ಬೆಳಗಾವಿಗೆ 58 ಕೋಟಿ ರೂ.ಧನಭಾಗ್ಯ..! 8.29 ಲಕ್ಷ ಚೀಟಿದಾರರಿಗೆ ನಗದು ಸೌಲಭ್ಯ

IMG-20230716-WA0017.jpg
Published on

|ರವಿ ಗೋಸಾವಿ ಬೆಳಗಾವಿ

ರಾಜ್ಯ ಸರ್ಕಾರ ಆದ್ಯತಾ (ಬಿಪಿಎಲ್) ಪಡಿತರ ಚೀಟಿ ಹೊಂದಿರುವ ಕುಟುಂಬ ಸದಸ್ಯರಿಗೆ ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ಅಕ್ಕಿ ಬದಲು ನೇರ ನಗದು ವರ್ಗಾವಣೆ ಸೌಲಭ್ಯದಿಂದ ಪ್ರತಿ ತಿಂಗಳೂ 50 ಕೋಟಿಗೂ ಅಧಿಕ ನಗದು ಬೆಳಗಾವಿ ಜಿಲ್ಲೆಯೊಂದರಲ್ಲೇ ಪಾವತಿಯಾಗಲಿದೆ. ಯೋಜನೆ ಆರಂಭಿಸಿದ ಮೊದಲ ತಿಂಗಳಲ್ಲೇ ಜಿಲ್ಲೆಯ 8.29 ಲಕ್ಷ ಚೀಟಿದಾರರಿಗೆ 46 ಕೋಟಿ ರೂ.ಗೂ ಅಧಿಕ ರೂ.ಬಿಡುಗಡೆಯಾಗಿದ್ದು, ಇನ್ನೆರಡೇ ದಿನಗಳಲ್ಲಿ ಫಲಾನುಭವಿಗಳ ಖಾತೆಗೆ ಜಮೆಯಾಗಲಿದೆ.

ಜಿಲ್ಲೆಯಲ್ಲಿ 68,637 ಅನ್ನ ಅಂತ್ಯೋದಯ ಹಾಗೂ 10,80,880 ಬಿಪಿಎಲ್ ಸೇರಿದಂತೆ ಒಟ್ಟು 11,49,516 ಚೀಟಿದಾರ ಕುಟುಂಬಗಳಿಂದ ಒಟ್ಟಾರೆ 37,72,315 ಸದಸ್ಯರು ಅನ್ನಭಾಗ್ಯ ಫಲಾನುಭವಿಗಳಿದ್ದು, ತಲಾ 5 ಕೆಜಿಯಂತೆ ಪ್ರತಿ ತಿಂಗಳು 20 ಸಾವಿರ ಮೆಟ್ರಿಕ್ ಟನ್‌ಗೂ ಹೆಚ್ಚು ಆಹಾರ ಧಾನ್ಯ ಪೂರೈಕೆಯಾಗುತ್ತಿದ್ದು, ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ 1834 ನ್ಯಾಯ ಬೆಲೆ ಅಂಗಡಿಗಳ ಮೂಲಕ ಫಲಾನುಭವಿಗಳಿಗೆ ಈಗಾಗಲೇ ವಿತರಿಸಲಾಗುತ್ತಿದೆ.

ತಲಾ 10 ಕೆಜಿ ವಿತರಿಸಬೇಕೆಂದರೆ ಜಿಲ್ಲೆಗೆ ಪೂರೈಕೆಯಾಗುತ್ತಿರುವ 20 ಸಾವಿರ ಟನ್ ಅಕ್ಕಿಯ ಜತೆಗೆ ಹೆಚ್ಚುವರಿಯಾಗಿ 20 ಸಾವಿರ ಮೆಟ್ರಿನ್ ಅಕ್ಕಿ ಪೂರೈಸಬೇಕಾಗುತ್ತದೆ.  ಹೆಚ್ಚುವರಿ ಅಕ್ಕಿ ಸಿಗದೇ ಇರುವುದರಿಂದ ಡಿಬಿಟಿ ಮೂಲಕ ಹಣವನ್ನು ಫಲಾನುಭವಿಗಳ ಖಾತೆಗೆ ಹಾಕಲಾಗುತಿದ್ದು, ಪ್ರತಿ ತಿಂಗಳಿಗೆ 58,49 ಕೋಟಿ ರೂ.ಅನುದಾನ ಜಿಲ್ಲೆಗೆ ಬರಲಿದ್ದು, 37 ಲಕ್ಷಕ್ಕೂ ಅಧಿಕ ಜನ ಅನ್ನಭಾಗ್ಯದ ಜತೆಗೆ ಧನಭಾಗ್ಯವನ್ನೂ ಪಡೆಯಲಿದ್ದಾರೆ.

