ಇನ್ನೂ 4 ಕೋಟಿ ಜನರು ಪಡೆದಿಲ್ಲ ಒಂದೂ ಲಸಿಕೆ: ಆರೋಗ್ಯ ಸಚಿವಾಲಯದಿಂದ ಮಾಹಿತಿ

Covaccine
Published on

ನವದೆಹಲಿ: ಎರಡು ವರ್ಷಗಳ ಕಾಲ ಇಡೀ ವಿಶ್ವವನ್ನೇ ಅಲುಗಾಡಿಸಿದ್ದ ಕರೋನಾದಿಂದ ಅನುಭವಿಸಿದ ಕಷ್ಟ ಒಂದೆರಡಲ್ಲ. ಲಸಿಕೆ ಬಂದ ಬಳಿಕ ತಗ್ಗಿದ್ದು ಕೂಡ ಗೊತ್ತಿರುವ ವಿಚಾರವೇ. 200 ಕೋಟಿ ಡೋಸ್​ ಲಸಿಕೆ ಪಡೆಯುವ ಮೂಲಕ ಮೈಲಗಲ್ಲು ಸಾಧಿಸಿದೆ ಎಂದು ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ವರದಿ ನೀಡಿತ್ತು. ಆದರೀಗ ಮತ್ತೊಂದು ವರದಿ ನೀಡಿದ್ದು, ಇನ್ನೂ ಕೆಲ ಜನರು ಲಸಿಕೆ ಹಾಕಿಸಿಕೊಂಡಿಲ್ಲ ಎಂದು ಹೇಳಿದೆ.

ಸದ್ಯ ಜುಲೈ 18ರವರೆಗೆ ಲಸಿಕೆ ಪಡೆದುಕೊಳ್ಳದಿರುವವರ ಸಂಖ್ಯೆಯನ್ನು ಆಧರಿಸಿ ಕೇಂದ್ರ ಆರೋಗ್ಯ ಸಚಿವಾಲಯ ವರದಿ ಬಿಡುಗಡೆ ಮಾಡಿದೆ. ಈಗಾಗಲೇ ಶೇ.97.34ರಷ್ಟು ಲಸಿಕೆ ಸಂಪೂರ್ಣವಾಗಿದ್ದು, ಇದೀಗ 4 ಕೋಟಿ ಜನರು ಒಂದೂ ಲಸಿಕೆ ಪಡೆಯದಿರುವುದು ತಲೆನೋವಾಗಿ ಪರಿಣಮಿಸಿದೆ.

ಕೋವಿಡ್ ಲಸಿಕೆ ಈವರೆಗೆ ಎಷ್ಟು ಜನರು ಪಡೆದಿದ್ದಾರೆ, ಇನ್ನೂ ಎಷ್ಟು ಜನರಿಗೆ ಬಾಕಿ ಇದೆ ಎಂಬ ಲಿಖಿತ ಪ್ರಶ್ನೆಗೆ ಲೋಕಸಭೆಗೆ ಉತ್ತರಿಸಿದ ರಾಜ್ಯ ಆರೋಗ್ಯ ಖಾತೆ ಸಚಿವೆ ಭಾರತಿ ಪ್ರವೀಣ್​ ಪವಾರ್​ 4 ಕೊಟಿ ಜನರು ಇನ್ನೂ ಯಾವೊಂದೂ ಲಸಿಕೆಯನ್ನು ಪಡೆದಿಲ್ಲ ಎಂದು ಉತ್ತರಿಸಿದ್ದಾರೆ.

ಮುನ್ನೆಚ್ಚರಿಕಾ ಕ್ರಮವಾಗಿ ಕೊವಿಡ್​​ ತಡೆಗಟ್ಟಲು ನೀಡಲಾಗುತ್ತಿರುವ ಲಸಿಕೆಯನ್ನು ಜನರು ಪಡೆದುಕೊಳ್ಳಬೇಕಿದೆ ಎಂದು ಇದೇ ವೇಳೆ ಸಚಿವಾಲಯ ಮನವಿ ಮಾಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net