ನಿಡೆಕ್ ಕಾರ್ಪೊರೇಷನ್‌ನಿಂದ ಹುಬ್ಬಳ್ಳಿಯಲ್ಲಿ 600 ಕೋಟಿ ರೂ.ಹೂಡಿಕೆ!: ಸಚಿವ ಎಂ.ಬಿ.ಪಾಟೀಲ್

mbp

ಬೆಂಗಳೂರು: ಜಪಾನ್ ದೇಶದ ನಿಡೆಕ್ ಕಾರ್ಪೋರೇಷನ್ ಹುಬ್ಬಳ್ಳಿ-ಧಾರವಾಡ ಕೈಗಾರಿಕಾ ಪ್ರದೇಶದಲ್ಲಿ ಹೆಚ್ಚುವರಿಯಾಗಿ 150 ಕೋಟಿ ರೂ. ಹೂಡಿಕೆಯೊಂದಿಗೆ ತನ್ನ ತಯಾರಿಕಾ ಘಟಕ ವಿಸ್ತರಿಸಲಿದೆʼಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Breaking News: ಸೆ.28ಕ್ಕೆ ನಿಗದಿಯಾಗಿದ್ದ ಪಿಎಸ್​ಐ ನೇಮಕಾತಿ ಪರೀಕ್ಷೆ ಮತ್ತೆ ಮುಂದೂಡಿಕೆ!

ನಿಡೆಕ್ ಮೋಷನ್ ಆ್ಯಂಡ್ ಎನರ್ಜಿ ಅಧ್ಯಕ್ಷ ಮೈಕೆಲ್ ಬ್ರಿಗ್ಸ್ ಅವರು ಗುರುವಾರ ಇಲ್ಲಿ ಸಚಿವರ ಜೊತೆಗೆ ನಡೆಸಿದ ಸಭೆಯಲ್ಲಿ ಈ ವಿಸ್ತರಣಾ ಯೋಜನೆ ಪ್ರಕಟಿಸಲಾಗಿದೆ. ನಿಡೆಕ್, ಈ ಹಿಂದೆ ರಾಜ್ಯದಲ್ಲಿ 450 ಕೋಟಿ ರೂ. ಹೂಡಿಕೆ ಮಾಡಿತ್ತು. ಸಚಿವ ಪಾಟೀಲ ಅವರ ಇತ್ತೀಚಿನ ಜಪಾನ್ ಭೇಟಿಯ ನಂತರ, ಕಂಪನಿಯು ಈಗ ಈ ಹೆಚ್ಚುವರಿ ಬಂಡವಾಳ ಹೂಡಿಕೆಗೆ ಮುಂದೆ ಬಂದಿದೆ.

ಈ ಹೊಸ ಹೂಡಿಕೆಯು ಕರ್ನಾಟಕದ ಕೈಗಾರಿಕಾ ಉತ್ತೇಜನಾ ಕ್ರಮಗಳ ಬಗ್ಗೆ ನಿಡೆಕ್ ಹೊಂದಿರುವ ವಿಶ್ವಾಸದ ದ್ಯೋತಕವಾಗಿದೆ. ಈ ಯೋಜನೆಯ ಕಾಮಗಾರಿಯು 2025ರ ಮಾರ್ಚ್ ಒಳಗೆ ಪೂರ್ಣಗೊಳ್ಳಲಿದ್ದು, ಅಕ್ಟೋಬರ್ ವೇಳೆಗೆ ಕಾರ್ಯಾರಂಭ ಮಾಡಲಿದೆ. ಈ ಯೋಜನೆಯ ವಿಸ್ತರಣೆಯಿಂದ 800 ಉದ್ಯೋಗ ಅವಕಾಶಗಳು ಸೃಷ್ಟಿಯಾಗುವ ನಿರೀಕ್ಷೆ ಇದೆʼಎಂದು ಸಚಿವರು ಹೇಳಿದ್ದಾರೆ.