ಬೆಳಗಾವಿಯಲ್ಲಿನ ನ್ಯಾಯಬೆಲೆ ಅಂಗಡಿಯೊಂದರಲ್ಲಿ ಆಧಾರ್ ಕಾರ್ಡ್-ಬ್ಯಾಂಕ್ ಖಾತೆ ಲಿಂಕ್ ಮಾಡಿಸುವಂತೆ ಪಡಿತರ ಚೀಟಿದಾರರಿಗೆ ಅಧಿಕಾರಿಗಳು ಅರಿವು ಮೂಡಿಸುತ್ತಿರುವುದು.
ಬೆಳಗಾವಿಯಲ್ಲಿನ ನ್ಯಾಯಬೆಲೆ ಅಂಗಡಿಯೊಂದರಲ್ಲಿ ಆಧಾರ್ ಕಾರ್ಡ್-ಬ್ಯಾಂಕ್ ಖಾತೆ ಲಿಂಕ್ ಮಾಡಿಸುವಂತೆ ಪಡಿತರ ಚೀಟಿದಾರರಿಗೆ ಅಧಿಕಾರಿಗಳು ಅರಿವು ಮೂಡಿಸುತ್ತಿರುವುದು.

ಮೊದಲ ತಿಂಗಳಲ್ಲಿ ಜಿಲ್ಲಾದ್ಯಂತ ಒಟ್ಟು  ಅಂತ್ಯೋದಯ ಹಾಗೂ ಬಿಪಿಎಲ್ 8,29,208 ಪಡಿತರ ಚೀಟಿ ಕುಟುಂಬಗಳಿಗೆ ಸೋಮವಾರ ಇಲ್ಲವೇ ಮಂಗಳವಾರ ಜಮೆಯಾಗಲಿದ್ದು, 68,230 ಅಂತ್ಯೋದಯ ಚೀಟಿಗಳಲ್ಲಿ 3 ಸದಸ್ಯರಿಗಿಂತಲೂ ಕಡಿಮೆ ಇರುವ 24 ಸಾವಿರ ಚೀಟಿದಾರರಿಗೆ ಹಣ ಸಂದಾಯವಾಗುವುದಿಲ್ಲ. ಅಲ್ಲದೇ, ಬಿಪಿಎಲ್ ಕಾರ್ಡ್‌ಗಳನ್ನೂ ಸೇರಿ ಇನ್ನೂ 24 ಸಾವಿರಕ್ಕೂ ಅಧಿಕ ಬ್ಯಾಂಕ್ ಖಾತೆ ಚಲಾವಣೆಯಲ್ಲಿಲ್ಲ. 1.20 ಲಕ್ಷ ಪಡಿತರ ಚೀಟಿಗಳ ಕುಟುಂಬಕ್ಕೆ ಬ್ಯಾಂಕ್ ಖಾತೆಯೇ ಇಲ್ಲ ಅವರೆಲ್ಲರಿಗೂ ನಗದು ಜಮೆ ಮಾಡುವ ನಿಟ್ಟಿನಲ್ಲಿ  ಅಂಥವರ ಪಟ್ಟಿಮಾಡಿ ಎಲ್ಲ ನ್ಯಾಯ ಬೆಲೆ ಅಂಗಡಿಗಳಲ್ಲಿಯೂ ನೀಡಲಾಗಿದ್ದು, ಅವರನ್ನು ಸಂಪರ್ಕಿಸಿ ಬ್ಯಾಂಕ್ ಅಥವಾ ಅಂಚೆ ಖಾತೆ ಮಾಡಿಸುವುದು ಇ-ಕೆವೈಸಿ ಮಾಡಿಸಲಾಗುತ್ತಿದೆ.
‘ಪಡಿತರ ಚೀಟಿಗೆ ಬ್ಯಾಂಕ್ ಖಾತೆ ಸಂಪರ್ಕಗೊಳ್ಳದ ಫಲಾನುಭವಿಗಳ ಮಾಹಿತಿ ಪಡೆಯಲಾಗಿದ್ದು ಅವರ ಖಾತೆಯ ಲಿಂಕ್ ಮಾಡಿಸುವ ಕಾರ್ಯವನ್ನು ಭರದಿಂದ ಮಾಡಲಾಗುತ್ತಿದೆ. ಕಳೆದೊಂದು ವಾರದಲ್ಲಿ 10 ಸಾವಿರ ಖಾತೆ ತೆರೆಯಲಾಗಿದ್ದು, ಮುಂದಿನ ತಿಂಗಳಲ್ಲಿ ಅವರಿಗೂ ನಗದು ಸೌಲಭ್ಯ ದೊರೆಯಲಿದೆ’ ಎನ್ನುತ್ತಾರೆ ಆಹಾರ ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳ ಇಲಾಖೆ ಅಧಿಕಾರಿಗಳು.

ಅಂತ್ಯೋದಯ ಕಾರ್ಡ್ ನಲ್ಲಿ ಮೂವರು ಸದಸ್ಯರಿದ್ದರೆ 170 ರೂ.
ಅಂತ್ಯೋದಯ ಕಾರ್ಡ್ ನಲ್ಲಿ ಮೂವರು ಸದಸ್ಯರಿದ್ದರೆ 170 ರೂ.

ಬ್ಯಾಂಕ್ ಖಾತೆ ಇಲ್ಲದ ಫಲಾನುಭವಿಗಳು ಅನ್ನಭಾಗ್ಯ ಯೋಜನೆಯ ಹಣದಿಂದ ವಂಚಿತರಾಗಬಾರದು ಎಂಬ ಕಳಕಳಿಯಿಂದಾಗಿ ಬ್ಯಾಂಕ್ ಅಥವಾ ಅಂಚೆ ಕಚೇರಿಯಲು ತಿಳಿಸಲಾಗುತ್ತಿದೆ.  ಜಿಲ್ಲೆಯಲ್ಲಿ ಸಕ್ರಿಯವಾಗಿರುವ ಪಡಿತರ ಕಾರ್ಡ್‌ದಾರರಿಗೆ ನೇರ ಲಾಭ ವರ್ಗಾವಣೆಗೆ (ಡಿ.ಬಿ.ಟಿ) ಖಜಾನೆಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಲಾಗಿದೆ. ಶ್ರೀಶೈಲ ಕಂಕಣವಾಡಿ, ಜಂಟಿ  ನಿರ್ದೇಶಕ,ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ. ಬೆಳಗಾವಿ

ಶ್ರೀಶೈಲ ಕಂಕಣವಾಡಿ, ಜಂಟಿ  ನಿರ್ದೇಶಕ,ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ. ಬೆಳಗಾವಿ

ಆಧಾರ್ ಜೋಡಣೆಯಾಗಿರುವ ಜಿಲ್ಲೆಯ ಎಲ್ಲ ಪಡಿತರ ಚೀಟಿದಾರರ ಬಗ್ಗೆ ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ನೀಡುವ ಮಾಹಿತಿ ಆಧರಿಸಿ ಆಯಾ ಸದಸ್ಯರ ಸಂಖ್ಯೆಗೆ ತಕ್ಕಂತೆ ಚೀಟಿದಾರರ ಖಾತೆಗೆ ಜಿಲ್ಲೆಯಲ್ಲಿ ಒಟ್ಟು 46,54,18,520 ಕೋಟಿ ರೂ.ಜಮೆಯಾಗಲಿದೆ. ನಿತೇಶ ಪಾಟೀಲ, ಜಿಲ್ಲಾಧಿಕಾರಿ, ಬೆಳಗಾವಿ

ನಿತೇಶ ಪಾಟೀಲ, ಜಿಲ್ಲಾಧಿಕಾರಿ, ಬೆಳಗಾವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net