ಪಾರ್ಟಿಗೆ ಕರೆಸಿ 24 ವರ್ಷದ ಯುವತಿ ಮೇಲೆ ಸ್ನೇಹಿತರಿಂದಲೇ ಸಾಮೂಹಿಕ ಅತ್ಯಾಚಾರ!| Delhi

rape
Published on

Delhi : 24 ವರ್ಷದ ಯುವತಿಯೊಬ್ಬಳ ಮೇಲೆ ನಾಲ್ಕು ಜನರ ಗುಂಪೊಂದು ಭಾನುವಾರ (ಆ.10)ಸಾಮೂಹಿಕ ಅತ್ಯಾಚಾರ ನಡೆಸಿದೆ ಎಂದು ಉತ್ತರ ದೆಹಲಿಯ ಸಿವಿಲ್​ ಲೈನ್ಸ್​ ಪೊಲೀಸರು ತಿಳಿಸಿದ್ದಾರೆ.

ಘಟನೆ ಏನು?

ಪೊಲೀಸರ ಪ್ರಕಾರ, ಸಂತ್ರಸ್ತೆಯ ಸ್ನೇಹಿತ ಆಕೆಯನ್ನು ಭಾನುವಾರ ತನ್ನ ಮನೆಗೆ ಪಾರ್ಟಿಗೆಂದು ಕರೆದಿದ್ದು, ಆ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಇನ್ನು ಘಟನೆ ನಡೆದ 13-14 ಗಂಟೆಗಳ ಸಂತರ ಸಂತ್ರಸ್ತೆ ತನ್ನ ಸಹೋದರಿಯೊಂದಿಗೆ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.

ದೂರು ಏನಾಗಿತ್ತು?

ಯುವತಿಯು ಪಾರ್ಟಿಗೆಂದು ಬಂದಾಗ ನಾಲ್ವರು ಪುರುಷರು ಇರುವುದನ್ನು ಕಂಡುಕೊಂಡಿದ್ದಾಳೆ. ತನ್ನ ಪಾನೀಯದಲ್ಲಿ ಏನೋ ಬರೆಸಿದ್ದರಿಂದ ಪ್ರಜ್ಞೆ ತಪ್ಪಿದೆ. ನಂತರ ಆಕೆಯನ್ನು ಸ್ನಾನಗೃಹದ ಬಳಿ ಕರೆದುಕೊಂಡು ಹೋಗಿದ್ದು, ಅಲ್ಲಿ ನಾಲ್ವರು ಸಮೂಹಿಕ ಅತ್ಯಚಾರವೆಸಗಿ ವಿಡಿಯೋ ಮಾಡಿಕೊಂಡಿದ್ದಾರೆ.

ಈ ಘಟನೆ ಬಗ್ಗೆ ಯಾರಿಗಾದರೂ ತಿಳಿಸಿದರೆ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿ ಮನೆಯಿಂದ ಹೊರಗೆ ಕಳುಹಿಸಿದ್ದಾರೆ ಎಂದು ಯುವತಿಯು ಪೊಲೀಸರಲ್ಲಿ ದೂರು ದಾಖಲಿಸಿದ್ದಾಳೆ.

ಯುವತಿ ನೀಡಿದ ದೂರಿನ ಆಧಾರದ ಮೇಲೆ ಆಕೆಯನ್ನು ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಿ, ಆರೋಪಿಗಳ ವಿರುದ್ಧ ಎಫ್​ಐಆರ್​ ಹಾಕಿದ್ದಾರೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಗಳು ಸಿಗಬಹುದೇ ಎಂದು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net