ಮೂತ್ರಪಿಂಡದ ಆರೋಗ್ಯ ಸುಧಾರಿಸಲು ಈ 7 ಆಹಾರಗಳನ್ನು ತಪ್ಪದೆ ಸೇವಿಸಿ!| Kidney Health

kidney final
Published on

Kidney Health: ಮೂತ್ರಪಿಂಡಗಳು ಮಾನವ ದೇಹದ ಪ್ರಮುಖ ಅಂಗಗಳಲ್ಲಿ ಒಂದು. ಇವು ಪ್ರತಿದಿನ ಶರೀರದಲ್ಲಿ ಸುಮಾರು 50 ಗಾಲನ್ ರಕ್ತವನ್ನು ಶೋಧಿಸಿ, 1-2 ಲೀಟರ್ ಮೂತ್ರವನ್ನು ಉತ್ಪತ್ತಿ ಮಾಡುತ್ತವೆ. ಇದರ ಜೊತೆಗೆ, ಮೂತ್ರಪಿಂಡಗಳು ಇಸ್ಪ್ರೋಪೊಯೆಟಿನ್ ಎಂಬ ಹಾರ್ಮೋನ್ ಅನ್ನು ಉತ್ಪತ್ತಿ ಮಾಡುತ್ತವೆ, ಇದು ರಕ್ತಕಣಗಳ ಉತ್ಪತ್ತಿಗೆ ಸಹಾಯ ಮಾಡುತ್ತದೆ.

Healthy Kidney

ಕಿಡ್ನಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಆರೋಗ್ಯಕರ ಆಹಾರ ಸೇವನೆ, ನೀರಿನ ಸಮರ್ಪಕ ಸೇವನೆ, ಧೂಮಪಾನವಿಲ್ಲದ ಜೀವನಶೈಲಿ ಹಾಗೂ ನಿಯಮಿತ ವೈದ್ಯಕೀಯ ತಪಾಸಣೆ ಅಗತ್ಯ. ಡಯಾಬಿಟಿಸ್,ಅಧಿಕ ರಕ್ತದೊತ್ತಡ, ಅಧಿಕ ಉಪ್ಪು ಸೇವನೆ ಮೊದಲಾದವು ಕಿಡ್ನಿಗೆ ಹಾನಿಕಾರಕ. ಆರೋಗ್ಯಕರ ಜೀವನ ಶೈಲಿಯಿಂದ ಕಿಡ್ನಿಯ ಕಾಯಿಲೆಗಳನ್ನು ತಡೆಯಬಹುದು. ಇನ್ನು ನೀವು ಏನಾದರೂ ಮೂತ್ರಪಿಂಡದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ನಿಮ್ಮ ಆರೋಗ್ಯವನ್ನು ಸುಧಾರಿಸಲು ಈ 7 ಆಹಾರಗಳನ್ನು ಸೇವಿಸಿ....

* ಹೂಕೋಸು

ಹೂಕೋಸಿನಲ್ಲಿ ಫೈಬರ್​, ವಿಟಮಿನ್​ ಸಿ ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತದೆ. ಇದರಲ್ಲಿ ಪೊಟ್ಯಾಸಿಯಮ್​ ಮತ್ತು ಆಕ್ಸಲೇಟ್​ಗಳು ಕಡಿಮೆ ಇರುವುದರಿಂದ ಮೂತ್ರಪಿಂಡದ ಆರೋಗ್ಯದ ಮೇಲೆ ಸಕರಾತ್ಮಕ ಪರಿಣಾಮ ಬೀರುತ್ತವೆ. ಇನ್ನು ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದವರು, ಈ ಆಹಾರ ಸೇವನೆ ಮಾಡುವುದರಿಂದ ಆರೋಗ್ಯ ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.

* ಬೆರಿಹಣ್ಣುಗಳು

ಬೆರಿಹಣ್ಣುಗಳು ಕಡಿಮೆ ಸೋಡಿಯಂ, ರಂಜಕ, ಪೊಟ್ಯಾಸಿಯಂ ಅಂಶವನ್ನು ಹೊಂದಿರುತ್ತವೆ. ಆದರಿಂದ ಮೂತ್ರಪಿಂಡದ ಸಮಸ್ಯೆ ಹೊಂದಿರುವವರು ಈ ಬೆರಿಹಣ್ಣುಗಳನ್ನು ಸೇವನೆ ಮಾಡುವುದರಿಂದ ಮೂತ್ರಪಿಂಡದ ಉರಿಯೂತ, ಆಕ್ಸಿಡೇಟಿವ್​ ಒತ್ತಡವನ್ನು ಕಡಿಮೆ ಮಾಡುತ್ತದೆ.

