

ಬೆಂಗಳೂರು: ಆಸ್ಟ್ರೇಲಿಯಾದ ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್, ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್, ಇಂಗ್ಲೆಂಡ್ನ ಜೇಕಬ್ ಬೆಥೆಲ್ ಹಾಗೂ ಶ್ರೀಲಂಕಾದ ಮಥೀಶ್ ಪಥಿರಣ ಅವರನ್ನು ಐಪಿಎಲ್ 20ನೇ ಆವೃತ್ತಿಯ ಆಟಗಾರರ ಹರಾಜಿಗೆ ಮುನ್ನ ಫ್ರಾಂಚೈಸಿಗಳು ತಂಡದಿಂದ ಬಿಡುಗಡೆಗೊಳಿಸಿವೆ. ಕಾರ್ಯದೊತ್ತಡ ನಿರ್ವಹಣೆಯಿಂದ ವಿದೇಶಿ ಆಟಗಾರರು ಪೂರ್ಣ ಆವೃತ್ತಿಗೆ ಲಭ್ಯವಾಗುವ ಬಗ್ಗೆ ಅನುಮಾನಗಳಿಂದಾಗಿ ದುಬಾರಿ ಸಂಭಾವನೆಯ ಆಟಗಾರರನ್ನು ರಿಲೀಸ್ ಮಾಡುವ ಮೂಲಕ ಫ್ರಾಂಚೈಸಿಗಳು ಎಚ್ಚರಿಕೆ ನಡೆ ಅನುಸರಿಸಿವೆ.
ಡಿಸೆಂಬರ್ 16ರಂದು ಗೋವಾದಲ್ಲಿ ನಿಗದಿಯಾಗಿರುವ 2027ರ ಆಟಗಾರರ ಮಿನಿ ಹರಾಜಿಗೆ ಮುನ್ನ ಎಲ್ಲ ಫ್ರಾಂಚೈಸಿಗಳು ತಮ್ಮ ಪ್ರಮುಖ ಆಟಗಾರರನ್ನು ರಿಟೇನ್ ಮಾಡಿಕೊಂಡಿದ್ದು, ಬಿಡುಗಡೆಗೊಳಿಸಿರುವ ಆಟಗಾರರ ಪಟ್ಟಿ ಪ್ರಕಟಕ್ಕೆ ಮಂಗಳವಾರ ಅಂತಿಮ ದಿನವಾಗಿತ್ತು. ಹಾಲಿ ಚಾಂಪಿಯನ್ ಆರ್ಸಿಬಿ ತಂಡ ಜೇಕಬ್ ಬೆಥೆಲ್ರನ್ನು ರಿಲೀಸ್ ಮಾಡಿದ್ದು, ಮುಂದಿನ ವರ್ಷದ ನಡೆಯಲಿರುವ ಆಶಸ್ ಸರಣಿ ಹಾಗೂ ಏಕದಿನ ವಿಶ್ವಕಪ್ಗೆ ಫಿಟ್ ಆಗಿರಲು ಬೆಥೆಲ್ ಐಪಿಎಲ್ನಿಂದ ಹಿಂದೆಸರಿದಿದ್ದಾರೆ. ಜತೆಗೆ ಕಳೆದ ಜುಲೈನಿಂದ ಅವರು ಗಾಯದ ಸಮಸ್ಯೆ ಎದುರಿಸುತ್ತಿದ್ದಾರೆ.
