ಬಿಜೆಪಿ ಮುಖಂಡನ ಹತ್ಯೆ; ತನಿಖೆ ಮೊದಲ ಹಂತದಲ್ಲಿ 8 ಮಂದಿ ಬಂಧನ

BJP Leader
Published on

ಶ್ರೀನಗರ: ಇಲ್ಲಿನ ಬಂಡಿಪೊರಾ ಜಿಲ್ಲೆಯ ಬಿಜೆಪಿ ಮುಖಂಡ ಶೇಖ್​ ವಾಸಿಂ ಬಾರಿ ಹಾಗೂ ಅವರ ಸಹೋದರ, ತಂದೆಯನ್ನು ನಿನ್ನೆ ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಶೇಖ್​ ವಾಸಿಂ ಅವರು ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷರೂ ಹೌದು. ಪ್ರಕರಣತ ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು ಇಂದು ಶೇಖ್​ ವಾಸಿಂ ಅವರ ಭದ್ರತಾ ಸಿಬ್ಬಂದಿಯನ್ನು ಬಂಧಿಸಿದ್ದಾರೆ.

ಶೇಖ್​ ವಾಸಿಂ ರಕ್ಷಣೆಗಾಗಿ ನಿಯೋಜಿಸಲಾಗಿದ್ದ ಎಂಟು ಮಂದಿ ಸೆಕ್ಯೂರಿಟಿ ಗಾರ್ಡ್​ಗಳನ್ನು ಬಂಧಿಸಿರುವ ಪೊಲೀಸರು ಅವರನ್ನೆಲ್ಲ ವಿಚಾರಣೆಗೆ ಒಳಪಡಿಸಿದ್ದಾರೆ.

ಬಂಡಿಪೊರಾ ಪಟ್ಟಣದ ಮುಸ್ಲಿಮಾಬಾದ್​ನಲ್ಲಿರುವ ಅಂಗಡಿ ನಡೆಸುತ್ತಿದ್ದ ಶೇಖ್​ ವಾಸಿಂ, ಅವರ ತಂದೆ ಮತ್ತು ಸಹೋದರನನ್ನು ಅದೇ ಅಂಗಡಿಯಲ್ಲಿ ಉಗ್ರರು ಗುಂಡು ಹಾರಿಸಿ ಕೊಂದಿದ್ದರು. ಶೇಖ್​ ವಾಸಿಂ ಸ್ಥಳದಲ್ಲೇ ಮೃತಪಟ್ಟಿದ್ದರೆ, ಅವರ ತಂದೆ ಮತ್ತು ಸಹೋದರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net