ಟ್ರಾಫಿಕ್ ರೂಲ್ಸ್ ದಂಡ ಪಾವತಿಸಲು ಮತ್ತೆ 50% ರಿಯಾಯಿತಿ!; ಎಲ್ಲಿಯವರೆಗೆ ಕಾಲಾವಕಾಶ? ಇಲ್ಲಿದೆ ಮಾಹಿತಿ

traffic rules voilation
Published on

ಬೆಂಗಳೂರು: ರಾಜ್ಯದಲ್ಲಿ ಸಂಚಾರಿ ನಿಯಮವನ್ನು ಉಲ್ಲಂಘಿಸಿ ಇ-ಚಲನ್​ ಮೂಲಕ ದಂಡ ಪಡೆದುಕೊಂಡ ವಾಹನ ಸವಾರರಿಗೆ ಇದೀಗ ಸಾರಿಗೆ ಇಲಾಖೆ ಸಿಹಿ ಸುದ್ದಿಯನ್ನು ನೀಡಿದೆ. ಈ ಹಿಂದೆ ಫೈನ್​ ಇಲ್ಲದಂತೆ ಮಾಡಿಕೊಳ್ಳಲು 50% ರಿಯಾಯಿತಿ ಅನ್ನು ನೀಡಿದಂತೆಯೇ ಈಗ ಮತ್ತೊಮ್ಮೆ ಆ ಸುವರ್ಣವಕಾಶವನ್ನು ಇಲಾಖೆ ಕಲ್ಪಿಸಿಕೊಟ್ಟಿದೆ.

ದಂಡ ಪಾವತಿಗೆ ಮತ್ತೊಮ್ಮೆ 50% ರಿಯಾಯಿತಿ ನೀಡಿ ಎಂದು ಸಾರಿಗೆ ಇಲಾಖೆ ಆದೇಶ ನೀಡಿದ್ದು, ಫ್ರೆಬ್ರವರಿ 11ರ ಅವಧಿಯೊಳಗೆ ದಾಖಲಾಗಿರುವ ಪ್ರಕರಣಗಳಿಗೆ ಮಾತ್ರ ಈ ವಿಶೇಷ ರಿಯಾಯಿತಿ ಅನ್ವಯವಾಗಲಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಫೈನ್​ ಕಟ್ಟಲು ಪಾವತಿಗೆ ಎರಡು ತಿಂಗಳು ಕಾಲಾವಕಾಶವನ್ನು ಘೋಷಿಸಿದ್ದು, ಸೆಪ್ಟೆಂಬರ್ 9 2023 ರಂದು ಅಂತ್ಯವಾಗಲಿದೆ ಎಂದು ತಿಳಿಸಿದೆ.

ಅತೀ ಮುಖ್ಯವಾಗಿ ಈ ಆದೇಶ ಇತ್ಯಾರ್ಥವಾಗುವ ಪ್ರಕರಣಗಳಿಗೆ ಮಾತ್ರ ರಿಯಾಯಿತಿ ಅನ್ವಯವಾಗುತ್ತದೆ ಎಂಬುದನ್ನು ಸಾರಿಗೆ ಇಲಾಖೆ ಒತ್ತಿ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net