* ಬೆಳ್ಳುಳ್ಳಿ

ಬೆಳ್ಳುಳ್ಳಿಯು ಮೂತ್ರಪಿಂಡದ ಸ್ನೇಹಿಯಾಗಿದ್ದು, ಉರಿಯೂತದ ಗುಣಲಕ್ಷಣಗಳು ಹಾಗೂ ರಕ್ತದೊತ್ತಡವನ್ನು ತಗ್ಗಿಸುವಂತಹ ಸಾಮರ್ಥ್ಯವನ್ನು ಹೊಂದಿದೆ. ಇದನ್ನು ಸೇವಿಸುವುದರಿಂದ ದೀರ್ಘಕಾಲಿನ ಮೂತ್ರಪಿಂಡದ ಹಾನಿಯನ್ನು ತಪ್ಪಿಸುತ್ತದೆ.

* ಸೇಬುಗಳು

ಸೇಬುಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶ ಮತ್ತು ಕೊಲೆಸ್ಟ್ರಾಲ್​ ಮಟ್ಟವನ್ನು ಕಡಿಮೆ ಮಾಡಿ, ಮೂತ್ರಪಿಂಡದ ಆರೋಗ್ಯವನ್ನು ಕಾಪಾಡುತ್ತದೆ. ಸೇಬು ಪೊಟ್ಯಾಸಿಯಮ್​ನಂತಹ ಆಮ್ಲಗಳನ್ನು ಹೊಂದಿರುವುದರಿಂದ ಮೂತ್ರಪಿಂಡದಲ್ಲಾಗುವ ಕಲ್ಲುಗಳನ್ನು ನಿಯಂತ್ರಿಸುತ್ತದೆ.

ಇದನ್ನೂ ಓದಿ: https://www.vijayavani.net/if-you-grow-these-5-plants-at-home-youre-guaranteed-to-have-good-luck

* ಎಲೆಕೋಸು

ಎಲೆಕೋಸಿನಲ್ಲಿ ವಿಟಮಿನ್​ ಕೆ, ಸಿ ಮತ್ತು ಬಿ6 ವಿಟಮಿನ್​ ಹೊಂದಿರುತ್ತದೆ. ನಾವು ಸೇವಿಸುವ ಆಹಾರದೊಂದಿಗೆ ಎಲೆಕೋಸನ್ನು ತಿನ್ನುವುದರಿಂದ ಮೂತ್ರಪಿಂಡದ ಸಮಸ್ಯೆಗಳನ್ನು ತಡೆಯಬಹುದು.

* ಕೆಂಪು ದೊಣ್ಣೆ ಮೆಣಸು

ಕೆಂಪು ದೊಣ್ಣೆ ಮೆಣಸನ್ನು ಸೇವಿಸುವುದರಿಂದ ಮೂತ್ರಪಿಂಡದ ಸಮಸ್ಯೆಗಳಿಂದ ಪಾರಾಗಬಹುದು. ಇದು ವಿಟಮಿನ್ ಸಿ ಮತ್ತು ವಿಟಮಿನ್ ಎ ಯನ್ನು ಹೊಂದಿರುತ್ತದೆ. ಹಾಗೆಯೇ ಹೆಚ್ಚಿನ ಮಟ್ಟದ ಜೀವಸತ್ವಗಳು, ಉತ್ಕರ್ಷಣ ನಿರೋಧಕಗಳು ಮತ್ತು ಫೈಬರ್ ಅಂಶವನ್ನು ಹೊಂದಿರುವುದರಿಂದ ಉರಿಯೂತವನ್ನು ಕಡಿಮೆ ಮಾಡಿ, ಆರೋಗ್ಯವನ್ನು ಹೆಚ್ಚಿಸುತ್ತದೆ.

* ಮೊಟ್ಟೆಯ ಬಿಳಿಭಾಗ

ಮೊಟ್ಟೆಯ ಬಿಳಿಭಾಗವು ಅಧಿಕವಾದಂತಹ ಪ್ರೊಟೀನ್​ ಹೊಂದಿರುತ್ತದೆ. ಪ್ರೊಟೀನ್​ ಸೇವನೆಯು ಮೂತ್ರಪಿಂಡಕ್ಕೆ ಸಹಾಯವಾಗಿದೆ ಏಕೆಂದರೆ ಇದು ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. (ಏಜೆನ್ಸೀಸ್​)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net