

ಬೆಂಗಳೂರು: ರಾಜ್ಯದಲ್ಲಿ ಕಳೆದ ವರ್ಷದ ಈ ಅವಧಿಗೆ ಹೋಲಿಸಿದರೆ ಮದ್ಯ ಮಾರಾಟದಿಂದ ಬಂದ ಆದಾಯಕ್ಕಿಂತಲೂ, ಈ ಬಾರಿಯ ಆದಾಯ ಕಡಿಮೆಯಾಗಿದೆ. ಆದರೂ ಮೇ ತಿಂಗಳಿಂದ ಸೆಪ್ಟೆಂಬರ್ವರೆಗೆ ನಡೆದ ವಹಿವಾಟಿನಲ್ಲಿ ತುಸು ಚೇತರಿಕೆ ಕಂಡುಬಂದಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಮದ್ಯ ಮಾರಾಟದಿಂದ 10,880 ಕೋಟಿ ರೂ. ಮದ್ಯದಿಂದ ಆದಾಯ ಬಂದಿತ್ತು. ಆದರೆ, ಈ ಬಾರಿ ಇದೇ ಅವಧಿಯಲ್ಲಿ 9,518 ಕೋಟಿ ರೂ. ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 1,362 ಕೋಟಿ ರೂ. ಕಡಿಮೆಯಾಗಿದೆ. ಇದು ಓದಿ: ರಾಜ್ಯದಲ್ಲಿ ಶೇ.97 ಕರೊನಾ ಸೋಂಕಿತರಿಗೆ ಲಕ್ಷಣಗಳೇ ಇಲ್ಲ; ಅದರಲ್ಲೂ ಈ ಜಿಲ್ಲೆ ಮುಂಚೂಣಿಯಲ್ಲಿ
ಈ ಬಾರಿ ಲಾಕ್ಡೌನ್ ಇದ್ದುದರಿಂದ ಮಾರ್ಚ್ನಿಂದ ಮೇ ವರೆಗೂ ಮದ್ಯ ಮಾರಾಟ ಇರಲಿಲ್ಲ. ನಂತರ ಮೇನಲ್ಲಿ 1397 ಕೋಟಿ ರೂ., ಜೂನ್‌ನಲ್ಲಿ 2,549 ಕೋಟಿ ರೂ., ಜುಲೈನಲ್ಲಿ 1,904 ಕೋಟಿ ರೂ., ಆಗಸ್ಟ್‌ನಲ್ಲಿ 1,830 ಕೋಟಿ ರೂ. ಹಾಗೂ ಸೆಪ್ಟಂಬರ್‌ನಲ್ಲಿ 1,936 ಕೋಟಿ ರೂ. ಆದಾಯ ಬಂದಿದೆ.
249.49 ಲಕ್ಷ ಬಾಕ್ಸ್ ಇಂಡಿಯನ್ ಮೇಡ್ ಲಿಕ್ಕರ್(ಐಎಂಎಲ್) ಮಾರಾಟವಾಗಿದೆ. ಕರೊನಾ ಕಾರಣದಿಂದಲೇ ಆದಾಯದಲ್ಲಿ ನಷ್ಟವಾಗಿದ್ದಾಗಿ ಅಬಕಾರಿ ಅಧಿಕಾರಿಗಳು ಹೇಳಿದ್ದಾರೆ.