ಇಳಿದ ಕರೊನಾ ಸಾವುಗಳ ಸಂಖ್ಯೆ... 38,948 ಹೊಸ ಪ್ರಕರಣಗಳು

Corona
Published on

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 38,948 ಹೊಸ ಕರೊನಾ ಪ್ರಕರಣಗಳು ವರದಿಯಾಗಿದ್ದು, 219 ಜನರು ಕರೊನಾದಿಂದಾಗಿ ಸಾವಪ್ಪಿದ್ದಾರೆ. ಕಳೆದ ಐದು ತಿಂಗಳಲ್ಲಿ ದಿನವೊಂದಕ್ಕೆ ದಾಖಲಾಗಿರುವ ಸಾವುಗಳಲ್ಲಿ ಇದು ಅತ್ಯಂತ ಕಡಿಮೆಯಾಗಿದೆ.

ಐದು ದಿನಗಳ ನಂತರ ದೇಶದ ನಿತ್ಯಪ್ರಕರಣಗಳ ಸಂಖ್ಯೆ ಮತ್ತೆ 40,000 ದ ಮಟ್ಟದಿಂದ ಕೆಳಗಿಳಿದಿದೆ. 26,701 ಸೋಂಕು ಪ್ರಕರಣಗಳೊಂದಿಗೆ ದೇಶದ ಶೇ. 68.5 ರಷ್ಟು ಹೊಸ ಪ್ರಕರಣಗಳನ್ನು ಕೇರಳ ವರದಿ ಮಾಡಿದೆ. ರಾಜ್ಯದಲ್ಲಿ ನಿನ್ನೆಯ ದಿನ ಒಟ್ಟು 74 ಕರೊನಾ ಸಾವುಗಳು ಸಂಭವಿಸಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net