

ಬೆಂಗಳೂರು: ಸುದ್ದಿ ಮಾಡಲು ಹೋದ ವರದಿಗಾರರು ಮತ್ತು ಛಾಯಾಗ್ರಹಕರ ಮೇಲೆ ಸ್ಯಾಂಡಲ್ವುಡ್ ನಟ ಧ್ರುವ ಸರ್ಜಾ ಅವರ ಗನ್ಮ್ಯಾನ್ ಹಲ್ಲೆ ಮಾಡಲು ಯತ್ನಿಸಿದ ಘಟನೆ ಸೋಮವಾರ ಸಂಭವಿಸಿದೆ.
ನಟ ಚಿರಂಜೀವಿ ಸರ್ಜಾ ನಿಧನವಾಗಿ ಇಂದಿಗೆ ಒಂದು ವರ್ಷ. ಕಗ್ಗಲಿಪುರ ಬಳಿಯ ಬೃಂದಾವನ ಫಾರ್ಮ್ ಹೌಸ್ ಬಳಿ ಚಿರು ಸಮಾಧಿಗೆ ಕುಟುಂಬಸ್ಥರು ಪೂಜೆ ಮಾಡಲೆಂದು ಸೋಮವಾರ ಬೆಳಗ್ಗೆ ಆಗಮಿಸಿದ್ದರು. ಈ ವೇಳೆ ಚಿತ್ರೀಕರಣ ಮಾಡುತ್ತಿದ್ದ ಛಾಯಾಗ್ರಾಹಕರ ಮೇಲೆ ಧ್ರುವ ಸರ್ಜಾರ ಗನ್ ಮ್ಯಾನ್ ಕಲ್ಲು ತೂರಿದ್ದಾರೆ.
ಸುದ್ದಿ ವಾಹಿನಿಯ ಕ್ಯಾಮರಾ ಮ್ಯಾನ್ ಮೇಲೆ ಕನ್ನಡ ಬಾರದ ಧ್ರುವ ಸರ್ಜಾರ ಗನ್ ಮ್ಯಾನ್ ಹಲ್ಲೆ ಮಾಡೋಕೆ ಮುಂದಾದ ವೇಳೆ ಮಾಧ್ಯಮದವರು ಮತ್ತು ಗನ್ ಮ್ಯಾನ್ ನಡುವೆ ಮಾತಿನ ಚಕಮಕಿ ನಡೆದಿದೆ.
ಕಳೆದ ವರ್ಷ ಲಾಕ್ಡೌನ್ ಸಮಯದಲ್ಲಿ ಆರೋಗ್ಯಕರವಾಗಿಯೇ ಇದ್ದ ಚಿರಂಜೀವಿ ಸರ್ಜಾ, ಜೂನ್ 7ರಂದು ಹೃದಯಾಘಾತದಿಂದ ಕೊನೆಯುಸಿರೆಳೆದರು. ಅವರ ನಿಧನ, ಕನ್ನಡ ಚಿತ್ರರಂಗಕ್ಕೆ ದೊಡ್ಡ ಆಘಾತ ನೀಡಿತ್ತು.