ಕಾರ್ಯದೊತ್ತಡ ನಿರ್ವಹಣೆಯಿಂದ ಹಾಲಿ ವರ್ಷದ ಐಪಿಎಲ್ ಟೂರ್ನಿಯ ಮೊದಲಾರ್ಧಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಅಲಭ್ಯರಾಗಿದ್ದ ಮಿಚೆಲ್ ಸ್ಟಾರ್ಕ್ ಮುಂದಿನ ವರ್ಷವೂ ಆಡುವುದಿಲ್ಲ ಎಂದು ಖಾತ್ರಿಪಡಿಸಿದ್ದಾರೆ. ಐದು ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಎಡಗೈ ವೇಗಿ ಟ್ರೆಂಟ್ ಬೌಲ್ಟ್, ರಾಜಸ್ಥಾನ ರಾಯಲ್ಸ್ ಶಿಮ್ರೋನ್ ಹೆಟ್ಮೆಯರ್, ಕೆಕೆಆರ್ ಮಥೀಶ್ ಪಥಿರಣರನ್ನು ಬಿಡುಗಡೆಗೊಳಿಸಿವೆ. ಕಳೆದ ಬಾರಿಯ ಹರಾಜಿನಲ್ಲಿ ₹18 ಕೋಟಿಗೆ ಸೇಲಾಗಿದ್ದ ಪಥಿರಣ ಗಾಯದ ಸಮಸ್ಯೆಯಿಂದ ಏಕೈಕ ಪಂದ್ಯವನ್ನಾಡಿದ್ದರು. ದೇಶೀಯ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿ 14. 20 ಕೋಟಿ ಬಿಡ್ ಪಡೆದಿದ್ದ ಪ್ರಶಾಂತ್ ವೀರ್ರನ್ನು ಸಿಎಸ್ಕೆ, ವೇಗಿ ಆವೇಶ್ ಖಾನ್ರನ್ನು ಲಖನೌ ತಂಡ ಬಿಡುಗಡೆಗೊಳಿಸಿದೆ.
ಕರುಣ್, ಲವನೀತ್ ಔಟ್
ಕರ್ನಾಟಕದ ಕುರುಣ್ ನಾಯರ್ (ಡೆಲ್ಲಿ), ಲವನೀತ್ ಸಿಸೋಡಿಯಾ (ಕೆಕೆಆರ್), ಪ್ರವೀಣ್ ದುಬೆ (ಪಂಜಾಬ್), ಮ್ಯಾಕ್ನಿಲ್ ನೊರೋನ್ಹಾ (ಸಿಎಸ್ಕೆ) ಹೊರಬಿದ್ದಿದ್ದು, ಮನೀಷ್ ಪಾಂಡೆ (ಕೆಕೆಆರ್), ದೇವದತ್ ಪಡಿಕ್ಕಲ್ (ಆರ್ಸಿಬಿ), ಕೆಎಲ್ ರಾಹುಲ್, ಮನ್ವಂತ್ ಕುಮಾರ್ (ಡೆಲ್ಲಿ), ವೈಶಾಖ್ ವಿಜಯಕುಮಾರ್ (ಪಂಜಾಬ್), ಆರ್. ಸ್ಮರಣ್ (ಸನ್ರೈಸರ್ಸ್), ಪ್ರಸಿದ್ಧಕೃಷ್ಣ (ಗುಜರಾತ್), ಯಶ್ರಾಜ್ ಪೂಂಜಾ (ರಾಜಸ್ಥಾನ), ಶ್ರೇಯಸ್ ಗೋಪಾಲ್ (ಸಿಎಸ್ಕೆ) ರಿಟೇನ್ ಆಗಿದ್ದಾರೆ.
10 ತಂಡಗಳ ರಿಲೀಸ್ ವಿವರ
ಆರ್ಸಿಬಿ: ಜೇಕಬ್ ಬೆಥೆಲ್, ರಿಚರ್ಡ್ ಗ್ಲಿಸನ್, ಮಂಗೇಶ್ ಯಾದವ್, ಸಾತ್ವಿಕ್ ದೇಶ್ವಾಲ್, ವಿಹಾನ್ ಮಲ್ಹೋತ್ರಾ, ಸ್ವಪ್ನಿಲ್ ಸಿಂಗ್; ಹರಾಜಿಗೆ ಉಳಿದ ಮೊತ್ತ: ₹14.15 ಕೋಟಿ.
