

ಕ್ಯಾನ್ಬೆರಾ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತೀಯ ಕ್ರಿಕೆಟ್ ತಂಡ ಆರಂಭದ ಎರಡು ಏಕದಿನ ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದು, ಸರಣಿಯ ಮೂರನೆ ಮತ್ತು ಕೊನೆಯ ಪಂದ್ಯದಲ್ಲಿ ವೈಟ್ವಾಷ್ ತಪ್ಪಿಸುವ ಸಲುವಾಗಿ ಹೋರಾಟ ಪ್ರಾರಂಭಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವ ಟೀಇಂಡಿಯಾ ಈ ಪಂದ್ಯಕ್ಕೆ ತಂಡದಲ್ಲಿ ನಾಲ್ಕು ಪ್ರಮುಖ ಬದಲಾವಣೆ ಮಾಡಿಕೊಂಡಿದೆ.ಪಂದ್ಯ ಆರಂಭವಾಗಿದ್ದು ಭಾರತದ ಪರ ಶಿಖರ್ ಧವನ್ ಮತ್ತು ಶುಬ್ಮನ್ ಗಿಲ್ ಆರಂಭಿಕರಾಗಿ ಕ್ರೀಸ್ನಲ್ಲಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಮೂರು ಓವರ್ಗಳಲ್ಲಿ ಭಾರತೀಯ ತಂಡ 9 ರನ್ ಗಳಿಸಿದೆ.
ಹಿಂದಿನ ಪಂದ್ಯಗಳಲ್ಲಿ ತಂಡದಲ್ಲಿದ್ದ ಮಯಾಂಕ್ ಅಗರ್ವಾಲ್, ನವದೀಪ್ ಸೈನಿ, ಮೊಹಮ್ಮದ್ ಶಮಿ, ಯುಜುವೇಂದ್ರ ಚಾಹಲ್ ಅವರ ಬದಲಿಗೆ ತಂಗರಸು ನಟರಾಜನ್, ಶುಬ್ಮನ್ ಗಿಲ್,ಶಾರ್ದೂಲ್ ಠಾಕೂರ್ ಮತ್ತು ಕುಲದೀಪ್ ಯಾದವ್ ಅವರನ್ನು ಕಣಕ್ಕೆ ಇಳಿಸಿದೆ. ತಂಗರಸು ನಟರಾಜನ್ಗೆ ಇದು ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವಾಗಿದೆ. ಆಸ್ಟ್ರೇಲಿಯಾ ತಂಡದಲ್ಲೂ ಮೂರು ಪ್ರಮುಖ ಬದಲಾವಣೆಯಾಗಿದ್ದು, ಗಾಯಾಗೊಂಡಿರುವ ಡೇವಿಡ್ ವಾರ್ನರ್, ಪ್ಯಾಟ್ ಕುಮ್ಮಿನ್ಸ್, ಮಿಷೆಲ್ ಸ್ಟಾರ್ಕ್ ಕೆಮರೂನ್ ಗ್ರೀನ್, ಸೀನ್ ಅಬೋಟ್, ಆಷ್ಟನ್ ಅಗರ್ ಸ್ಥಾನದಲ್ಲಿ ಕಣಕ್ಕೆ ಇಳಿದಿದ್ದಾರೆ.
ಆಸ್ಟ್ರೇಲಿಯಾ ತಂಡ: ಅರೋನ್ ಫಿಂಚ್ (ಕಪ್ತಾನ), ಮಾರ್ನಸ್ ಲಬುಸ್ಚೇಂಜ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್ವೆಲ್, ಮೋಯ್ಸೆಸ್ ಹೆನ್ರಿಕ್, ಅಲೆಕ್ಸ್ ಕ್ಯಾರಿ(ವಿಕೆಟ್ ಕೀಪರ್), ಕೆಮರೂನ್ ಗ್ರೀನ್, ಆಸ್ಟನ್ ಅಗರ್, ಸೀನ್ ಅಬೋಟ್, ಆಡಂ ಝಂಪಾ, ಜೋಶ್ ಹಝ್ಲೇವುಡ್.
ಭಾರತೀಯ ತಂಡ: ವಿರಾಟ್ ಕೊಹ್ಲಿ (ಕಪ್ತಾನ), ಶಿಖರ್ ಧವನ್, ಶುಬ್ಮನ್ ಗಿಲ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಜಸ್ಪ್ರೀತ್ ಬೂಮ್ರಾಹ್, ಟಿ.ನಟರಾಜನ್. (ಏಜೆನ್ಸೀಸ್)