

ವಿಜಯವಾಣಿ ಸುದ್ದಿಜಾಲ ಕುಂಬಳೆ
ಬೀರಂತಬೈಲಿನ ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ ಜಿಲ್ಲಾ ಸಂಘದ 91ನೇ ಮಹಾಸಭೆ ಬೀರಂತಬೈಲಿನಲ್ಲಿ ಜರುಗಿತು. ಸಂಘದ ಅಧ್ಯಕ್ಷ ಕಮಲಾಕ್ಷ ಕಲ್ಲುಗದ್ದೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಉಪಸಂಘಗಳ ಕಾರ್ಯಚಟುವಟಿಕೆಗಳ ಆಧಾರದ ಮೇಲೆ ಜಿಲ್ಲಾ ಸಂಘದ ಪ್ರಗತಿ ಅವಲಂಬಿಸಿದೆ. ಉಪಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಇನ್ನೂ ಹೆಚ್ಚಿನ ರೀತಿಯಲ್ಲಿ ಕಾರ್ಯಪ್ರವೃತ್ತ್ತರಾಗಿ ಜಿಲ್ಲಾ ಸಂಘದೊಂದಿಗೆ ಕೈಜೋಡಿಸಬೇಕೆಂದು ಕರೆ ನೀಡಿದರು.
2023ನೇ ವರ್ಷದ ವರದಿಯನ್ನು ಕಾರ್ಯದರ್ಶಿ ಸತೀಶ್ ಕುಮಾರ್ ದೋಣಿಬಾಗಿಲು ಮಂಡಿಸಿದರು. 2023ನೇ ವರ್ಷದ ಲೆಕ್ಕಪತ್ರ ಮತ್ತು 2024-2025ರ ಮುಂಗಡಪತ್ರವನ್ನು ಕೋಶಾಧಿಕಾರಿ ಸತೀಶ್ ಮಾಸ್ತರ್ ಕೂಡ್ಲು ಮಂಡಿಸಿದರು. ಜಿಲ್ಲಾ ಮಹಿಳಾ ಸಂಘ, ಜಿಲ್ಲಾ ಯುವಸಂಘ, ಉಪಸಂಘಗಳು ತಮ್ಮ ಕ್ಷೇತ್ರದ ವರದಿ ಮತ್ತು ಲೆಕ್ಕಪತ್ರವನ್ನು ಮಂಡಿಸಿ ಪ್ರತಿಯನ್ನು ಜಿಲ್ಲಾ ಅಧ್ಯಕ್ಷರಿಗೆ ಹಸ್ತಾಂತರಿಸಿದವು. ಐ.ಸಿ.ಎ.ಆರ್-ಸಿ.ಪಿ.ಸಿ.ಆರ್.ಐ.ಕಾಸರಗೋಡಿನಲ್ಲಿ ನಡೆದ 108ನೇ ಸಂಸ್ಥಾಪನಾ ದಿನದ ಸಂದರ್ಭದಲ್ಲಿ 2024ನೇ ಸಾಲಿನ ಅತ್ಯುತ್ತಮ ತಾಂತ್ರಿಕ ಪ್ರಶಸ್ತಿ ಪುರಸ್ಕೃತರಾದ ಪಾಂಡುರಂಗ ಅವರನ್ನು ಜಿಲ್ಲಾ ಸಂಘದ ವತಿಯಿಂದ ಅಭಿನಂದಿಸಲಾಯಿತು.
ಜಿಲ್ಲಾ ಗೌರವ ಕಾರ್ಯದರ್ಶಿ ಬಿ.ಪಿ.ವೆಂಕಟ್ರಮಣ, ಜಿಲ್ಲಾ ಮಹಿಳಾ ಗೌರವಾಧ್ಯಕ್ಷೆ ಆಶಾ ರಾಧಾಕೃಷ್ಣ, ಉಪಸಂಘಗಳ ಪದಾಧಿಕಾರಿಗಳು ಶುಭ ಹಾರೈಸಿದರು. ಸತೀಶ್ ಕುಮಾರ್ ದೋಣಿಬಾಗಿಲು ಸ್ವಾಗತಿಸಿ, ಉಷಾಕಿರಣ್ ಅಣಂಗೂರು ವಂದಿಸಿದರು. ಚಂಚಲಾಕ್ಷಿ ಬೀರಂತಬೈಲು ನಿರೂಪಿಸಿದರು. ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.