Asian Games 2026: ಅ.1ಕ್ಕೆ ಭಾರತ-ಪಾಕ್ ಸೆಮಿಫೈನಲ್

ಪುರುಷರ ಹಾಕಿಯಲ್ಲಿ ಮುಂದುವರಿದ ಗೆಲುವಿನ ಓಟ
indo pak
indo pak
Published on: 

ಕಕಮಿಗಹರ: ಹಾಲಿ ಚಾಂಪಿಯನ್ ಭಾರತ ಪುರುಷರ ಹಾಕಿ ತಂಡ ಅಜೇಯವಾಗಿ ಸೆಮಿಫೈನಲ್ ಪ್ರವೇಶಿಸಿದೆ. ಅಕ್ಟೋಬರ್ 1ರಂದು ನಡೆಯಲಿರುವ ಸೆಮಿಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿ ಆಗಲಿವೆ. ಸೋಮವಾರ ನಡೆದ ಎ ಗುಂಪಿನ 5ನೇ ಹಾಗೂ ಅಂತಿಮ ಪಂದ್ಯದಲ್ಲಿ ಹರ್ಮಾನ್‌ಪ್ರೀತ್ ಸಿಂಗ್ ಪಡೆ 10-0 ಗೋಲುಗಳಿಂದ ಬಾಂಗ್ಲಾದೇಶ ಎದುರು ಗೆಲುವು ಒಲಿಸಿಕೊಂಡಿತು.

ತುಂತುರು ಮಳೆಯ ನಡುವೆ ಪ್ರಾಬಲ್ಯ ಕಾಯ್ದುಕೊಂಡ ಭಾರತ ಪರ ನಾಯಕ ಹರ್ಮಾನ್‌ಪ್ರೀತ್ ಸಿಂಗ್ (27, 40, 45ನೇ ನಿಮಿಷ) ಮೂರು ಗೋಲು ಗಳಿಸಿದರೆ, ಶೀಲಾನಂದ್ ಲಾಕ್ರಾ (44, 45) ಎರಡು, ಅಭಿಷೇಕ್ (3), ಜುಗ್ರಾಜ್ ಸಿಂಗ್ (22), ಸುಖ್‌ಜೀತ್ ಸಿಂಗ್ (32), ಸಂಜಯ್ (59) ಹಾಗೂ ಮಂದಿಪ್ ಸಿಂಗ್ (60) ತಲಾ ಗೋಲುಗಳಿಸಿದರು. ಭಾರಿ ಮಳೆಯಿಂದಾಗಿ ಪಾಕಿಸ್ತಾನ ಹಾಗೂ ಓಮನ್ ನಡುವಿನ ಪಂದ್ಯ 15 ನಿಮಿಷ ಸ್ಥಗಿತಗೊಂಡಿದ್ದರಿಂದ, ಭಾರತದ ಪಂದ್ಯವೂ ಅರ್ಧಗಂಟೆ ತಡವಾಗಿ ಆರಂಭಗೊಂಡಿತು.

ಸೆಮಿಫೈನಲ್ಸ್

ಯಾವಾಗ: ಗುರುವಾರ

ಭಾರತ-ಪಾಕ್

ಮಧ್ಯಾಹ್ನ 1ಕ್ಕೆ

ಮಲೇಷ್ಯಾ-ಕೊರಿಯಾ

ಮಧ್ಯಾಹ್ನ 3.30

ನೇರಪ್ರಸಾರ: ಸೋನಿ ಸ್ಪೋರ್ಟ್ಸ್, ಸೋನಿ ಲಿವ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net