ನಿಡೆಕ್ ಕಾರ್ಪೊರೇಷನ್‌ನಿಂದ ಹುಬ್ಬಳ್ಳಿಯಲ್ಲಿ 600 ಕೋಟಿ ರೂ.ಹೂಡಿಕೆ!: ಸಚಿವ ಎಂ.ಬಿ.ಪಾಟೀಲ್

ಇಂಧನ ಸಂಗ್ರಹ ಪರಿಣತಿ ಬಳಕೆ: ಇಂಧನ ಸಂಗ್ರಹ ಕ್ಷೇತ್ರದಲ್ಲಿಯೂ ಪರಿಣತಿ ಮತ್ತು ಅಪಾರ ಅನುಭವ ಹೊಂದಿರುವ ನಿಡೆಕ್ ಸಹಯೋಗದಲ್ಲಿ ರಾಜ್ಯದಲ್ಲಿ ಉತ್ಪಾದನೆಯಾಗುವ ಹೆಚ್ಚುವರಿ ವಿದ್ಯುತ್ ಸಂಗ್ರಹದ ತಾಂತ್ರಿಕ ಸಾಧ್ಯತೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ರಾಸಾಯನಿಕಗಳಲ್ಲಿ ವಿದ್ಯುತ್‌ ಶೇಖರಣೆ ಮಾಡುವ ತಂತ್ರಜ್ಞಾನವು ಈಗಾಗಲೇ ಯುರೋಪ್‌ನಲ್ಲಿ ಬಳಕೆಯಲ್ಲಿದೆ. ಅದನ್ನು ರಾಜ್ಯದಲ್ಲಿಯೂ ಕಾರ್ಯಗತಗೊಳಿಸುವ ಸಾಧ್ಯತೆಗಳನ್ನು ಪರಿಶೀಲಿಸಲಾಯಿತು.

ಈ ನಿಟ್ಟಿನಲ್ಲಿ ಇಂಧನ ಇಲಾಖೆಯ ಅಧಿಕಾರಿಗಳ ಜೊತೆಗೆ ವಿವರವಾಗಿ ಚರ್ಚಿಸಲು ಕಂಪನಿಗೆ ಸೂಚಿಸಲಾಗಿದೆ. ಇಂಧನ ಸಚಿವರ ಜೊತೆ ಭೇಟಿ ನಿಗದಿಪಡಿಸಲು ಅಧಿಕಾರಿಗಳಿಗೆ ಸಲಹೆ ನೀಡಲಾಗಿದೆ. ವಿದೇಶಗಳಲ್ಲಿ ಬಳಕೆಯಲ್ಲಿ ಇರುವ ಈ ತಂತ್ರಜ್ಞಾನವನ್ನು ರಾಜ್ಯದಲ್ಲಿಯೂ ಕಾರ್ಯಗತಗೊಳಿಸುವ ಸಾಧ್ಯತೆಗಳನ್ನು ಪರಿಶೀಲಿಸಲು ಕ್ರಮ ಕೈಗೊಳ್ಳಲಾಗಿದೆʼ ಎಂದು ಸಚಿವ ಪಾಟೀಲ ಹೇಳಿದ್ದಾರೆ.

ನಿಡೆಕ್‌ ಇಂಡಿಯಾದ ಅಧ್ಯಕ್ಷ ಹಾಗೂ ಕಂಟ್ರಿ ಮ್ಯಾನೇಜರ್‌ ಗಿರೀಶ್ ಕುಲಕರ್ಣಿ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಆಯುಕ್ತರಾಗಿರುವ ಶ್ರೀಮತಿ ಗುಂಜನ್‌ ಕೃಷ್ಣ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.

ಅಕ್ರಮವಾಗಿ ನಿರ್ಮಿಸಿದ್ದ ಮಸೀದಿಯ ಅನಧಿಕೃತ ಭಾಗ ತೆರವು; ವಿಡಿಯೋ ವೈರಲ್​!

Share This Article

Skin care: ಕಣ್ಣುಗಳ ಕೆಳಗಿರುವ ಚರ್ಮ ಸುಕ್ಕುಗಟ್ಟಿದೆಯೇ? ಹೀಗೆ ಮಾಡಿ..

ಕಣ್ಣುಗಳು(Skin care) ಸೂಕ್ಷ್ಮ ಅಂಗಗಳಾಗಿದ್ದು, ಅವುಗಳ ಕೆಳಗಿರುವ ಚರ್ಮವು ಸಹ ಸೂಕ್ಷ್ಮವಾಗಿರುತ್ತದೆ. ಬಿಸಿಲು, ಪೌಷ್ಠಿಕ ಆಹಾರದ…

Health Tips : ಮೆಟ್ಟಿಲು ಹತ್ತುವಾಗ ಸುಸ್ತಾಗುತ್ತದಾ..! ಈ ಸಲಹೆಗಳನ್ನು ಅನುಸರಿಸಿ

ಬೆಂಗಳೂರು: ಮೆಟ್ಟಿಲು ಹತ್ತುವಾಗ ಉಸಿರಾಟದ ತೊಂದರೆ ಸಾಮಾನ್ಯ. ಈ ಸಮಸ್ಯೆಯು ವಯಸ್ಸಾದಂತೆ ಹೆಚ್ಚಾಗುತ್ತಿದೆ, ಆದರೆ ಇತ್ತೀಚಿನ…