6 ಐಪಿಎಸ್ ಅಧಿಕಾರಿಗಳ ವರ್ಗಾವಣೆ‌: ತಿಂಗಳು ತುಂಬುವ ಮುನ್ನವೇ 2 ಬಾರಿ ಆರ್​.ಚೇತನ್​ ವರ್ಗಾವಣೆ

ips r chethan
Published on

ಬೆಂಗಳೂರು: ರಾಜ್ಯ ಗುಪ್ತಚರ ಇಲಾಖೆಯ ಬೆಂಗಳೂರು ಎಸ್​ಪಿ ಆರ್​.ಚೇತನ್​ ಸೇರಿ 6 ಐಪಿಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.

ಡೈರೆಕ್ಟರ್ ಆಫ್ ಸಿವಿಲ್ ರೈಟ್ಸ್ ಎನ್ಫೋರ್ಸ್​ಮೆಂಟ್​ನ ಡಿಐಜಿ ಆಗಿ ವೈ.ಎಸ್. ರವಿಕುಮಾರ್, ಮೈಸೂರು ವಿಭಾಗದ ಕರ್ನಾಟಕ ಪೊಲೀಸ್ ಅಕಾಡೆಮಿಯ ಡೈರೆಕ್ಟರ್ ಆಗಿ ದಿವ್ಯಾ ವಿ. ಗೋಪಿನಾಥ್, ಹಾವೇರಿ ಇಂಟೆಲಿಜೆನ್ಸ್​ ಎಸ್​ಪಿ ಆಗಿ ಹನುಮಂತರಾಯ, ಕೋಲಾರ ಎಸ್​ಪಿ ಆಗಿ ನಾರಾಯಣ ಎಂ., ಹಾವೇರಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಯಾಗಿ ಡಾ. ಶಿವಕುಮಾರ್, ಕಲಬುರಗಿ ನಗರ ಪೊಲೀಸ್​ ಆಯುಕ್ತರನ್ನಾಗಿ ಚೇತನ್ ಆರ್. ಅವರನ್ನು ನಿಯೋಜಿಸಿ ವರ್ಗಾವಣೆ ಮಾಡಲಾಗಿದೆ.

ಈ ಹಿಂದೆ ಮೈಸೂರು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಆಗಿದ್ದ ಆರ್​.ಚೇತನ್​ ಅವರನ್ನ ರಾಜ್ಯ ಗುಪ್ತಚರ ಇಲಾಖೆಗೆ ಕಳೆದ ಡಿಸೆಂಬರ್​ 21ರಂದು ವರ್ಗಾವಣೆ ಮಾಡಲಾಗಿತ್ತು. ತಿಂಗಳು ತುಂಬುವ ಮೊದಲೇ ಇಲ್ಲಿಂದ ಕಲಬುರಗಿಗೆ ವರ್ಗಾವಣೆ ಮಾಡಲಾಗಿದೆ. ಕಲಬುರಗಿ ನಗರ ಪೊಲೀಸ್ ಆಯುಕ್ತರಾಗಿದ್ದ ಡಾ. ವೈ.ಎಸ್. ರವಿಕುಮಾರ್​ ಅವರನ್ನ ಡೈರೆಕ್ಟರ್ ಆಫ್ ಸಿವಿಲ್ ರೈಟ್ಸ್ ಎನ್ಫೋರ್ಸ್​ಮೆಂಟ್​ನ ಡಿಐಜಿ ಆಗಿ ವರ್ಗಾವಣೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net