6 ವರ್ಷದ ಬಾಲಕಿಯನ್ನು ಮದುದೆಯಾದ 45ರ ವ್ಯಕ್ತಿ: ಅಚ್ಚರಿ ಹೇಳಿಕೆ ಕೊಟ್ಟ ತಾಲಿಬಾನ್​! | Marries

dk - 2025-07-10T163041.328
Published on

Marries: ಅಪಘಾನಿಸ್ತಾನದಲ್ಲಿ 6 ವರ್ಷದ ಬಾಲಕಿಯನ್ನು ಮದುವೆಯಾದ 45 ವರ್ಷದ ವ್ಯಕ್ತಿ ಮದುವೆಯಾಗಿರುವ ಘಟನೆ ವರದಿಯಾಗಿದೆ.

ದಕ್ಷಿಣ ಅಪಘಾನಿಸ್ತಾನದ ಮಾರ್ಜಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ಪತ್ನಿಯರನ್ನು ಹೊಂದಿರುವ ಈ ವ್ಯಕ್ತಿ ಬಾಲಕಿಯ ಕುಟುಂಬಕ್ಕೆ ಹಣ ನೀಡಿ ಆ ಬಾಲಕಿಯನ್ನು ಮದುವೆಯಾಗಿದ್ದಾನೆ ಎಂದು ಅಮೆರಿಕಾದ ಮೂಲದ ಅಫ್ಘಾನ್​ ಮಾಧ್ಯಮ AMU.TV ವರದಿ ಮಾಡಿದೆ.

ಚಿಕ್ಕ ಬಾಲಕಿಯ ಮದುವೆ ಬಗ್ಗೆ ಕೆಲವರು ಆರೋಪ ಮಾಡಿದ ಹಿನ್ನೆಲೆ ಮಧ್ಯಪ್ರವೇಶಿಸಿದ ತಾಲಿಬಾನ್,​​ ಆ ವ್ಯಕ್ತಿಯನ್ನು ಮತ್ತು ಬಾಲಕಿಯ ತಂದೆಯನ್ನು ಬಂಧಿಸಿದ್ದಾರೆ. ಮುಂದಿನ ಮೂರು ವರ್ಷದ ವರೆಗೆ(9ನೇ ವಸ್ಸಿನ ತನಕ) ಬಾಲಕಿಯನ್ನು ವಿವಾಹವಾದ ವ್ಯಕ್ತಿ ಕರೆದೊಯ್ಯುವಂತಿಲ್ಲ ಎಂದು ಹೇಳಿದೆ ಎಂದು ವರದಿ ಉಲ್ಲೇಖಿಸಿದೆ.

ಇನ್ನು ಘಟನೆ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಆಕ್ರೋಶ ಹುಟ್ಟು ಹಾಕಿದ್ದು, ನೆಟ್ಟಿಜನ್​ ಕಳವಳ ವ್ಯಕ್ತಪಡಿದ್ದಾರೆ. ಅಲ್ಲದೆ, ಈ ಘಟನೆ ವಿರುದ್ಧ ತರೇಹವಾರಿ ಕಾಮೆಂಟ್​ ಮಾಡುತ್ತಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net