ಸಿಎಸ್ಕೆ: ಎಂಎಸ್ ಧೋನಿ, ಮ್ಯಾಥ್ಯೂ ಶಾರ್ಟ್, ಸ್ಪೆನ್ಸರ್ ಜಾನ್ಸನ್, ಜಾಕ್ ೌಲ್ಕಸ್, ಪ್ರಶಾಂತ್ ವೀರ್, ಅಮನ್ ಖಾನ್, ಕುಲದೀಪ್ ಯಾದವ್, ಆಕಾಶ್ ಮಧ್ವಲ್, ಡಿಯಾನ್ ಪಾರೆಸ್ಟರ್, ಮ್ಯಾಕ್ನಿಲ್ ನೊರೋನ್ಹಾ; ಉಳಿದ ಮೊತ್ತ: ₹28.05 ಕೋಟಿ.
ಡೆಲ್ಲಿ ಕ್ಯಾಪಿಟಲ್ಸ್: ಮಿಚೆಲ್ ಸ್ಟಾರ್ಕ್, ನಿತೀಶ್ ರಾಣಾ, ಅಭಿಷೇಕ್ ಪೊರೆಲ್, ಪಥುಮ್ ನಿಸ್ಸಂಕ, ಬೆನ್ ಡಕೆಟ್, ಕರುಣ್ ನಾಯರ್, ಸಹಿಲ್ ಪರಖ್, ದುಶ್ಮಂತ್ ಚಮೀರ, ರೆಹನ್ ಅಹ್ಮದ್, ಅಜಯ್ ಮಂಡಲ್; ಉಳಿದ ಹಣ: ₹39.5 ಕೋಟಿ.
ಲಖನೌ: ಆವೇಶ್ ಖಾನ್, ಮ್ಯಾಥ್ಯೂ ಬ್ರಿಟ್ಜ್ಕೆ, ಅನ್ರಿಚ್ ನೋಕಿಯಾ, ಜಾರ್ಜ್ ಲಿಂಡೆ, ವಾನಿಂದು ಹಸರಂಗ, ನಮನ್ ತಿವಾರಿ, ಅರ್ಷಿನ್ ಕುಲಕರ್ಣಿ; ಬಾಕಿ ಮೊತ್ತ: ₹47.45 ಕೋಟಿ.
ಪಂಜಾಬ್: ನೇಹಲ್ ವಧೇರಾ, ಲಾಕಿ ರ್ಗ್ಯುಸನ್, ಮಿಚೆಲ್ ಒವೆನ್, ಪಾಯ್ಲ ಅವಿನಾಶ್, ಪ್ರವೀಣ್ ದುಬೆ, ವಿಶಾಲ್ ನಿಶಾದ್; ಬಾಕಿ ಮೊತ್ತ:₹18.60 ಕೋಟಿ.
ರಾಜಸ್ಥಾನ: ಶಿಮ್ರೋನ್ ಹೆಟ್ಮೆಯರ್, ನಾಂಡ್ರೆ ಬರ್ಗರ್, ಆಡಂ ಮಿಲ್ನೆ, ಕ್ವೆನಾ ಮಕ, ತುಷಾರ್ ದೇಶಪಾಂಡೆ, ಕುಲದೀಪ್ ಸೇನ್, ಯುಧ್ವೀರ್ ಸಿಂಗ್, ವ್ನಿೇಶ್ ಪುತೂರು, ರವಿ ಸಿಂಗ್, ಎಮನ್ಜೋತ್ ಚಹಾಲ್; ಬಾಕಿ ಮೊತ್ತ: ₹27.05 ಕೋಟಿ.
ಸನ್ರೈಸರ್ಸ್: ಟ್ರಾವಿಸ್ ಹೆಡ್, ಕಮಿಂದು ಮೆಂಡಿಸ್, ಜೈ ದೇವ್ ಉನಾದ್ಕತ್, ದಿಶಾನ್ ಮಧುಶಂಕ, ಓಂಕಾರ್ ತರ್ಮಲೆ, ಅಮಿತ್ ಕುಮಾರ್, ಆರ್.ಎಸ್. ಅಂಬರೀಷ್, ಶಿವಂ ಮಾವಿ, ಗೆರಾಲ್ಡ್ ಕೋಟ್ ಜೀ, ಡೇವಿಡ್ ಪೇಯ್ನೆ; ಬಾಕಿ ಮೊತ್ತ: ₹40.15 ಕೋಟಿ.
