

Old Man : ವೃದ್ಧನೊಬ್ಬ ರಹಸ್ಯವಾಗಿ ಪ್ರಾರಂಭಿಸಿದ ವಿವಾಹೇತರ ಸಂಬಂಧವು ಆತನ ಪ್ರಾಣವನ್ನೇ ಬಲಿ ಪಡೆದುಕೊಂಡ ವಿಚಿತ್ರ ಘಟನೆ ಚೀನಾದಲ್ಲಿ ನಡೆದಿದೆ.
1980ರ ದಶಕದಲ್ಲಿ ಅವರಿಬ್ಬರೂ ಒಂದೇ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಇದಾದ ಸುಮಾರು 43 ವರ್ಷಗಳ ಬಳಿಕ 2023 ರಲ್ಲಿ ಒಂದು ಪಾರ್ಟಿಯಲ್ಲಿ ಮತ್ತೆ ಭೇಟಿಯಾದರು. ಈ ಒಂದು ಭೇಟಿ ಪ್ರೀತಿಗೆ ತಿರುಗಿತು. ಅಲ್ಲದೆ, ವಿವಾಹೇತರ ಸಂಬಂಧವು ಕೂಡ ಬೆಳೆಯಿತು.
ಅದೇ ದಿನ ಹತ್ತಿರದ ಹೋಟೆಲ್ನಲ್ಲಿ ಗೆಳತಿ ಬುಕ್ ಮಾಡಿದ ಕೋಣೆಯಲ್ಲಿ ರಾತ್ರಿ ಕಳೆದು, ಲೈಂಗಿಕ ಕ್ರಿಯೆ ನಡೆಸಿದರು. ಆದರೆ, ಮಹಿಳೆ ಬೆಳಗ್ಗೆ ಎದ್ದಾಗ, ತನ್ನ ಗೆಳೆಯ ತನ್ನ ಪಕ್ಕದಲ್ಲಿ ಸತ್ತು ಬಿದ್ದಿರುವುದನ್ನು ಕಂಡಳು. ಬಳಿಕ ಹೋಟೆಲ್ ಸಿಬ್ಬಂದಿಗೆ ಈ ಮಾಹಿತಿ ತಿಳಿದು, ತಕ್ಷಣ ವೈದ್ಯರಿಗೆ ಕರೆ ಮಾಡಿದರು. ಆದರೆ, ಅಷ್ಟರಲ್ಲಾಗಲೇ ವೃದ್ಧ ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದರು.
66 ವರ್ಷದ ವ್ಯಕ್ತಿಯ ಸಾವಿನ ಬಗ್ಗೆ ಅನುಮಾನಗೊಂಡ ಆತನ ಕುಟುಂಬ, ಮಹಿಳೆಯ ವಿರುದ್ಧ ಪೊಲೀಸ್ ದೂರು ದಾಖಲಿಸಿತು. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದಾಗ, 67 ಲಕ್ಷ ರೂ. ಪರಿಹಾರವನ್ನು ನೀಡಲು ಆರಂಭಿಕ ಆದೇಶ ಹೊರಡಿಸಿತು. ಆದರೆ, ಆ ವ್ಯಕ್ತಿ ಆರೋಗ್ಯ ಸಮಸ್ಯೆಯಿಂದ ಮೃತಪಟ್ಟಿದ್ದಾನೆ ಎಂದು ತಿಳಿದ ನಂತರ, ನ್ಯಾಯಾಲಯವು ದಂಡವನ್ನು 7.5 ಲಕ್ಷ ರೂ.ಗೆ ಇಳಿಸಿತು.
ಆದಾಗ್ಯೂ, ಮಹಿಳೆ, ಆತನ ಸ್ಥಿತಿ ತಿಳಿದು ಮೊದಲೇ ಹಿಂತಿರುಗಿದ್ದರೆ ಆತನನ್ನು ಉಳಿಸಬಹುದಿತ್ತು ಎಂದು ನ್ಯಾಯಾಲಯವು ಗಮನಸೆಳೆದಿದೆ. 66 ವರ್ಷದ ವ್ಯಕ್ತಿಯ ಸಾವು ಆತನ ಗೆಳತಿಯ ಅನುಚಿತ ವರ್ತನೆಯಿಂದಾಗಿ ಎಂದು ನ್ಯಾಯಾಲಯ ತೀರ್ಪು ನೀಡಿದ್ದು, ಪರಿಹಾರ ನೀಡುವಂತೆ ಆದೇಶಿಸಿದೆ. (ಏಜೆನ್ಸೀಸ್)