡ್ಡಿರಲಿಲ್ಲ, ಮನೆ ಇರ್ಲಿಲ್ಲ, ಕಾರು ಇರಲಿಲ್ಲ. ಹಾಗಿದ್ರೆ ನಾನ್ಯಾಕೆ ಅವರ ಜತೆ ಇದ್ದೆ? 11 ವರ್ಷ ಅವರ ಜತೆ ಇದ್ದೆ, ಕಳೆದ 6 ವರ್ಷದಿಂದ ನಾವಿಬ್ಬರೂ ಜತೆಗಿಲ್ಲ. ಹಣ ಮನುಷ್ಯನಿಗೆ ಬೇಕಲ್ವಾ? ಸಮಾಜದಲ್ಲಿ ಎಲ್ಲರ ಹಾಗೆ ಬದುಕಬೇಕಂದ್ರೆ ಹಣ ಬೇಕಲ್ವಾ? ಅದನ್ನೇ ಆಸೆ ಅಂದ್ರೆ ನಾನೇನೂ ಹೇಳೋಕೆ ಆಗಲ್ಲ ಎಂದಿರುವ ಪವಿತ್ರಾ ಲೋಕೇಶ್, ಸುಚೇಂದ್ರ ಪ್ರಸಾದ್ ಒಳ್ಳೆಯ ಮನುಷ್ಯ, ನಮ್ಮಿಬ್ಬರ ನಡುವೆ ಒಳ್ಳೆಯ ಫ್ರೆಂಡ್ಶಿಪ್ ಯಾವಾಗ್ಲೂ ಇರುತ್ತೆ ಎಂದಿದ್ದಾರೆ.
ನರೇಶ್ ಅವರು ಸಾಕಷ್ಟು ನಟಿಯರ ಜತೆ ಕೆಲಸ ಮಾಡಿದ್ದಾರೆ. ಅವರೆಲ್ಲರ ಜತೆ ಸಂಬಂಧ ಕಟ್ಟೋಕಾಗುತ್ತಾ? ನಾನೂ ಹಲವು ನಟರ ಜತೆ ಅಭಿನಯಿಸಿದ್ದೀನಿ. ಹಾಗಂತ, ಎಲ್ಲರ ಜತೆ ಸಂಬಂಧ ಕಟ್ಟೋಕಾಗುತ್ತಾ? ನರೇಶ್ ಅವರು ನನಗೆ ಪರಿಚಯ ಆದಾಗ ಅವ್ರು ಸ್ಟಾರ್ ನಟರ ಮಗ ಅನ್ನೋದೆ ನಂಗೆ ಗೊತ್ತಿರಲಿಲ್ಲ. ಒಟ್ಟೊಟ್ಟಿಗೆ ಕೆಲಸ ಮಾಡ್ತಾ ಕ್ಲೋಸ್ ಆದ್ವಿ, ಒಬ್ಬರಿಗೊಬ್ಬರು ವಿಷಯ ಶೇರ್ ಮಾಡಿಕೊಳ್ತಿದ್ವಿ. ಮನೇಲಿ ಯಾರೂ ಇಲ್ಲ ಅಂತ ನನ್ನ ಬಳಿ ನರೇಶ್ ಅವರು ಹೇಳ್ತಿದ್ರು. ನರೇಶ್ ತುಂಬಾ ಜನಪ್ರಿಯ, ಅವ್ರು ಮಾ ಪ್ರೆಸಿಡೆಂಟ್, ಅವ್ರು ಬೇರೆಯವ್ರ ಸಮಸ್ಯೆ ಬಗೆಹರಿಸ್ತಾರೆ. ಒಂದು ದೊಡ್ಡ ಸ್ಥಾನದಲ್ಲಿರೋ ವ್ಯಕ್ತಿ ಹೀಗೆಲ್ಲಾ ಮಾಡಲ್ಲ. ಯಾಕೆ ಟಾರ್ಗೆಟ್ ಮಾಡ್ತಿದಾರೆ ಅಂತ ನಂಗೊತ್ತಿಲ್ಲ. ರಮ್ಯಾ ರಘುಪತಿ ಅವರು ಅವರ ಗಂಡನ ಜತೆ ಹೋಗಿ ಇರಬಹುದಲ್ವಾ? ನನ್ನನ್ನು ಯಾಕ್ ಇದ್ರಲ್ಲಿ ಏಳೀತಾ ಇದ್ದಾರೆ. ಡಿವೋರ್ಸ್ ತಗೋಬೇಕು ಅಂತ ಇದ್ರೆ ತಗೋತೀನಿ. ಅದು ನನ್ನ ಪ್ರಾಬ್ಲಂ, ನಾನೇ ಬಗೆಹರಿಸಿಕೊಳ್ತೀನಿ ಎಂದು ನರೇಶ್ರ 3ನೇ ಪತ್ನಿ ರಮ್ಯಾ ವಿರುದ್ಧ ಪವಿತ್ರಾ ಲೋಕೇಶ್ ಅಸಮಾಧಾನ ಹೊರಹಾಕಿದ್ದಾರೆ.
ಸೋಷಿಯಲ್ ಮೀಡಿಯಾ ವಿಚಾರವಾಗಿ ನಾನು ಸೈಬರ್ ಕ್ರೈಂಗೆ ಕಂಪ್ಲೆಂಟ್ ಕೊಟ್ಟಿದ್ದೀನಿ. ನನಗೆ ಇದ್ರ ಬಗ್ಗೆ ಏನ್ ಮಾಡ್ಬೇಕು ಗೊತ್ತಾಗ್ತಿಲ್ಲ. ಅನವಶ್ಯಕವಾಗಿ ನನ್ ಬಗ್ಗೆ ಆರೋಪ ಹೊರಿಸ್ತಾ ಇದ್ದಾರೆ. ನರೇಶ್ ಪತ್ನಿ ಅಂದ್ರೆ ಯಾರು? ನಂಗೆ ಅವ್ರು ಯಾರು ಅಂತ ಗೊತ್ತೇ ಇಲ್ಲ. ನಾನಂತೂ ಅವ್ರನ್ನ ನೋಡೇ ಇಲ್ಲ, ಅವ್ರು ಹೇಳ್ತಿದಾರೆ ಹೆಂಡ್ತಿ ಅಂತ... ಎಂದು ಪವಿತ್ರಾ ಲೋಕೇಶ್ ಹೇಳಿದ್ದಾರೆ.