More

    ‘ನನ್ನ ಅಮ್ಮನನ್ನು ಕೊಂದೆ ಅಲ್ವಾ ನೀನು’ ಎನ್ನುತ್ತ ಆಸ್ಪತ್ರೆಗೆ ಧಾವಿಸಿದ ಮಗ ಮಾಡಿದ್ದೇನು!

    ಲಾತುರ್​: ಕೊವಿಡ್​-19 ಸೋಂಕಿನಿಂದ ಅಮ್ಮ ಮೃತಪಟ್ಟಿದ್ದರಿಂದ ಕೋಪಗೊಂಡ ಮಗ ವೈದ್ಯರಿಗೇ ಚಾಕುವಿನಿಂದ ಇರಿದಿದ್ದಾನೆ.
    ಮಹಾರಾಷ್ಟ್ರದ ಲಾತುರ್​ನ ಅಲ್ಫಾ ಸೂಪರ್​​ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಇಂದು ಮುಂಜಾನೆ 7 ಗಂಟೆಯಷ್ಟೊತ್ತಿಗೆ ಘಟನೆ ನಡೆದಿದೆ.

    ಆರೋಪಿ 35 ವರ್ಷದ ಯುವಕ. ಈತ ತನ್ನ 60 ವರ್ಷದ ಕೊವಿಡ್​-19 ಸೋಂಕಿತ ತಾಯಿಯನ್ನು ಜು.25ಕ್ಕೆ ಆಸ್ಪತ್ರೆಗೆ ದಾಖಲಿಸಿದ್ದ. ಈ ಮಹಿಳೆಗೆ ಬೇರೆ ಕೆಲವು ರೋಗಗಳೂ ಇದ್ದವು. ಬಹುಸಮಯದಿಂದಲೂ ಅವರಿಗೆ ಆರೋಗ್ಯದ ಸಮಸ್ಯೆಯಿತ್ತು. ಹೀಗಾಗಿ ಕೊವಿಡ್​-19ನಿಂದ ಪಾರಾಗಲಾಗದೆ ಸಾವನ್ನಪ್ಪಿದರು. ಇದನ್ನೂ ಓದಿ: ಹಳೇ ಲವ್​ ವಿಷ್ಯ ಮುಚ್ಚಿಹಾಕಲು ಉದ್ಯಮಿ ಜತೆ ಅಕ್ರಮ ಸಂಬಂಧ ಬೆಳೆಸಿ ಮತ್ತೆ ಪೇಚಿಗೆ ಸಿಲುಕಿದ್ಳು!

    ಇಂದು ಮುಂಜಾನೆ ವೈದ್ಯ ಡಾ. ದಿನೇಶ್ ವರ್ಮಾ ಅವರು ಆಸ್ಪತ್ರೆಗೆ ಬರುತ್ತಿದ್ದಂತೆ ಮಹಿಳೆ ಮಗ ಅವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ವೈದ್ಯನ ಎದೆ, ಕುತ್ತಿಗೆ, ಕೈಗಳಿಗೆಲ್ಲ ಇರಿದು ಗಾಯಗೊಳಿಸಿದ್ದಾನೆ.

    ವೈದ್ಯ ವರ್ಮಾ ಅವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗೇ ಆರೋಪಿಯನ್ನು ಬಂಧಿಸಲಾಗಿದೆ. (ಏಜೆನ್ಸೀಸ್​)

    ಧರ್ಮವನ್ನು ಪ್ರತಿನಿಧಿಸುವ ರಾಜಕಾರಣಿ ಓವೈಸಿಗೆ ಪ್ರಧಾನಿ ಪ್ರತಿಕ್ರಿಯೆ ಕೊಡುವ ಅಗತ್ಯವಿಲ್ಲ: ಬಿಜೆಪಿ ಎಂಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts