ಎಸ್ಸೆಸ್ಸೆಲ್ಸಿ‌ ಪರೀಕ್ಷೆ ಬರೆದ 55 ವರ್ಷ ವಯಸ್ಸಿನ ಮಹಿಳೆ...!

SSLC Exam woman
Published on

ಕೊಳ್ಳೇಗಾಲ: ಕಲಿಕೆಗೆ ವಯಸ್ಸು ಮುಖ್ಯವಲ್ಲ ಎಂಬುದನ್ನು ಅರಿತ 55 ವರ್ಷದ ಮಹಿಳೆಯೊಬ್ಬರು ಮಹಾಮಾರಿ ಕರೊನಾ ಹಾವಳಿಯ ನಡುವೆಯೂ ನಡೆಯುತ್ತಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ‌ಯನ್ನು ಖಾಸಗಿಯಾಗಿ ತೆಗೆದುಕೊಂಡು ಬರೆದಿದ್ದಾರೆ.

ತಾಲೂಕಿನ ಮಧುವನಹಳ್ಳಿಯಲ್ಲಿ ಆಶಾ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿರುವ ಜಯಸುಂದರಿ ಚಾಮರಾಜನಗರದ‌ ಸೇವಾಭಾರತಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದಾರೆ.

1982ರಲ್ಲಿ ಎಂಟನೇ ತರಗತಿ ವ್ಯಾಸಂಗ ಮೊಟಕುಗೊಳಿಸಿದ್ದ ಜಯಸುಂದರಿ ಅವರು ಪತಿ ವಿಜಯರಾಜ್ ಪ್ರೋತ್ಸಾಹದಿಂದ ಬಿಡುವಿನ ಸಮಯಲ್ಲಿ ಓದಿನಲ್ಲಿ ತೊಡಗಿ ಕಳೆದ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಹಿಂದಿ, ಸಮಾಜ ವಿಷಯದಲ್ಲಿ ಉತ್ತೀರ್ಣರಾಗಿದ್ದರು. ಈ ವರ್ಷ ಕರೊನಾ ಹರಡುವಿಕೆಯ ನಡುವೆಯೂ ಅದೇ ಉತ್ಸಾಹದಿಂದ ಉಳಿದ ನಾಲ್ಕು ಪರೀಕ್ಷೆಗಳನ್ನು ಬರೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net