400 ಟೈರ್​, 3500 HP ಇದೇ ನೋಡಿ ಭಾರತದ ಬಾಹುಬಲಿ Truck​; ಕೆಲಸ ಮಾಡ್ತಿರೋದು ಎಷ್ಟು ಮಂದಿ ಗೊತ್ತಾ?

400 Tyre
Published on

ಚಂಡೀಗಢ: ನಾವು ನೋಡಿರುವಂತೆ ಸಾಮಾನ್ಯವಾಗಿ ಲಾರಿಯೊಂದಕ್ಕೆ 16 ರಿಂದ 20 ಟೈರುಗಳು ಇರುವುದನ್ನು ನೋಡಿದ್ದೇವೆ. ಆದರೆ, ನೀವು ಎಂದಾದರು 400 ಟೈರ್​ ಇರುವ ಲಾರಿಯನ್ನು (TrucK) ನೋಡಿದ್ದೀರಾ. ಅದು ಕೂಡ ಭಾರತದಲ್ಲಿ ಎಂದರೆ ನೀವು ನಂಬುತ್ತೀರಾ. ಆಶ್ಚರ್ಯವೆನಿಸಿದರು ಇದು ನಿಜ. ಈ ಲಾರಿ ಹರಿಯಾಣದ ಸಿರ್ಸಾದಲ್ಲಿ ಕಂಡು ಬಂದಿದ್ದು, ಇದು ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.

ಹರಿಯಾಣದ ಸಿರ್ಸಾದ ನರ್ವಾನಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತಾತ್ಕಾಲಿಕ ಸೇತುವೆಯನ್ನು ಈ ಲಾರಿ (Truck) ಯಶಸ್ವಿಯಾಗಿ ದಾಟಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಗುಜರಾತ್​ನಿಂದ ಕಾಂಡ್ಲಾದಿಂದ ಪಾಣಿಪತ್​ಗೆ ಸಾಗಿಸುವ ವೇಳೆ ಸಿರ್ಸಾದ ಬಳಿ ಕಂಡು ಬಂದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

400 ಟೈರ್​ ಇರುವ ಟ್ರೈಲರ್​ಅನ್ನು ಎಳೆಯಲು 500 ಎಚ್​ಪಿ ಇರುವ ಸುಮಾರು ಏಳು ಲಾರಿಗಳನ್ನು (Truck) ನಿಯೋಜಿಸಲಾಗಿದ್ದು, ನರ್ವಾನಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತಾತ್ಕಾಲಿಕ ಸೇತುವೆಯನ್ನು ಯಶಸ್ವಿಯಾಗಿ ದಾಟಲಾಗಿದೆ. ಗುಜರಾತ್​ನಿಂದ ಬೃಹತ್​ ಬಾಯ್ಲರ್ ಸೇರಿದಂತೆ ಸುಮಾರು 800 ಟನ್ ತೂಕವನ್ನು ಸಾಗಿಸಲಾಗುತ್ತಿತ್ತು. ಇದನ್ನು ನೋಡಿರುವ ಜನರು ಟ್ರಕ್​ನ (Truck) ಫೋಟೋ ಹಾಗೂ ವಿಡಿಯೋವನ್ನು ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಮಾಡುತ್ತಿದ್ದಾರೆ. 

ಈ ಕುರಿತು ಮಾತನಾಡಿರುವ ಲಾಜಿಸ್ಟಿಕ್​ ಕಂಪನಿಯ ಅಧಿಕಾರಿಯೊಬ್ಬರು, ಪ್ರತಿನಿತ್ಯ 15-20 ಕಿಲೋಮೀಟರ್​ ಕ್ರಮಿಸಲಾಗುತ್ತದೆ. ಒಟ್ಟು 250 ಮಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ಗುಜರಾತ್​ನ ಕಾಂಡ್ಲಾದಿಂದ ಪಾಣಿಪತ್​ಗೆ ಬಾಯ್ಲರ್​ಅನ್ನು ಸಾಗಿಸಲಾಗುತ್ತಿದೆ. ಇದಲ್ಲದೆ ಈ ಲಾರಿಗಳನ್ನು (Truck) ವಿಮಾನದ ರೆಕ್ಕೆ ಹಾಗೂ ವಿಂಡ್​ಮಿಲ್​ಗಳನ್ನು ಸ್ಥಳಾಂತಿರಸಲು ಬಳಸಲಾಗುತ್ತದೆ ಎಂದು ಲಾಜಿಸ್ಟಿಕ್​ ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net