40 ವರ್ಷ ಹಳೆಯ ಸೇತುವೆ ದುರ್ಬಲ, ರಸ್ತೆ ಬದಲಾವಣೆ

mng--17 june mullai mugilan
Published on

ಮಂಗಳೂರು : ಲೋಕೋಪಯೋಗಿ ಇಲಾಖೆ ಪುತ್ತೂರು ಉಪವಿಭಾಗ ವ್ಯಾಪ್ತಿಗೆ ಒಳಪಡುವ ಪುತ್ತೂರು ತಾಲೂಕು ಮುಡುಪಿನಡ್ಕ, ಈಶ್ವರಮಂಗಲ, ಪಾಂಚೋಡಿ, ಗಾಳಿಮುಖ ಜಿಲ್ಲಾ ಮುಖ್ಯ ರಸ್ತೆ 13.60 ಕಿ.ಮೀ ಕರ್ನೂರು ಕೋಟಿಗದ್ದೆ ಎಂಬಲ್ಲಿ ಸುಮಾರು 40 ವರ್ಷ ಹಳೆಯ ಸೇತುವೆ ದುರ್ಬಲವಾಗಿದೆ. ವಾಹನ ಸಂಚಾರಕ್ಕೆ ಅಪಾಯಕಾರಿಯಾಗಿರುವುದರಿಂದ ಮುಂದಿನ ಆದೇಶದವರೆಗೆ ಈ ಸೇತುವೆಯಲ್ಲಿ ಘನ ವಾಹನಗಳ ಸಂಚಾರ ನಿಬರ್ಂಧಿಸಿ, ಮಾರ್ಗ ಬದಲಾವಣೆ ಮಾಡಿ ಪಲ್ಲತ್ತೂರು, ಕೊಟ್ಯಾಡಿ, ಗಾಳಿಮುಖ ಸಂಚಾರ ಮಾರ್ಗವಾಗಿ ಸಂಚರಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾದಂಡಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net