ಕೊಡಗು ಜಿಲ್ಲೆಯ ವೈದ್ಯಕಿಯ ವಿಜ್ಞಾನಗಳ ಸಂಸ್ಥೆಯ ಅಧೀನದ ಕೋವಿಡ್ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸಲು ವಿವಿಧ ಹುದ್ದೆಗಳಿಗೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ 6 ತಿಂಗಳ ಅವಧಿಗೆ ಅಥವಾ ಕೋವಿಡ್ ಪರಿಸ್ಥಿತಿ ಸುಧಾರಿಸುವ ವರೆಗೆ ಇದರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ.
ಒಟ್ಟು ಹುದ್ದೆಗಳು: 184
ಹುದ್ದೆ ವಿವರ
ಫಿಜಿಷಿಯನ್ಸ್ 6, ಪಲ್ಮೊನೊಲಾಜಿಸ್ಟ್ 3, ಕಾಡಿರ್ಯಾಲಜಿಸ್ಟ್ 1, ನೆಪ್ರೊಲಾಜಿಸ್ಟ್1, ಅನಸ್ತೇಷಿಯಾಲಾಜಿಸ್ಟ್ 10, ಬಯೋಮೆಡಿಕಲ್ ಇಂಜಿನಿಯರ್ಸ್ 1, ನಸಿರ್ಂಗ್ ಆಫೀಸರ್ಸ್ 100, ಫಾರ್ಮಸಿಸ್ಟ್ 4, ಜೂನಿಯರ್/ ಸೀನಿಯರ್ ಲ್ಯಾಬ್ ಟೆಕ್ನೀಷಿಯನ್ 12, ಎಮರ್ಜೆನ್ಸಿ ಮೆಡಿಸಿನ್/ ಇಂಟೆಂನ್ಸಿವಿಸ್ಟ್ 4, ರೆಸ್ಪಿರೇಟರಿ ಕೇರ್ ಟೆಕ್ನೀಷಿಯನ್ 4, ವೆಂಟಿಲೇಟರ್ ಟೆಕ್ನೀಷಿಯನ್ಸ್ 4, ಐಸಿಯು ಟೆಕ್ನೀಷಿಯನ್ಸ್/ ಒಟಿ ಟೆಕ್ನೀಷಿಯನ್ಸ್ 8, ಆಕ್ಸಿಜೆನ್ ಪ್ಲಾಂಟ್ ಆ್ಯಂಡ್ ಅದರ್ ಮೆಡಿಕಲ್ ಎಕ್ವಿಪ್ಮೆಂಟ್ಸ್ ಮೆಂಟೇನೆನ್ಸ್ ಇಂಜಿನಿಯರ್/ ಟೆಕ್ನೀಷಿಯನ್ 4, ಸ್ವಾಬ್ ಕಲೆಕ್ಟರ್ಸ್ 6, ಫಿಜಿಯೋಥೆರಪಿಸ್ಟ್ 3, ಡಯಾಲಿಸಿಸ್ ಟೆಕ್ನೀಷಿಯನ್ಸ್ 3, ಇಕೋ ಟೆಕ್ನೀಷಿಯನ್ಸ್ 2, ಡೇಟಾ ಎಂಟ್ರಿ ಆಪರೇಟರ್ 8
ಶೈಕ್ಷಣಿಕ ಅರ್ಹತೆ: ಅನಸ್ತೇಷಿಯಾ ಕೇರ್ ಟೆಕ್ನಾಲಜಿ/ ಡಿಒಟಿಟಿ, ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ / ಇಆ್ಯಂಡ್ಇ ಟೆಕ್ನಾಲಜಿ, ಫಿಜಿಯೋಥೆರಪಿಸ್ಟ್, ಡಯಾಲಿಸಿಸ್ ಟೆಕ್ನಾಲಜಿ, ಇಸಿಎಚ್ಒ ಟೆಕ್ನಾಲಜಿ/ ಅನಸ್ತೇಷಿಯಾ ಕೇರ್, ಬಯೋಮೆಡಿಕಲ್ನಲ್ಲಿ ಡಿಪ್ಲೊಮಾ ಅಥವಾ ತತ್ಸಮಾನ ಶಿಕ್ಷಣ, ಪದವಿ, ಬಿ ಫಫಾರ್ಮಾ/ ಡಿ ಫಾರ್ಮಾ, ಡಿಎಂಎಲ್ಟಿ/ ಬಿಎಸ್ಸಿ ಎಂಎಲ್ಟಿ, ಬಿಎಸ್ಸಿ, ಎಂಡಿ, ಡಿಎನ್ಬಿ, ಡಿಎಂ ಮಾಡಿರುವ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬಹುದು.
