

ಚೆನ್ನೈ: ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮ ಎಂದು ಹೇಳುತ್ತಾರೆ. ಆದರೆ ಅವರು ಒಳ್ಳೆಯ ಮತ್ತು ಕೆಟ್ಟ ವಿಚಾರಗಳ ನಡುವೆ ಇರುವ ವ್ಯತ್ಯಾಸವನ್ನು ತಿಳಯದಷ್ಟು ಮುಗ್ಧರಾಗಿರುತ್ತಾರೆ. ಆದರೆ ಇಲ್ಲೊಬ್ಬಳು ಬಾಲಕಿ ತಂದೆ ಹೇಳಿದ ಒಂದೇ ಒಂದು ಮಾತಿಗೆ ಪ್ರಾಣ ಕಳೆದುಕೊಂಡಿದ್ದಾಳೆ.
ಅಪ್ಪನ ಮಾತಿಗೆ ಮನನೊಂದು 9 ವರ್ಷದ ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ತಿರುವಳ್ಳೂರ್ ನಲ್ಲಿ ಸೋಮವಾರ ( ಮಾ.27) ನಡೆದಿರುವುದು ವರದಿಯಾಗಿದೆ.
ನಡೆದಿದ್ದೇನು?: ಮನೆಯ ಬಳಿ ಆಡುತ್ತಿದ್ದ ಮಗಳಿಗೆ ತಂದೆ ಕೃಷ್ಣಮೂರ್ತಿ ಆಡಿದ್ದು, ಸಾಕು ಈಗ ಹೋಗಿ ಮನೆಯಲ್ಲಿ ಓದು ಎಂದು ಹೇಳಿ ಮಗಳ ಕೈಯಲ್ಲಿ ಮನೆಯ ಕೀ ಕೊಟ್ಟು ಕೆಲಸಕ್ಕೆ ಹೋಗಿದ್ದಾರೆ. ಸಂಜೆ 8:15 ರ ಹೊತ್ತಿಗೆ ಮನೆಗೆ ಬಂದು ಮಗಳ ಬಳಿ ಬಾಗಿಲು ತೆಗೆಯುವಂತೆ ಹೇಳಿದ್ದಾರೆ. ಎಷ್ಟು ಕರೆದರೂ ಪ್ರತಿಕ್ರಿಯೆ ಬಂದಿಲ್ಲ. ಈ ಕಾರಣದಿಂದ ಕಿಟಕಿಯನ್ನು ಒಡೆದು ಮನೆಯೊಳಗೆ ಕೃಷ್ಣಮೂರ್ತಿ ಹೋಗಿದ್ದಾರೆ.
ಇದನ್ನೂ ಓದಿ: 15 ವರ್ಷಗಳ ಬಳಿಕ ಪೆಪ್ಸಿ ಹೊಸ ಲೋಗೋ ಅನಾವರಣ!
ಒಳಗೆ ಹೋಗಿ ನೋಡಿದಾಗ ಮಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.