ಕ್ಯಾಲಿಫೋರ್ನಿಯಾ: ಸೂಪರ್ ಮಾಡೆಲ್ ಕೆಂಡಾಲ್ ಜೆನ್ನರ್ ಎರಡು ಭಾರಿ ಭದ್ರತಾ ಬೆದರಿಕೆಯನ್ನು ಎದುರಿಸಿದ ಘಟನೆ ನಡೆದಿದೆ. ಬೆತ್ತಲೆ ವ್ಯಕ್ತಿಯೊಬ್ಬ ಕೆಂಡಾಲ್ ಜೆನ್ನರ್ ಅವರ ಸ್ವಿಮ್ಮಿಂಗ್ ಫೂಲ್ ನುಗ್ಗಲು ಯತ್ನಿಸಿದ ಘಟನೆ ಒಂದೆಡೆಯಾದರೆ, ಮತ್ತೊಬ್ಬ ಆಕೆಯನ್ನು ಕೊಲ್ಲಲು ದೇಶವೆಲ್ಲ ಸುತ್ತಾಡಿದ್ದಾನೆ.
ಸೋಮವಾರ ಮಲಿಕ್ ಬೌಕರ್ (24) ಎಂಬಾತ ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ 25 ವರ್ಷದ ಮಾಡೆಲ್ ಕೆಂಡಾಲ್ ಜೆನ್ನರ್ಳನ್ನು ಕೊಲೆ ಮಾಡಲು ಅಕ್ರಮ ಶಸ್ತ್ರಾಸ್ತ್ರ ಖರೀದಿಸಿದ್ದ. ಹಿಂದಿನ ದಿನ ಭಾನುವಾರ 27 ವರ್ಷದ ವ್ಯಕ್ತಿಯೊಬ್ಬ ಕ್ಯಾಲಿಫೋರ್ನಿಯಾದ ವೆಸ್ಟ್ ಹಾಲಿವುಡ್ನಲ್ಲಿರುವ ಮಾಡೆಲ್ ಮನೆಗೆ ನುಗ್ಗಿ ತನ್ನ ಬಟ್ಟೆಯೆಲ್ಲ ಕಳಚಿ ಪೂರ್ತಿ ಬೆತ್ತೆಲೆಯಾಗಿ ಆಕೆ ಮುಂದೆ ಸ್ವಿಮ್ ಮಾಡಲು ಸ್ವಿಮ್ಮಿಂಗ್ ಪೂಲ್ಗೆ ನುಗ್ಗಲು ಯತ್ನಿಸಿದ. ಈ ವೇಳೆ ಭದ್ರತಾ ಸಿಬ್ಬಂದಿ ಆತನನ್ನು ತಡೆದು ವಶಕ್ಕೆ ಪಡೆದುಕೊಂಡರು.
ಆರೋಪಿ ಬೌಕರ್ನನ್ನು ತಾತ್ಕಾಲಿಕವಾಗಿ ಲಾಸ್ ಏಂಜಲೀಸ್ ಮನೋವೈದ್ಯಕೀಯ ಆಸ್ಪತ್ರೆಯಲ್ಲಿ ಬಂಧಿಸಲಾಗಿದ್ದು, ಯಾವುದೇ ಕ್ಷಣದಲ್ಲಿ ಆತನನ್ನು ಬಿಡುಗಡೆ ಮಾಡಬಹುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬೌಕರ್ನನ್ನು ಜೆನ್ನರ್ ಎಂದಿಗೂ ಭೇಟಿಯಾಗಿಲ್ಲವಂತೆ. ಆದರೆ, ಆತ ತನ್ನನ್ನು ಕೊಲ್ಲಲು ಏಕೆ ಯತ್ನಿಸುತ್ತಿದ್ದಾನೆಂಬುದು ಆಕೆಗೆ ಭಯವಾಗಿದೆಯಂತೆ.
ಬಿಡುಗಡೆಯಾದರೆ ನನ್ನನ್ನು ಕೊಲ್ಲಲು ಮತ್ತೆ ಪ್ರಯತ್ನ ಮಾಡಬಹುದು ಎಂಬುದೇ ಆಕೆಗೆ ಈಗಿರುವ ಭಯ. ಸದ್ಯ ನ್ಯಾಯಾಲಯ ಜೆನ್ನರ್ಗೆ ಸ್ವಲ್ಪ ತಾತ್ಕಾಲಿಕ ರಿಲೀಫ್ ನೀಡಿದ್ದು, ಬೌಕರ್ ಎಲ್ಲ ಸಮಯದಲ್ಲೂ ಜೆನ್ನರ್ ಅವರಿಂದ ಸುಮಾರು 100 ಯಾರ್ಡ್ ದೂರದಲ್ಲಿ ಉಳಿಯಬೇಕೆಂದು ಆದೇಶಿಸಿದೆ.
ಮತ್ತೊಬ್ಬ ಆರೋಪಿ ಭಾನುವಾರ ಬೆಳಗ್ಗೆ 2 ಗಂಟೆಗೆ ಲಾಸ್ ಏಂಜಲೀಸ್ನಲ್ಲಿರುವ ಮಾಡೆಲ್ ಮನೆಗೆ ನುಗ್ಗಿ ಕಿಟಕಿಯನ್ನು ಬಡಿದು ಹೆಸರಿಡಿದು ಕರೆದಿದ್ದಾನೆ. ಈ ವೇಳೆ ಮಾಡೆಲ್ ಅಲ್ಲಿಯೇ ಇದ್ದರು. ವ್ಯಕ್ತಿ ಕೂಗಾಡುವುದನ್ನು ನೋಡಿ ಭದ್ರತಾ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದಿದ್ದರು. ಅಷ್ಟರಲ್ಲಾಗಲೇ ಆರೋಪಿ ತನ್ನ ಬಟ್ಟೆಯನ್ನೆಲ್ಲ ಕಳಚಿ ಬೆತ್ತಲೆಯಾಗಿ ಸ್ವಿಮ್ಮಿಂಗ್ ಫೂಲ್ಗೆ ನುಗ್ಗಲು ಯತ್ನಿಸಿದ್ದ.
ಇದನ್ನೂ ಓದಿರಿ: ಲಾಂಗ್ ಹಿಡ್ಕೊಂಡು ಬೀದಿಯಲ್ಲಿ ಅಡ್ಡಾಡಿದ ಮಹಿಳೆ ನೋಡಿ ದಿಕ್ಕಾಪಾಲಗಿ ಓಡಿದ ಜನ..!
ಇದಾದ ಬಳಿಕ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಬಂಧಿಸಿ ಕರೆದೊಯ್ದರು. ಆರು ಗಂಟೆಗಳ ಬಳಿಕ ಆತನನ್ನುಮ ಬಿಡುಗಡೆ ಮಾಡಿದರು. ಈ ಎರಡು ಘಟನೆಯಿಂದ ಭಯಗೊಂಡಿರುವ ಜೆನ್ನರ್, ಮತ್ತಷ್ಟು ಭದ್ರತಾ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಮುಂದಾಗಿದ್ದಾರೆ. (ಏಜೆನ್ಸೀಸ್)
ಇನ್ಸ್ಟಾಗ್ರಾಂನಲ್ಲಿ ಹುಟ್ಟಿದ ಪ್ರೀತಿ ಮದ್ವೆ ಬಳಿಕ ಆತ್ಮಹತ್ಯೆಯಲ್ಲಿ ಅಂತ್ಯ! ಇದು ಯುವತಿಯ ಕಣ್ಣೀರ ಕತೆ