

wedding anniversary : ಪ್ರೀತಿಗೆ ಯಾವುದೇ ವಯಸ್ಸಿನ ಅಂತರವಿಲ್ಲ ಎಂದು ಹೇಳಲಾಗುತ್ತದೆ. ಇದಕ್ಕೆ ಟುನೀಷಿಯನ್ ಮೂಲದ ಹಮ್ಜಾ ದ್ರಿತಿಯ ಪ್ರೀತಿ ಒಂದು ತಾಜಾ ಉದಾಹರಣೆಯಾಗಿದೆ. 40 ವರ್ಷದ ಹಮ್ಜಾ ಅವರ ಪತ್ನಿ ಕ್ರಿಸ್ಟೀನ್ ಹೈಕಾಕ್ಸ್ ಅವರಿಗೆ 74 ವರ್ಷ. 4 ವರ್ಷಗಳ ಹಿಂದೆ ವಿವಾಹವಾದ ಅವರು ಇದೀಗ ನಾಲ್ಕನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ.
ಹಮ್ಜಾ ಅವರು 2018ರಲ್ಲಿ ಆನ್‌ಲೈನ್ ಇಂಗ್ಲಿಷ್ ತರಗತಿಗೆ ಸೇರಿದರು. ಈ ವೇಳೆ ಇಂಗ್ಲೆಂಡ್ ಮೂಲದ ಕ್ರಿಸ್ಟೀನ್ ಅವರಿಗೆ ಶಿಕ್ಷಕಿಯಾಗಿದ್ದರು. ಈ ಸಂದರ್ಭದಲ್ಲಿ ಆದ ಪರಿಚಯ ಪ್ರೀತಿ ತಿರುಗಿತು. ಬಳಿಕ ಇಬ್ಬರು ಮದುವೆಯಾದರು. ಪರಸ್ಪರ ಭೇಟಿಯಾದ ಆರು ವಾರಗಳ ನಂತರ ಹಮ್ಜಾ ಮತ್ತು ಕ್ರಿಸ್ಟೀನ್ ಟುನೀಶಿಯಾಗೆ ಬಂದರು. 2020ರ ಡಿಸೆಂಬರ್ ತಿಂಗಳಲ್ಲಿ ಟುನೀಶಿಯಾದಲ್ಲಿ ಇಬ್ಬರ ವಿವಾಹ ನಡೆಯಿತು. 2024 ಡಿಸೆಂಬರ್ ತಿಂಗಳಲ್ಲಿ ತಮ್ಮ ನಾಲ್ಕನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದರು.
ಅಂದಹಾಗೆ ಕ್ರಿಸ್ಟೀನ್ ಈ ಹಿಂದೆ ಮದುವೆಯಾಗಿದ್ದರು. ನಂತರ, ಅವರು ವಿಚ್ಛೇದನ ಪಡೆದರು. ಈ ಸಂಬಂಧದಲ್ಲಿ ಅವರಿಗೆ ಮಕ್ಕಳು ಸಹ ಇದ್ದಾರೆ. ಅವರಲ್ಲಿ ಒಬ್ಬ ಮಗ ಹಮ್ಜಾಗಿಂತ ಒಂದು ವರ್ಷ ದೊಡ್ಡವನು. ಮಕ್ಕಳು ಸಹ ತಮ್ಮ ತಾಯಿಯ ಆಸೆಗಳನ್ನು ಬೆಂಬಲಿಸಿರುವುದೇ ಅಚ್ಚರಿಯ ಸಂಗತಿ.
ಮೊದಲಿಗೆ ಅನೇಕರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಹಮ್ಜಾರ ಒಳ್ಳೆಯತನವನ್ನು ಅರ್ಥಮಾಡಿಕೊಂಡು, ಮದುವೆಯನ್ನು ಬೆಂಬಲಿಸಿದರು. ಕ್ರಿಸ್ಟೀನ್ 2021ರಲ್ಲಿ ಇಸ್ಲಾಂಗೆ ಮತಾಂತರಗೊಂಡರು. ಮದುವೆಯ ನಂತರ, ಅವರು ತಮ್ಮ ಕುಟುಂಬದೊಂದಿಗೆ ಟುನೀಶಿಯಾದಲ್ಲಿ ವಾಸಿಸುತ್ತಿದ್ದಾರೆ. ಅಲ್ಲದೆ, ನಮ್ಮ ಲೈಫ್ ಇದೀಗ ಗ್ರೇಟ್ ಅಂತಿದ್ದಾರೆ ಹಮ್ಜಾ ದಂಪತಿ. (ಏಜೆನ್ಸೀಸ್)