ಹೆಂಡತಿ ಫೋನ್​ ಕೊಡಲ್ಲ ಎಂದಳು; ಗಂಡ ಚಾಕುವಿನಿಂದ ಇರಿದು ಕೊಂದೇ ಬಿಟ್ಟ!​

kill
Published on

ಮುಂಬೈ: ಕುಡಿದು ಬಂದ ಗಂಡನಿಗೆ ಹೆಂಡತಿ ತನ್ನ ಫೋನ್​ನ್ನು ನೀಡಲು ನಿರಾಕರಿಸಿದಳು ಎಂಬ ಕಾರಣಕ್ಕೆ ಆಕೆಯನ್ನು ಚಾಕುವಿನಿಂದ ಇರಿದು ಕೊಂದಿರುವ ಘಟನೆ ಮುಂಬೈನ ಚಂಬೂರು ಉಪನಗರದಲ್ಲಿ ನಡೆದಿದೆ.

ಉಪನಗರದ ಎಂಎಚ್​ಎಡಿಎ ಕಾಲೋನಿ ನಿವಾಸಿ ಜೇಮ್ಸ್​ ಜಾನ್​ ಕುರೈಯಾ(51) ಭಾನುವಾರ ರಾತ್ರಿ ಕಂಠ ಪೂರ್ತಿ ಕುಡಿದು ಮನೆಗೆ ಬಂದಿದ್ದಾನೆ. ಮನೆಯಲ್ಲಿ ಹೆಂಡತಿ ರಬಿಯಾ ಜೇಮ್ಸ್​ ಕುರೈಯಾ (45) ಬಳಿ ಆಕೆಯ ಫೋನನ್ನು ತನಗೆ ನೀಡಲು ಕೇಳಿದ್ದಾನೆ. ಅದಕ್ಕೆ ಆಕೆ ಒಪ್ಪದಿದ್ದಾಗ ಮನೆಯಲ್ಲಿದ್ದ ಚಾಕುವಿನಿಂದ ಹಲವು ಬಾರಿ ಆಕೆಗೆ ಇರಿದಿದ್ದಾನೆ.

ಘಟನೆಯಲ್ಲಿ ರಬಿಯಾ ಸ್ಥಳದಲ್ಲೇ ಮೃತ ಪಟ್ಟಿದ್ದಾಳೆ. ಹೆಂಡತಿ ಸತ್ತಿದ್ದಾಳೆಂದು ತಿಳಿದ ತಕ್ಷಣ ಜೇಮ್ಸ್​ ಅಲ್ಲಿಂದ ಓಡಿಹೋಗುವ ಪ್ರಯತ್ನ ಮಾಡಿದ್ದಾನೆ. ಆದರೆ ಸ್ಥಳೀಯರು ಮತ್ತು ಬಂಧುಗಳು ಆತನನ್ನು ಹಿಡಿದಿದ್ದು ಪೊಲೀಸರ ವಶಕ್ಕೆ ನೀಡಿದ್ದಾರೆ.

ಐಪಿಸಿಯ ಹಲವು ಸೆಕ್ಷನ್​ಗಳ ಅಡಿಯಲ್ಲಿ ಅಪರಾಧಿಯ ಮೇಲೆ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆತನಿಗೆ ಈ ಮೊದಲೇ ಮತ್ತೊಂದು ಮದುವೆಯಾಗಿದ್ದು, ಮೊದಲ ಪತ್ನಿ ಉಪನಗರದ ಮನ್​ಖುರ್ಡ್​ನಲ್ಲಿ ವಾಸವಿರುವುದಾಗಿ ಅವರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net