ವೇತನ: ಫಿಜಿಷಿಯನ್, ಪುಲ್ಮೋನೊಲಾಜಿಸ್ಟ್, ಕಾಡಿರ್ಯಾಲಾಜಿಸ್ಟ್, ನೆಪ್ರೋಲಾಜಿಸ್ಟ್, ಅಸ್ತೇಷಿಯಾಲಜಿಸ್ಟ್ ಹುದ್ದೆಗಳಿಗೆ ಮಾಸಿಕ 2,50,000 ರೂ., ಬಯೋ ಮೆಡಿಕಲ್ ಇಂಜಿನಿಯರ್ಗೆ ಮಾಸಿಕ 35,000 ರೂ., ಡೇಟಾ ಎಂಟ್ರಿ ಆಪರೇಟರ್ಗೆ ಮಾಸಿಕ 14,000 ರೂ. ಹಾಗೂ ಉಳಿದ ಹುದ್ದೆಗಳಿಗೆ ಮಾಸಿಕ 20,000 ರೂ. ವೇತನ ನಿಗದಿಪಡಿಸಲಾಗಿದೆ.
ಸೂಚನೆ: ಕೋವಿಡ್ ನಿಮಿತ್ತ ಕರ್ತವ್ಯಕ್ಕೆ ನೇಮಕಗೊಳ್ಳುವ ಸಿಬ್ಬಂದಿ ಸರ್ಕಾರದ ಆರೋಗ್ಯ ವಿಮೆಗೆ ಒಳಪಡುತ್ತಾರೆ. ಹಾಗೂ ಸಿಬ್ಬಂದಿಗೆ ಕೋವಿಡ್ ಲಸಿಕೆ ನೀಡಲಾಗುವುದು.
ಸಂದರ್ಶನಕ್ಕ ಹಾಜರಾಗುವ ದಿನ: 10.5.2021 ರಿಂದ 15.5.2021ರ ವರೆಗೆ
ಸಂದರ್ಶನ ನಡೆಯುವ ಸ್ಥಳ: ಕೌನ್ಸಿಲ್ ಸಭಾಂಗಣ, ಎ ಬ್ಲಾಕ್, ಕೊಡಗು ವೈದ್ಯಕಿಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿ.
ಅಧಿಸೂಚನೆಗೆ: https://bit.ly/3f7olAy
ಮಾಹಿತಿಗೆ: ದೂ. ಸಂ. 08272 298220/ ಇ.ಮೇಲ್ [email protected]
ಇಂಜಿನಿಯರಿಂಗ್ ಪದವೀಧರರಿಗೆ ಐಐಟಿಯಲ್ಲಿ ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ
ಪದವಿ ಯಾವುದೇ ಇರಲಿ… ಜಲ ಅಭಿವೃದ್ಧಿ ಸಂಸ್ಥೆಯಲ್ಲಿವೆ ಉದ್ಯೋಗಾವಕಾಶ: 62 ಹುದ್ದೆಗಳಿಗೆ ಆಹ್ವಾನ
ವಿಜ್ಞಾನ ಪದವೀಧರರಿಗೆ ಬಿಎಚ್ಇಎಲ್ನಲ್ಲಿ ಉದ್ಯೋಗಾವಕಾಶ- ನಾಲ್ಕೇ ದಿನಗಳು ಬಾಕಿ