

ಬೆಂಗಳೂರು: ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚುತ್ತಲೇ ಇದೆ. ಕಳೆದ 24ಗಂಟೆಯಲ್ಲಿ ಬರೋಬ್ಬರಿ 515 ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 3088ಕ್ಕೆ ಏರಿದೆ. ಇಂದು ಕಂಡುಬಂದ ಪ್ರಕರಣಗಳಲ್ಲಿ 482 ಮಂದಿ ಅಂತಾರಾಜ್ಯ ಪ್ರಯಾಣಿಕರೇ ಆಗಿದ್ದಾರೆ.
ರಾಜ್ಯದಲ್ಲಿ ಇದುವರೆಗೆ ಕೊವಿಡ್-19ನಿಂದ 57 ಮಂದಿ ಮೃತಪಟ್ಟಿದ್ದು, 1688 ಮಂದಿ ಚೇತರಿಸಿಕೊಂಡು ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು ಸಕ್ರಿಯ ಪ್ರಕರಣಗಳು 4835 ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಕಳೆದ 24 ಗಂಟೆಯಲ್ಲಿ ಅತಿ ಹೆಚ್ಚು ಸೋಂಕಿತರು ದಾಖಲಾಗಿದ್ದು ಉಡುಪಿಯಲ್ಲಿ . ಭರ್ಜರಿ 204 ಮಂದಿಯಲ್ಲಿ ಕರೊನಾ ದೃಢಪಟ್ಟಿದ್ದು, ಆತಂಕ ಮೂಡಿಸಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು ಕೇಸ್ಗಳು ದಾಖಲಾಗಿವೆ? ಇಲ್ಲಿದೆ ನೋಡಿ ಪಟ್ಟಿ