ರಾಜ್ಯದಲ್ಲಿ 3ನೇ ಒಮಿಕ್ರಾನ್​ ಪ್ರಕರಣ; ಬೊಮ್ಮನಹಳ್ಳಿ ನಿವಾಸಿಯಲ್ಲಿ ಸೋಂಕು

omicron
Published on

ಬೆಂಗಳೂರು: ಕರ್ನಾಟಕದಲ್ಲಿ 3ನೇ ಒಮಿಕ್ರಾನ್​ ಕರೊನಾ ರೂಪಾಂತರಿಯ ಸೋಂಕು ಪ್ರಕರಣ ಪತ್ತೆಯಾಗಿದೆ. ಎಂಟು ದಿನಗಳ ಹಿಂದೆ ದಕ್ಷಿಣ ಆಫ್ರಿಕಾದಿಂದ ಬಂದಿದ್ದ 34 ವರ್ಷ ವಯಸ್ಸಿನ ಪುರುಷನು ಒಮಿಕ್ರಾನ್​ ಸೋಂಕಿತನಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್​ ತಿಳಿಸಿದ್ದಾರೆ.

ಈ ಬಗ್ಗೆ ಟ್ವಿಟರ್​ನಲ್ಲಿ ಮಾಹಿತಿ ನೀಡಿರುವ ಸುಕರ್​, ಸೋಂಕಿತನನ್ನು ಐಸೋಲೇಟ್​ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಕಾಂಟಾಕ್ಟ್​​ ಟ್ರೇಸಿಂಗ್​ ನಡೆದಿದ್ದು, ಐದು ಜನ ಪ್ರಾಥಮಿಕ ಮತ್ತು 15 ಮಂದಿ ದ್ವಿತೀಯ ಸಂಪರ್ಕಿತರು ಪತ್ತೆಯಾಗಿದ್ದಾರೆ. ಅವರ ಸ್ಯಾಂಪಲ್​ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಎಲ್ಲರನ್ನೂ ಕ್ವಾರಂಟೈನ್​ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಬೊಮ್ಮನಹಳ್ಳಿ 196ನೇ ವಾರ್ಡ್​ನ ನಿವಾಸಿಯಲ್ಲಿ ಈ ಒಮಿಕ್ರಾನ್​​ ಸೋಂಕು ಪತ್ತೆಯಾಗಿದೆ. 8 ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಆ ವ್ಯಕ್ತಿಗೆ ಕರೊನಾ ಪಾಸಿಟಿವ್ ಬಂದಿತ್ತು. ಜಿನೋಮ್​ ಸಿಕ್ವೇಂಸಿಂಗ್​​ನಲ್ಲಿ ಒಮಿಕ್ರಾನ್​​ ರೂಪಾಂತರಿ ಸೋಂಕಿರುವುದು ದೃಢಪಟ್ಟಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net