ರಕ್ಷಣಾ ಪಡೆಗಳ ದಾಳಿಗೆ ನಾಲ್ವರು ಮಾವೋವಾದಿಗಳು ಉಡೀಸ್​...; ಓರ್ವ ಮಹಿಳಾ ನಕ್ಸಲ್​ ಕೂಡ ಬಲಿ

Naxals
Published on

ಭುವನೇಶ್ವರ್​: ಇಂದು ಭದ್ರತಾ ಪಡೆ ನಾಲ್ವರು ಮಾವೋವಾದಿಗಳನ್ನು ಹೊಡೆದುರುಳಿಸಿದೆ.

ಓಡಿಶಾದ ಕಂಧಮಾಲ್​ ಜಿಲ್ಲೆಯಲ್ಲಿರುವ ತುಮುಡಿಬಂಧ್​ನಲ್ಲಿ ಇಂದು ಮುಂಜಾನೆ 6.30ಕ್ಕೆ ಕಾರ್ಯಾಚರಣೆ ನಡೆಸಿದ ರಕ್ಷಣಾ ಪಡೆಗಳು, ಓರ್ವ ಮಹಿಳಾ ನಕ್ಸಲ್​ ಸೇರಿ ನಾಲ್ವರನ್ನು ಕೊಂದುಹಾಕಿದ್ದಾರೆ. ಹತ್ಯೆಯಾದ ನಕ್ಸಲರ ಗುರುತು ಇನ್ನೂ ಪತ್ತೆಯಾಗಿಲ್ಲ.

ತುಮುಡಿಬಂಧ್​ನ ಸಿರ್ಲಾ ಗ್ರಾಮಕ್ಕೆ ಹೊಂದಿಕೊಂಡಿರುವ ಅರಣ್ಯದಲ್ಲಿ ನಕ್ಸಲರು ಅಡಗಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ, ಡಿಸ್ಟ್ರಿಕ್ಟ್​ ವಾಲೆಂಟರಿ ಫೋರ್ಸ್​ ಮತ್ತು ಸ್ಪೆಶಲ್​ ಆಪರೇಶನ್​ ಗ್ರೂಪ್​ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದವು.

ನಕ್ಸಲರೂ ಕೂಡ ರಕ್ಷಣಾ ಸಿಬ್ಬಂದಿಯೆಡೆಗೆ ಗುಂಡಿನ ದಾಳಿ ನಡೆಸಿದ್ದವು. ತಮ್ಮ ರಕ್ಷಣೆಗಾಗಿ ಇವರೂ ಕೂಡ ತಿರುಗಿ ಗುಂಡು ಹೊಡೆದು, ನಕ್ಸಲರ ಜೀವತೆಗೆದಿದ್ದಾರೆ.  ಮೃತ ನಕ್ಸಲರಿಂದ ಮಾರಕಾಸ್ತ್ರಗಳನ್ನು ರಕ್ಷಣಾ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net