

ಶಿಕಾರಿಪುರ: ತಾಲೂಕಿನಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ನಡೆಯುತ್ತಿದ್ದು ಈವರೆಗೂ 30 ಸಾವಿರ ಸದಸ್ಯರ ನೋಂದಣಿ ಆಗಿದೆ. 60 ಸಾವಿರ ನೋಂದಣಿ ಗುರಿ ಸಾಧಿಸಲಾಗುವುದು ಎಂದು ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಸಿದ್ದಲಿಂಗಪ್ಪ ಹೇಳಿದರು.
ಸುರಗಿಹಳ್ಳಿ ಗ್ರಾಮದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಮಾತನಾಡಿ, ದೇಶಾದ್ಯಂತ ಪಕ್ಷ ಸದೃಢವಾಗಿದ್ದು ಹಿರಿಯರ ಮಾರ್ಗದರ್ಶನದಲ್ಲಿ ಹೆಚ್ಚು ಸದಸ್ಯತ್ವ ಮಾಡಲಾಗುವುದು ಎಂದು ತಿಳಿಸಿದರು.
ಮಂಡಲ ಅಧ್ಯಕ್ಷ ಎಸ್.ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ ಅಶೋಕ್ ಮಾರವಳ್ಳಿ, ಸಾಮಾಜಿಕ ಜಾಲತಾಣ ಪ್ರಮುಖ ಗಣೇಶ್ ನಾಗೆಹಳ್ಳಿ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಚಂದ್ರು ಮಳವಳ್ಳಿ, ಸದಸ್ಯತ ಅಭಿಯಾನ ಸಂಚಾಲಕ ಪ್ರವೀಣ್ ಮಳವಳ್ಳಿ, ಪ್ರತಿಮಾ, ಭಾಗ್ಯಾ, ಕೃಷ್ಣ ಜಿ.ರಾವ್, ಬಸವರಾಜಪ್ಪ, ಶಕ್ತಿ ಕೇಂದ್ರ ಪ್ರಮುಖ ಬಸನಗೌಡ, ರುದ್ರೇಶ್, ರಾಮಚಂದ್ರ ಇತರರಿದ್ದರು.