ರೈಲಿನಲ್ಲಿ 40 ಲಕ್ಷ ಮೌಲ್ಯದ ಚಿನ್ನಾಭರಣ ಕಳವು: ಉಡುಪಿಯಲ್ಲಿ ಪೊಲೀಸ್​ ಠಾಣೆ ಮೆಟ್ಟಿಲೇರಿದ ಮಹಿಳೆ

gold silver
Published on

ಉಡುಪಿ: ಮುಂಬೈಯಿಂದ ಉಡುಪಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಬ್ಯಾಗ್​ನಲ್ಲಿದ್ದ 40 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ವಜ್ರಾಭರಣ ಕಳವಾಗಿದ್ದು, ಆಭರಣ ಕಳೆದುಕೊಂಡ ಮಹಿಳೆ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.

ಮಹಾರಾಷ್ಟ್ರ ಮುಲುಂದು ವೈಶಾಲಿ ನಗರದ ದೀಪಾ ರೈ(44) ಡಿ.5ರಂದು ಕಟಪಾಡಿಗೆ ಬರಲು ಮುಂಬೈನ ಪನ್ ವೇಲಿನಿಂದ ಮತ್ಸ್ಯಗಂಧ ರೈಲು ಹತ್ತಿದ್ದರು. ಡಿ.6ರ ಮುಂಜಾನೆ 5.40ಕ್ಕೆ ಉಡುಪಿ ರೈಲ್ವೆ ಸ್ಟೇಷನ್​ಗೆ ಬಂದಿರು. ಬಳಿಕ ರೈಲಿನಿಂದ ಇಳಿದು ಕಟಪಾಡಿಯ ಮನೆಗೆ ಹೋಗಿ ಬ್ಯಾಗ್ ಪರಿಶೀಲಿಸಿದಾಗ 3 ಬ್ಯಾಗ್​ನಲ್ಲಿ ಇಟ್ಟಿದ್ದ ಚಿನ್ನಾಭರಣ ಮತ್ತು ಡೈಮಂಡ್ ಆಭರಣ ಕಳವಾಗಿರುವುದು ಗೊತ್ತಾಗಿದೆ.

ಅಂದಾಜು 850 ಗ್ರಾಂ ತೂಕದ 34 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 6 ಲಕ್ಷ ರೂ. ಮೌಲ್ಯದ ವಜ್ರಾಭರಣ ಕಳವಾಗಿದೆ ಎಂದು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net