ಗುಜರಾತ್: ಇಶಾಂತ್ ಶರ್ಮ, ಲ್ಯೂಕ್ ವುಡ್, ಕುಲ್ವಂತ್ ಕೆಜ್ರೋಲಿಯಾ, ಪೃಥ್ವಿರಾಜ್, ಶಾರುಖ್ ಖಾನ್, ಕಾನರ್ ಎಸ್ಟೂರ್ಹ್ಯೂಜೆನ್; ಬಾಕಿ ಮೊತ್ತ: ₹8.75 ಕೋಟಿ.
ಮುಂಬೈ: ಟ್ರೆಂಟ್ ಬೌಲ್ಟ್, ದೀಪಕ್ ಚಹರ್, ಘಜನ್ರ್, ಅಥರ್ವ ಅಕೋಂಲ್ಕರ್, ಕೇಶವ್ ಮಹಾರಾಜ್, ಮೊಹಮದ್ ಇಜಾರ್, ದಾನಿಶ್ ಮಾಲೇವರ್, ಮಯಾಂಕ್ ಮಾರ್ಕಂಡೆ, ಮಯಾಂಕ್ ರಾವತ್, ಮಹಿಪಾಲ್ ಲೊಮ್ರೋರ್, ರಾಬಿನ್ ಮಿಂಜ್, ರುಚಿತ್ ಅಹಿರ್, ಕ್ರಿಷ್ ಭಗತ್; ಬಾಕಿ ಮೊತ್ತ: ₹ 32.6 ಕೋಟಿ.
ಕೆಕೆಆರ್: ಅಜಿಂಕ್ಯ ರಹಾನೆ, ಅಕಾಶ್ ದೀಪ್, ಬ್ಲೆಸಿಂಗ್ ಮುಜರ್ಬಾನಿ, ದಕ್ಷ ಕಮ್ರ, ಲವನೀತ್ ಸಿಸೋಡಿಯಾ, ಮಥೀಶ್ ಪಥಿರಣ, ಮುಸ್ತಾಫಿಜೂರ್ ರಹಮಾನ್, ನವದೀಪ್ ಸೈನಿ, ರಚಿನ್ ರವೀಂದ್ರ, ರಾಹುಲ್ ತ್ರಿಪಾಠಿ, ತೇಜಸ್ವಿ ಸಿಂಗ್, ಉಮ್ರಾನ್ ಮಲಿಕ್; ಬಾಕಿ ಮೊತ್ತ: ₹ 41.65 ಕೋಟಿ.
ಸನ್ಗೆ ಹೆಡ್ ಅಲಭ್ಯ
ಆಸ್ಟ್ರೇಲಿಯಾ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡದ ಸ್ಫೋಟಕ ಬ್ಯಾಟರ್ ಟ್ರಾವಿಸ್ ಹೆಡ್ ಮುಂದಿನ ವರ್ಷದ ಐಪಿಎಲ್ ಆವೃತ್ತಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನ ಬಿಡುವಿಲ್ಲದ ವೇಳಾಪಟ್ಟಿ ಜತೆಗೆ ಕಾರ್ಯದೊತ್ತಡ ನಿರ್ವಹಣೆಯಿಂದ ಮುಂಬರುವ ಆವೃತ್ತಿಯಿಂದ ಹಿಂದೆಸರಿಯುತ್ತಿರುವುದಾಗಿ ಸನ್ರೈಸರ್ಸ್ ಫ್ರಾಂಚೈಸಿಗೆ ಮಾಹಿತಿ ನೀಡಿದ್ದಾರೆ. 2025ರ ಮೆಗಾ ಹರಾಜಿನಗೆ ಮುನ್ನ ₹14 ಕೋಟಿ ನೀಡಿ ಸನ್ರೈಸರ್ಸ್ ತಂಡ ಅವರನ್ನು ರಿಟೇನ್ ಮಾಡಿಕೊಂಡಿತ್ತು. ಸನ್ರೈಸರ್ಸ್ ಪರ ಆಡಿರುವ 43 ಪಂದ್ಯಗಳಲ್ಲಿ 1, 351 ರನ್ಗಳಿಸಿದ್ದಾರೆ.