More

    ಆನ್‌ಲೈನ್ ಮೂಲಕ 85 ಸಾವಿರ ರೂ. ವಂಚನೆ

    ಮಂಗಳೂರು: ಆನ್‌ಲೈನ್ ಮೂಲಕ ಹೂಡಿಕೆ ಮಾಡಿಸಿ ವ್ಯಕ್ತಿಯೋರ್ವರಿಗೆ 85,000 ರೂ. ವಂಚಿಸಲಾಗಿದೆ.


    ದೂರುದಾರರಿಗೆ ಅಪರಿಚಿತ ವ್ಯಕ್ತಿಯೋರ್ವ ಮೇ 5ರಂದು ಇನ್‌ಸ್ಟಾಗ್ರಾಂ ಖಾತೆ ಮೂಲಕ ಇನ್‌ವೆಸ್ಟ್‌ಮೆಂಟ್ ಪ್ಲಾನ್ ಬಗ್ಗೆ ಪೋಸ್ಟ್ ಮಾಡಿದ್ದ. ಅನಂತರ ಅಪರಿಚಿತ ವ್ಯಕ್ತಿ ಆತನನ್ನು ದರ್ಶೆಲಾ ಎಂದು ಪರಿಚಯಿಸಿಕೊಂಡು ಇನ್‌ವೆಸ್ಟ್‌ಮೆಂಟ್ ಪ್ಲಾನ್ ಬಗ್ಗೆ ವಿವರಿಸಿದ್ದ. 10,000 ರೂ.ಗಳಿಂದ 10 ಲ.ರೂ.ಗಳವರೆಗೆ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭ ಗಳಿಸಬಹುದು ಎಂದು ಹೇಳಿದ್ದ. ದೂರುದಾರರು ಅದನ್ನು ನಿಜವೆಂದು ನಂಬಿ ಹಣ ಹೂಡಿಕೆ ಮಾಡಲು ಮುಂದಾದರು. ಹಂತ ಹಂತವಾಗಿ 55,000 ರೂ., 20,000 ರೂ. ಮತ್ತು 10,000 ರೂ. ಹೀಗೆ ಒಟ್ಟು 85,000 ರೂ.ಗಳನ್ನು ಅಪರಿಚಿತನ 8980055313 ಸಂಖ್ಯೆಗೆ ಯುಪಿಐ ಮುಖಾಂತರ ವರ್ಗಾಯಿಸಿದ್ದಾರೆ. ಆದರೆ ಅಪರಿಚಿತ ಯಾವುದೇ ಹಣ ವಾಪಸ್ ನೀಡಲಿಲ್ಲ. ಅಪರಿಚಿತ ಇನ್ನಷ್ಟು ಹೂಡಿಕೆ ಮಾಡಲು ತಿಳಿಸಿದಾಗ ದೂರುದಾರರು ನಿರಾಕರಿಸಿದರು. ಅನಂತರ ಅಪರಿಚಿತ ವ್ಯಕ್ತಿ ದೂರುದಾರರನ್ನು ಇನ್‌ಸ್ಟಾಗ್ರಾಂನಲ್ಲಿ ಬ್ಲಾಕ್ ಮಾಡಿದ್ದಾನೆ. ಈ ಬಗ್ಗೆ ಮಂಗಳೂರಿನ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts