ನವದೆಹಲಿ: ಕೇಂದ್ರ ಬಜೆಟ್ ಈ ಬಾರಿ ಸಂಪೂರ್ಣವಾಗಿ ಪೇಪರ್ಲೆಸ್ ಆಗಿದ್ದು ಈಗ ಟೆಕ್ನಾಲಜಿ ಮೇಲೆ ಸರ್ಕಾರ ಹೆಚ್ಚಿನ ಗಮನ ಹರಿಸಲು ಶುರು ಮಾಡಿದೆ. 5ಜಿ ನೆಟ್ವರ್ಕ್ ಬಂದ ಮೇಲಂತೂ ಇದನ್ನು ಬಳಸಲು ಸರ್ಕಾರ ತುಂಬಾ ಉತ್ಸುಕವಾಗಿದೆ.
ಈಗಾಗಲೇ ದೇಶಾದ್ಯಂತ ಒಂದಷ್ಟು ಪ್ರಮುಖ ನಗರಗಳಲ್ಲಿ 5ಜಿಯನ್ನು ಶುರು ಮಾಡಲಾಗಿದೆ. ಈಗ ಈ ಟೆಕ್ನಾಲಜಿಯನ್ನು ಇನ್ನಷ್ಟು ಉನ್ನತೀಕರಿಸಲು 5ಜಿಯ ವೇಗದಲ್ಲೇ ಕಾರ್ಯನಿರ್ವಹಿಸಲು ಸಶಕ್ತ ಆ್ಯಪ್ಗಳ ಅಭಿವೃದ್ಧಿಗೆ ಸರ್ಕಾರ ಪ್ರೋತ್ಸಾಹ ನೀಡಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಒಟ್ಟು 100 ಲ್ಯಾಬ್ಗಳನ್ನು ಅಭಿವೃದ್ಧಿಪಡಿಸಲಿದೆ.
ಇವುಗಳನ್ನು ದೇಶದ ಪ್ರಮುಖ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸ್ಥಾಪಿಸಲಾಗುತ್ತದೆ. ಇದರಿಂದಾಗಿ ಸ್ಮಾರ್ಟ್ ಕ್ಲಾಸ್ರೂಮ್, ಪರಿಸಿಶನ್ ಫ್ರೇಮಿಂಗ್, ಟ್ರಾನ್ಸ್ಪೋರ್ಟ್ ಸಿಸ್ಟಮ್ ಮುಂತಾದವುಗಳನ್ನು ಅಭಿವೃದ್ಧಿಪಡಸಿಸಲು ಉದ್ದೇಶಿಸಲಾಗಿದೆ.