ಜೂ. ಕ್ರಿಕೆಟ್​ ಆಯ್ಕೆ ಸಮಿತಿಗೆ ಪರ್ವಿಂದರ್​ ಸಾರಥ್ಯ

ಭಾರತ ತಂಡದ ಮಾಜಿ ವೇಗಿ ಪರ್ವಿಂದರ್​ ಅವಾನ ಜೂನಿಯರ್​ ಕ್ರಿಕೆಟ್​ ಆಯ್ಕೆ ಸಮಿತಿಯ ನೂತನ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ ಶುಕ್ರವಾರ ನೂತನ ಜೂ.ಆಯ್ಕೆ ಸಮಿತಿಯನ್ನು ಅಧಿಕೃತವಾಗಿ ನೇಮಕಗೊಳಿಸಿದೆ.
ಪರ್ವಿಂದರ್​ ಅವಾನ
ಪರ್ವಿಂದರ್​ ಅವಾನ
Published on: 

ನವದೆಹಲಿ: ಭಾರತ ತಂಡದ ಮಾಜಿ ವೇಗಿ ಪರ್ವಿಂದರ್​ ಅವಾನ ಜೂನಿಯರ್​ ಕ್ರಿಕೆಟ್​ ಆಯ್ಕೆ ಸಮಿತಿಯ ನೂತನ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ ಶುಕ್ರವಾರ ನೂತನ ಜೂ.ಆಯ್ಕೆ ಸಮಿತಿಯನ್ನು ಅಧಿಕೃತವಾಗಿ ನೇಮಕಗೊಳಿಸಿದೆ.

ಪರ್ವಿಂದರ್​ ಅವಾನ
ಪರ್ವಿಂದರ್​ ಅವಾನ

ಕ್ರಿಕೆಟ್​ ಸಲಹಾ ಸಮಿತಿಯ (ಸಿಎಸಿ) ಸಲಹೆಯ ಮೇರೆಗೆ ಜೂ.ಆಯ್ಕೆ ಸಮಿತಿ ರಚಿಸಲಾಗಿದ್ದು, ದೆಹಲಿಯ ಪರ್ವಿಂದರ್​ ಅವಾನ ಜತೆಗೆ ಕೃಷ್ಣ ದಾಸ್​, ರಾಕೇಶ್​ ಪಟೇಲ್​ ಹಾಗೂ ಎನ್​.ಅರ್ಜುನ್​ ಯಾದವ್​ ಇತರ ಸದಸ್ಯರಾಗಿರಲಿದ್ದಾರೆ. 5ನೇ ಸದಸ್ಯರನ್ನು ಶ್ರೀದಲ್ಲೇ ನೇಮಕ ಮಾಡುವುದಾಗಿ ಬಿಸಿಸಿಐ ತಿಳಿಸಿದೆ. 40 ವರ್ಷದ ಪರ್ವಿಂದರ್​ ಭಾರತ ಪರ 2 ಟಿ20 ಆಡಿದ್ದು, 62 ಪ್ರಥಮ ದರ್ಜೆ ಪಂದ್ಯಗಳಲ್ಲಿ 191 ವಿಕೆಟ್​ ಪಡೆದಿದ್ದಾರೆ. ಐಪಿಎಲ್​ನಲ್ಲಿ ಪಂಜಾಬ್​ ಕಿಂಗ್ಸ್​ ತಂಡದ ಭಾಗವಾಗಿದ್ದ ಅವರು , ಭಾರತ ಎ ಮತ್ತು ಶೇಷ ಭಾರತ ಪರವೂ ಆಡಿದ ಅನುಭವ ಹೊಂದಿದ್ದಾರೆ. ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ನಂತರ ಬಿಸಿಸಿಐ ಶ್ರೇಷ್ಠತಾ ಕೇಂದ್ರ (ಸಿಒಇ) ಹಾಗೂ 16, 19, 23 ವಯೋಮಿತಿ ದೆಹಲಿ ತಂಡ, 19 ವಯೋಮಿತಿ ಭಾರತ ತಂಡದ ತರಬೇತಿ ಬಳಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net